»   » 'ಕಪಿಚೇಷ್ಟೆ' ಆರಂಭಿಸಿದ 'ಭಜರಂಗಿ' ನಿರ್ದೇಶಕ ಎ ಹರ್ಷ

'ಕಪಿಚೇಷ್ಟೆ' ಆರಂಭಿಸಿದ 'ಭಜರಂಗಿ' ನಿರ್ದೇಶಕ ಎ ಹರ್ಷ

Posted By:
Subscribe to Filmibeat Kannada

ಡ್ಯಾನ್ಸ್ ಮಾಸ್ಟರ್ ಕಮ್ ಯಶಸ್ವಿ ನಿರ್ದೇಶಕ ಎ ಹರ್ಷ ಅವರು 'ಜೈ ಮಾರುತಿ 800' ಚಿತ್ರದ ನಂತರ ಇದೀಗ ಸದ್ದಿಲ್ಲದೇ ಮತ್ತೊಂದು ಸಿನಿಮಾದ ಶೂಟಿಂಗ್ ಆರಂಭಿಸಿದ್ದಾರೆ. ಹೊಸ ಪ್ರತಿಭೆಗಳನ್ನು ಹಾಕಿಕೊಂಡು 'ಕಪಿಚೇಷ್ಟೆ' ಎಂಬ ಸಿನಿಮಾ ಮಾಡುತ್ತಿದ್ದಾರೆ.

ಸದಾ ಆಂಜನೇಯನ ಮೊರೆ ಹೋಗುವ ಹರ್ಷ ಅವರು, ಈ ಬಾರಿ ಮತ್ತೆ ಹೊಸ ಸಿನಿಮಾದಲ್ಲೂ ವಾಯುಪುತ್ರ ವೀರ ಆಂಜನೇಯನನ್ನು ನೆನಪಿಸಿಕೊಂಡಿದ್ದಾರೆ. ಈ ಮೊದಲು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಕಾಮಿಡಿ ಕಿಂಗ್ ಶರಣ್ ಮತ್ತಿತ್ತರ ಸ್ಟಾರ್ ನಟರಿಗೆ ಸಿನಿಮಾ ಮಾಡಿ ಯಶಸ್ವಿಯಾಗಿದ್ದ ಹರ್ಷ ಅವರು ಈ ಬಾರಿ ಹೊಸಬರಿಗೆ ಮಣೆ ಹಾಕಿದ್ದಾರೆ.['ಭಜರಂಗಿ' ನಿರ್ದೇಶಕ ಹರ್ಷ ರವರ ಇದೆಂಥ 'ಕಪಿಚೇಷ್ಟೆ'?]

Director A Harsha starts his new movie 'Kapicheste'

ತಮ್ಮ ಪರಿಚಯದ ಹುಡುಗ ಮೋಹನ್ ಎಂಬುವವರನ್ನು ಎ ಹರ್ಷ ಅವರು, 'ಕಪಿಚೇಷ್ಟೆ' ಚಿತ್ರದ ಮೂಲಕ ಬೆಳ್ಳಿತೆರೆಗೆ ಪರಿಚಯಿಸುತ್ತಿದ್ದಾರೆ. ಇವರಿಗೆ ನಾಯಕಿಯಾಗಿ 'ತರ್ಲೆ ನನ್ಮಕ್ಳು' ಮತ್ತು 'ಪ್ರೀತಿಯ ರಾಯಭಾರಿ' ಖ್ಯಾತಿಯ ನಟಿ ಅಂಜನಾ ದೇಶಪಾಂಡೆ ಅವರು ಕಾಣಿಸಿಕೊಳ್ಳುತ್ತಿದ್ದಾರೆ.[ಮತ್ತೆ ಒಂದಾದ ಹರ್ಷ-ಶಿವಣ್ಣ, ಚಿತ್ರದ ಹೆಸರೇನು ಗೊತ್ತಾ?]

Director A Harsha starts his new movie 'Kapicheste'

ರಾಶಿ ಕಂಬೈನ್ಸ್ ಅಡಿಯಲ್ಲಿ ಭಾಸ್ಕರ್ ರಾಶಿ ಅವರು ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದು, 'ಜೈ ಮಾರುತಿ 800' ಚಿತ್ರಕ್ಕೆ ಕ್ಯಾಮೆರಾ ಕೈ ಚಳಕ ತೋರಿದ್ದ ಸ್ವಾಮಿ ಕೆ ಅವರು ಛಾಯಾಗ್ರಹಣದ ಜವಾಬ್ದಾರಿ ಹೊತ್ತಿದ್ದಾರೆ. ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರು ಮ್ಯೂಸಿಕ್ ಕಂಪೋಸ್ ಮಾಡಲಿದ್ದಾರೆ.

ಈಗಾಗಲೇ 'ಕಪಿಚೇಷ್ಟೆ' ಚಿತ್ರದ ಶೂಟಿಂಗ್ ಆರಂಭವಾಗಿದ್ದು, ಚಿತ್ರದ ಕೆಲಸಗಳು ಭರದಿಂದ ಸಾಗುತ್ತಿದೆ.

English summary
Kannada Director A Harsha who had taken a break from directing after Sharan's 'Jai Maruti 800' is back to direction with yet another new film called 'Kapicheste'.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X