For Quick Alerts
  ALLOW NOTIFICATIONS  
  For Daily Alerts

  ಪ್ರೇಮ್ ಅಡ್ಡಕ್ಕೆ ಭಾರಿ ಡಿಮ್ಯಾಂಡ್, ಪ್ರೇಮ್ ಖುಷ್

  |
  ನಿರ್ದೇಶಕ, ನಟ ಪ್ರೇಮ್ ಈಗ ಭಾರಿ ಖುಷಿಯಲ್ಲಿದ್ದಾರೆ. ಕಾರಣ, ಮೊದಲಿನಿಂದಲೂ ಒಂದಲ್ಲ ಇನ್ನೊಂದು ವಿವಾದಕ್ಕೆ ಕಾರಣವಾಗುತ್ತಿರುವ ಪ್ರೇಮ್ ನಟನೆಯ ಪ್ರೇಮ್ ಅಡ್ಡ ಚಿತ್ರಕ್ಕೆ ಈಗ ಭಾರಿ ಡಿಮ್ಯಾಂಡ್ ಕ್ರಿಯೇಟ್ ಆಗಿದೆ. ಆ ಚಿತ್ರದಲ್ಲಿರುವ ಮೇಲುಕೋಟೆ ಹಾಡು ವಿವಾದಕ್ಕೆ ಕಾರಣವಾಗಿದ್ದರೂ ಅದರಿಂದ ಚಿತ್ರಕ್ಕೆ ಭಾರಿ ಲಾಭವಾಗಿರುವುದು ಖಂಡಿತ ಎಂದಿದೆ ಪ್ರೇಮ್ ಅಡ್ಡ ಚಿತ್ರತಂಡ.

  ಮೇಲುಕೋಟೆ ಹಾಡು ಮಾತ್ರವಲ್ಲ, ಪ್ರೇಮ್ ಅಡ್ಡ ಚಿತ್ರದ ಎಲ್ಲಾ ಹಾಡುಗಳಿಗೂ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆಯಂತೆ. ಆಡಿಯೋ ಕಂಪನಿಯವರೇ ಅದನ್ನು ಬಾಯ್ಬಿಟ್ಟು ಹೇಳಿದ್ದಲ್ಲದೇ, ಇನ್ನೂ ಸಾಕಷ್ಟು ದುಡ್ಡು ಮಾಡುವುದು ಖಂಡಿತ ಎಂದಿದ್ದಾರಂತೆ. ವಿವಾದವಾಯ್ತು, ಚಿತ್ರದ ಬಗ್ಗೆ ಅಪಪ್ರಚಾರವೂ ಪ್ರಾರಂಭದಲ್ಲಿಯೇ ನಡೆದುಹೋಯ್ತು, ಆದರೆ ಅದ್ಯಾವುದರಿಂದಲೂ ಚಿತ್ರಕ್ಕೆ ನಷ್ಟವಾಗಿಲ್ಲ.

  ಪ್ರೇಮ್ ನಟನೆಯ ಪ್ರೀತಿ ಏಕೆ ಭೂಮಿ ಮೇಲಿದೆ ಚಿತ್ರ ಸೋತಮೇಲೆ ಪ್ರೇಮ್ ನಟನಾಗುವುದಕ್ಕೆ ಲಾಯಕ್ಕೇ ಎಂಬ ಪ್ರಶ್ನೆ ಉದ್ಯಮದಲ್ಲಿ ಹಾಗೂ ಕನ್ನಡ ಸಿನಿಪ್ರೇಕ್ಷಕವಲಯದಲ್ಲಿ ಕೇಳಿಬಂದಿತ್ತು. ನಂತರ ಶಿವರಾಜ್ ಕುಮಾರ್ ಅಭಿನಯ ಹಾಗೂ ಪ್ರೇಮ್ ನಿರ್ದೇಶನದ 'ಜೋಗಯ್ಯ' ಚಿತ್ರ ಸೋತ ಮೇಲೆ ಪ್ರೇಮ್ ನಿರ್ದೇಶನದ ಬಗ್ಗೆಯೂ ಅಪಸ್ವರ ಕೇಳಿಬಂತು. ಆದರೆ ಇದೀಗ ಬಿಡುಗಡೆ ಹಂತಕ್ಕೆ ಬಂದು ನಿಂತಿರುವ 'ಪ್ರೇಮ್ ಅಡ್ಡ' ಎಲ್ಲ ಪ್ರಶ್ನೆ, ಅಪಸ್ವರಗಳಿಗೂ ಉತ್ತರ ನೀಡಿದರೆ ಆಶ್ಚರ್ಯವಿಲ್ಲ.

  ಪ್ರೇಮ್ ಅಡ್ಡ ಬಿಡುಗಡೆ ನಂತರ ಪ್ರೇಮ್, ಅವರ ಶಿಷ್ಯ ಗುಬ್ಬಿ ಖ್ಯಾತಿಯ ವಿಜಯ್ ಚಿತ್ರವೊಂದರಲ್ಲಿ ನಟಿಸುವುದು ಪಕ್ಕಾ ಆಗಿಗೆ. ಹಾಗಂತ, ಪ್ರೇಮ್ ನಟನಾಗಿಯೇ ಮುಂದುವರಿಯುತ್ತಾರೆ ಎಂಬ ವಾತಾವರಣವೂ ಇಲ್ಲ. ಕಾರಣ, ವಿಜಯ್ ನಿರ್ದೇಶನ, ಪ್ರೇಮ್ ನಟನೆ ಚಿತ್ರದ ನಂತರ ರಕ್ಷಿತಾ ನಿರ್ಮಾಣ ಹಾಗೂ ಪ್ರೇಮ್ ನಿರ್ದೇಶನದಲ್ಲಿ ಕಿಚ್ಚ ಸುದೀಪ್ ಅಭಿನಯದ ಚಿತ್ರ ಬರಲಿದೆ. ಸದ್ಯಕ್ಕೆ ಆ ಚಿತ್ರ ಸ್ಕ್ರಿಪ್ಟ್ ಹಂತದಲ್ಲಿದೆ. (ಒನ್ ಇಂಡಿಯಾ ಕನ್ನಡ)

  English summary
  Director Prem acted upcoming movie 'Prem Adda' got High Response in its released Audio through the songs 'Melukote...' and others. The Prem Adda team told that the movies is getting lot of expectation now. 
 
  Sunday, October 14, 2012, 15:26
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X