»   » ಡಿಂಗ್ರಿ ನಾಗರಾಜ್ ಪುತ್ರನಿಗೆ ಹೊಡಿತು ಚಾನ್ಸು.!

ಡಿಂಗ್ರಿ ನಾಗರಾಜ್ ಪುತ್ರನಿಗೆ ಹೊಡಿತು ಚಾನ್ಸು.!

Posted By:
Subscribe to Filmibeat Kannada

ಡಿಂಗ್ರಿ ನಾಗರಾಜ್ ಪುತ್ರ ಬಣ್ಣ ಹಚ್ಚಿ ಒಂದು ವರ್ಷ ಕಳೆದಿಲ್ಲ. ನಟಿಸುತ್ತಿರುವ ಚೊಚ್ಚಲ ಚಿತ್ರದ ಶೂಟಿಂಗ್ ಇನ್ನೂ ಕಂಪ್ಲೀಟ್ ಆಗಿಲ್ಲ. ಅಷ್ಟು ಬೇಗ, ರಾಜವರ್ಧನ್ ಗೆ ಅವಕಾಶಗಳು ಹುಡುಕಿಕೊಂಡು ಬರುತ್ತಿದೆ.

ಯುವ ಪ್ರತಿಭೆಗಳು ಒಂದಾಗಿ ರೆಡಿಮಾಡುತ್ತಿರುವ 'ಫ್ಲೈ' ಸಿನಿಮಾದ ಶೂಟಿಂಗ್ ಅರ್ಧಕರ್ಧ ಮುಗಿದಿದೆ. ಸ್ಪೋರ್ಟ್ಸ್ ಮತ್ತು ಟ್ರಾವೆಲ್ ಅಡ್ವೆಂಚರ್ ಸಿನಿಮಾ ಆಗಿರುವುದರಿಂದ ಚಿತ್ರೀಕರಣಕ್ಕೆ ಹೆಚ್ಚು ಸಮಯ ಹಿಡಿಯುತ್ತಿದೆ.


Dingri Nagaraj's son Rajavardhan

ಇದೇ ಗ್ಯಾಪ್ ನಲ್ಲಿ ರಾಜವರ್ಧನ್ ಹೊಸ ಸಿನಿಮಾವೊಂದನ್ನ ಒಪ್ಪಿಕೊಂಡಿದ್ದಾರೆ. ಆ ಚಿತ್ರವೇ 'ಅಮರ ಚಿತ್ರ ಕಥಾ'. ಹೆಸರು ಕೇಳ್ತಿದ್ದ ಹಾಗೆ, ನಿಮಗೆ ರೆಟ್ರೋ ಫೀಲ್ ಸಿಗುವುದು ಸಹಜ. ಅದಕ್ಕೆ ತಕ್ಕ ಹಾಗೆ, ಈ ಚಿತ್ರ 70-80 ರ ದಶಕದ ಬ್ಯಾಕ್ ಡ್ರಾಪ್ ನಲ್ಲಿ ತಯಾರಾಗಲಿದೆ.


ಹೇಳಿ ಕೇಳಿ ಇದು ರೆಟ್ರೋ ಸ್ಟೈಲ್ ಸಿನಿಮಾ. ಆದ್ದರಿಂದ ತಮ್ಮ ಲುಕ್ಸ್ ಬಗ್ಗೆ ಪ್ರಯೋಗ ಮಾಡಲಿದ್ದಾರಂತೆ ರಾಜವರ್ಧನ್. ಇದಕ್ಕಾಗಿ ಅದಾಗಲೇ ತಯಾರಿಗಳನ್ನ ನಡೆಸಿದ್ದು, ಚಿತ್ರಕ್ಕಾಗಿ ಸ್ಪೆಷಲ್ ಫೋಟೋಶೂಟ್ ಕೂಡ ನಡೆದಿದೆ. ಅದರ ಎಕ್ಸ್ ಕ್ಲೂಸಿವ್ ಸ್ಟಿಲ್ ಇಲ್ಲಿದೆ.


Dingri Nagaraj's son Rajavardhan

ಎಪ್ರಿಲ್ ಹೊತ್ತಿಗೆ ಈ ಚಿತ್ರ ಸೆಟ್ಟೇರಲಿದೆ. 'ಅಮರ ಚಿತ್ರ ಕಥಾ' ಕೂಡ ಯುವ ತಂಡ ಸಿದ್ಧಪಡಿಸುತ್ತಿರುವ ಚಿತ್ರ. ನಾಯಕಿ ಮತ್ತು ಇತರೆ ಪಾತ್ರವರ್ಗ ಇನ್ನೂ ಸೆಲೆಕ್ಷನ್ ಹಂತದಲ್ಲಿದೆ.


ಅಂದ್ಹಾಗೆ, ಈ ಚಿತ್ರಕ್ಕೋಸ್ಕರ ರಾಜವರ್ಧನ್ ಕಲರಿಪಯಟ್ಟು ಸಹ ಕಲಿಯುತ್ತಿದ್ದಾರಂತೆ. ಈಗಷ್ಟೇ ಸ್ಯಾಂಡಲ್ ವುಡ್ ನಲ್ಲಿ ಅಂಬೆಗಾಲಿಡುತ್ತಿರುವ ರಾಜವರ್ಧನ್, ಪಾತ್ರಕ್ಕೋಸ್ಕರ ಕಟ್ಟುನಿಟ್ಟಾಗಿ ಬೆವರಿಳಿಸುತ್ತಿದ್ದಾರೆ.


ಅವರ ಪರಿಶ್ರಮಕ್ಕೆ ತಕ್ಕಂತೆ ಆಫರ್ಸ್ ಅರಸಿ ಬರುತ್ತಿದೆ. ಅಭಿನಯಿಸಿದ ಮೊದಲ ಸಿನಿಮಾ ರಿಲೀಸ್ ಆಗುವುದಕ್ಕೂ ಮುನ್ನವೇ 'ರಾಜವರ್ಧನ್' ಎರಡೆರಡು ಚಿತ್ರಗಳಲ್ಲಿ ಬಿಜಿಯಾಗಿದ್ದಾರೆ ಅಂದ್ರೆ ಲಾಟರಿ ಹೊಡೆದ ಹಾಗೆ ಲೆಕ್ಕ. (ಫಿಲ್ಮಿಬೀಟ್ ಕನ್ನಡ)

English summary
Dingri Nagaraj's son Rajavardhan who made entry into Sandalwood through the movie 'Fly' last year, is gearing up for his next movie titled 'Amara Chitra Katha'.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada