Just In
Don't Miss!
- News
ಭಾರತದಲ್ಲಿ 20.29 ಲಕ್ಷ ಜನರಿಗೆ ಕೊರೊನಾವೈರಸ್ ಲಸಿಕೆ
- Sports
ಸಯ್ಯದ್ ಮುಷ್ತಾಕ್ ಅಲಿ: ಹಿಮಾಚಲ ಪ್ರದೇಶ ಮಣಿಸಿದ ತಮಿಳುನಾಡು
- Education
ECIL Recruitment 2021: 3 ಟೆಕ್ನಿಕಲ್ ಅಧಿಕಾರಿ ಹುದ್ದೆಗಳಿಗೆ ನೇರ ಸಂದರ್ಶನ
- Automobiles
ವಿನೂತನ ಫೀಚರ್ಸ್ಗಳೊಂದಿಗೆ ನ್ಯೂ ಜನರೇಷನ್ ಟಾಟಾ ಸಫಾರಿ ಎಸ್ಯುವಿ ಅನಾವರಣ
- Finance
ಗಣರಾಜ್ಯೋತ್ಸವಕ್ಕೆ ಬಿಎಸ್ಎನ್ಎಲ್ನಿಂದ ವಿಶೇಷ ಆಫರ್
- Lifestyle
ನೀವು ಬಳಸಬಹುದಾದ ಡೈರಿ ಉತ್ಪನ್ನವಲ್ಲದ ಹಾಲುಗಳ ಬಗ್ಗೆ ಇಲ್ಲಿದೆ ಮಾಹಿತಿ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಹಿರಿಯ ನಟ ಡಿಂಗ್ರಿ ನಾಗರಾಜ್ ಅವರಿಗೆ ಗೌರವ ಡಾಕ್ಟರೇಟ್
ಸ್ಯಾಂಡಲ್ ವುಡ್ ನ ಹಿರಿಯ ನಟ ಡಿಂಗ್ರಿ ನಾಗರಾಜ್ ಅವರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಲಾಗಿದೆ. 'ವರ್ಚುವಲ್ ಆಫ್ ಯೂನಿವರ್ಸಿಟಿ ಫಾರ್ ಪೀಸ್ ಆಂಡ್ ಎಜುಕೇಷನ್' ಯುನಿವರ್ಸಿಟಿಯಿಂದ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗಿದೆ.
ನಿನ್ನೆ(ಜೂನ್ 8) ಭಾರತೀಯ ವಿದ್ಯಾಭವನ್ ನಲ್ಲಿ ನಡೆದ ಸಮಾರಂಭದಲ್ಲಿ ನಾಗರಾಜ್ ಅವರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಲಾಗಿದೆ. ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಸೇವೆ ಸಲ್ಲಿಸಿರುವ ನಾಗರಾಜ್ ಅವರಿಗೆ ಈಗ ಗೌರವ ಡಾಕ್ಟರೇಟ್ ಸಿಕ್ಕಿರುವುದು ಸಂತಸತಂದಿದೆ.
ಈ ಸಂತಸವನ್ನು ಸಾಮಾಜಿಕ ಜಾಲತಾಣದಲ್ಲಿ ಡಿಂಗ್ರಿ ನಾಗರಾಜ್ ಅವರ ಪುತ್ರ ರಾಜವರ್ಧನ್ ಹಂಚಿಕೊಂಡಿದ್ದಾರೆ. ಮಗ ರಾಜವರ್ಧನ್ ಕೂಡ ಈಗ ಚಿತ್ರರಂಗದಲ್ಲಿ ಮಿಂಚುತ್ತಿದ್ದಾರೆ. ಮುಂದೆ ಓದಿ..

30ವರ್ಷಕ್ಕು ಹೆಚ್ಚು ಕಾಲ ಕಲಾಸೇವೆ
ಕನ್ನಡ ಚಿತ್ರರಂಗದಲ್ಲಿ ಸುಮಾರು 30 ವರ್ಷಗಳಿಂದ ಕಲಾ ಸೇವೆ ಮಾಡಿಕೊಂಡು ಬಂದಿರುವ ಡಿಂಗ್ರಿ ನಾಗರಾಜ್ ಅವರ ದೀರ್ಘಕಾಲದ ಸಾಧನೆಗೆ ಡಾಕ್ಟರೇಟ್ ಎನ್ನುವ ಗರಿ ಸಿಕ್ಕಿದೆ. 'ವರ್ಚುವಲ್ ಆಫ್ ಯೂನಿವರ್ಸಿಟಿ ಫಾರ್ ಪೀಸ್ ಆಂಡ್ ಎಜುಕೇಷನ್' ಯುನಿವರ್ಸಿಟಿ ಈ ಗೌರವ ಡಾಕ್ಟರೇಟ್ ಅನ್ನು ನಾಗರಾಜ್ ಅವರಿಗೆ ಪ್ರದಾನ ಮಾಡಿದೆ.

165 ಚಿತ್ರಗಳಲ್ಲಿ ಅಭಿನಯ
ಹಿರಿಯ ನಟ ಡಿಂಗ್ರಿ ನಾಗರಾಜ್ ಸುಮಾರು 165ಕ್ಕು ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಹಾಸ್ಯ ಕಲಾವಿದರಾಗಿ ಕನ್ನಡ ಚಿತ್ರಾಭಿಮಾನಿಗಳನ್ನು ರಂಜಿಸಿದ್ದಾರೆ. 'ಸೋಲಿಲ್ಲದ ಸರದಾರ', 'ದೋರೆ', 'ಬಂಗಾರದ ಕಳಶ','ಶಿವ ಕೊಟ್ಟ ಸೌಭಾಗ್ಯ', 'ಮನೆಯೇ ಮಂತ್ರಾಲಯ' ಸೇರಿದಂತೆ ಅನೇಕ ಸಿನಿಮಾ ಬಣ್ಣ ಹಚ್ಚು ರಂಜಿಸಿದ್ದಾರೆ.

ಸಂತಸ ಹಂಚಿಕೊಂಡ ಮಗ ರಾಜವರ್ಧನ್
ಈ ಬಗ್ಗೆ ಡಿಂಗ್ರಿ ನಾಗರಾಜ್ ಅವರ ಮಗ ರಾಜವರ್ಧನ್ ಅವರು ಸಂತಸ ಹಂಚಿಕೊಂಡಿದ್ದಾರೆ."ಅಭಿನಂದನೆಗಳು ಅಪ್ಪ. ಇಷ್ಟು ವರ್ಷಗಳು ಕಷ್ಟಪಟ್ಟಿದ್ದಕ್ಕೆ ಈಗ ನಿನಗೆ ಗೌರವ ಡಾಕ್ಟರೇಟ್ ಸಿಕ್ಕಿದೆ. ನೀನು ಇದುವರೆಗೂ ಮಾಡಿರುವ ಸಾಧನೆಯನ್ನು ಗುರುತಿಸಿ ವರ್ಷಗಳ ನಂತರ ಈಗ ನಿನ್ನನ್ನ ಗುರುತಿಸಿರುವುದಕ್ಕೆ ಸಂತಸವಾಗುತ್ತೆ. ಮತ್ತೊಮ್ಮೆ ಅಭಿನಂದನೆಗಳು ಅಪ್ಪ" ಎಂದು ಅಪ್ಪನ ಸಾಧನೆಯನ್ನು ಹೆಮ್ಮೆಯಿಂದ ಭಣ್ಣಿಸಿದ್ದಾರೆ ರಾಜವರ್ಧನ್.

ರಾಜವರ್ಧನ್ ಸಿನಿ ಪಯಣ
ಈಗ ಡಿಂಗ್ರಿ ನಾಗರಾಜ್ ಅವರ ಮಗ ರಾಜವರ್ಧನ್ ಕನ್ನಡ ಚಿತ್ರರಂಗದಲ್ಲಿ ಮಿಂಚುತ್ತಿದ್ದಾರೆ. 2016ರಲ್ಲಿ ಫ್ಲೈ ಚಿತ್ರದ ಮೂಲಕ ಬಣ್ಣದ ಲೋಕದ ಜರ್ನಿ ಪ್ರಾರಂಭಿಸಿದ್ದಾರೆ. ಆ ನಂತರ ನೂರೊಂದು ನೆನಪು ಚಿತ್ರದಲ್ಲಿ ಅಭಿನಯಿಸಿದ್ದಾರೆ. ಸದ್ಯ ಬಿಚ್ಚುಗತ್ತಿ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.

ಬಹು ನಿರೀಕ್ಷೆಯ ಬಿಚ್ಚುಗತ್ತಿ ಸಿನಿಮಾ
ಬಹುನಿರೀಕ್ಷೆಯ ಬಿಚ್ಚುಗತ್ತಿ ಎಂಬ ಐತಿಹಾಸಿಕ ಸಿನಿಮಾ ಚಿತ್ರೀಕಣದಲ್ಲಿ ರಾಜವರ್ದನ್ ಬ್ಯುಸಿಯಾಗಿದ್ದಾರೆ. ಬರಮಣ್ಣನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಬರಮಣ್ಣ ನಾಯಕ ಕಾದಂಬರಿ ಆಧಾರಿತ ಚಿತ್ರ ಇದಾಗಿದೆ. ನಾಯಕಿಯಾಗಿ ಹರಿಪ್ರಿಯಾ ಕಾಣಿಸಿಕೊಂಡಿದ್ದಾರೆ. ಹರಿಸಂತೋಷ್ ನಿರ್ದೇಶನ ಮಾಡುತ್ತಿದ್ದಾರೆ.