Don't Miss!
- News
Breaking: ರಾಜಸ್ಥಾನದ ಭರತ್ಪುರದಲ್ಲಿ ಚಾರ್ಟರ್ಡ್ ವಿಮಾನ ಪತನ!
- Technology
ಜಿಯೋಗೆ ಸೆಡ್ಡು ಹೊಡೆಯುತ್ತಿದೆಯಾ ಏರ್ಟೆಲ್; ಜಿಯೋ ಸೇವೆ ಬೇಡ ಎಂದವರ ಸಂಖ್ಯೆ ಎಷ್ಟು ಗೊತ್ತಾ!?
- Sports
ನಾವು ಆಡುವುದನ್ನು ನೋಡಲು ಜನ ಬಂದಿಲ್ಲ: ಆತನಿಗಾಗಿ ಜನ ಬಂದಿದ್ದಾರೆ ಎಂದ ನ್ಯೂಜಿಲೆಂಡ್ ಕ್ರಿಕೆಟಿಗ
- Lifestyle
ಬೆಳ್ಳಿಯ ಆಭರಣಗಳು ಹೊಳಪಿನಿಂದ ಕೂಡಿರಲು ಈ ಟ್ರಿಕ್ಸ್ ಬಳಸಿ
- Automobiles
ಟಾಟಾದ ಜನಪ್ರಿಯ ಕಾರುಗಳ ಬೆಲೆ ಏರಿಕೆ: ಘೋಷಣೆ
- Finance
ಹಿಂಡನ್ಬರ್ಗ್ vs ಅದಾನಿ ನಡುವೆ ಎಲ್ಐಸಿ, ಎಸ್ಬಿಐ ಉಳಿತಾಯ ರಿಸ್ಕ್ನಲ್ಲಿದೆಯೇ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
'ಗರುಡ ಗಮನ..' ನಂತರ ಯಾವ ಸಿನಿಮಾ? ರಾಜ್ ಬಿ ಶೆಟ್ರು ಕೊಟ್ರು ಉತ್ತರ
'ಒಂದು ಮೊಟ್ಟೆಯ ಕತೆ', 'ಗರುಡ ಗಮನ ವೃಷಭ ವಾಹನ' ಅಂಥಹಾ ಅತ್ಯುತ್ತಮ ಸಿನಿಮಾಗಳನ್ನು ನೀಡಿರುವ ರಾಜ್ ಬಿ ಶೆಟ್ಟಿ ಪೋಷಕ ಪಾತ್ರದಲ್ಲಿ ನಟಿಸಿರುವ '777 ಚಾರ್ಲಿ' ಸಿನಿಮಾ ಮುಂದಿನ ವಾರ ಬಿಡುಗಡೆ ಆಗಲಿದೆ.
ದಶಕಗಳ ಕಾಲ ನೆನಪುಳಿವ 'ಗರುಡ ಗಮನ ವೃಷಭ ವಾಹನ' ಸಿನಿಮಾ ನೀಡಿರುವ ರಾಜ್ ಬಿ ಶೆಟ್ಟಿಯವರ ಮುಂದಿನ ಸಿನಿಮಾ ಯಾವುದಾಗಿರಲಿದೆ ಎಂಬ ಕುತೂಹಲ ಸಿನಿಪ್ರೇಮಿಗಳಲ್ಲಿ ಮನೆ ಮಾಡಿದೆ.
ವಿವಿಧ
ರಾಜ್ಯಗಳ
21
ನಗರಗಳಲ್ಲಿ
'777
ಚಾರ್ಲಿ'
ಪ್ರೀಮಿಯರ್
ಶೋ!
'777 ಚಾರ್ಲಿ' ಸಿನಿಮಾ ಸಂದರ್ಭದಲ್ಲಿ ಮಾಧ್ಯಮಗಳೊಟ್ಟಿಗೆ ಮಾತನಾಡಿರುವ ರಾಜ್ ಬಿ ಶೆಟ್ಟಿ ತಮ್ಮ ಮುಂದಿನ ಯೋಜನೆಯ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರ ನೀಡಿದ್ದಾರೆ.
ನಿಮ್ಮ ಮುಂದಿನ ಸಿನಿಮಾ ಯಾವುದು? ಎಂಬ ಪ್ರಶ್ನೆಗೆ ಉತ್ತರಿಸಿರುವ ರಾಜ್ ಬಿ ಶೆಟ್ಟಿ, 'ಗ್ಯಾಂಗ್‌ಸ್ಟರ್ ಮತ್ತು ಕಾಮಿಡಿ ಸಿನಿಮಾ ಮಾಡಬಾರದು ಎಂಬ ನಿಯಮ ಹಾಕಿಕೊಂಡಿದ್ದೇನೆ. ಆದರೆ ನನ್ನ ಮುಂದಿನ ಸಿನಿಮಾ ಯಾವುದಾಗಿರಲಿದೆ ಎಂಬುದು ನನಗೆ ಗೊತ್ತಿಲ್ಲ'' ಎಂದಿದ್ದಾರೆ.

ಗೊತ್ತಿಲ್ಲದ ವಿಷಯ ಹೆಕ್ಕಿ ಸಿನಿಮಾ ಮಾಡಬೇಕು: ರಾಜ್ ಬಿ ಶೆಟ್ಟಿ
''ಗೊತ್ತಿಲ್ಲದ ವಿಷಯವನ್ನು ಹೆಕ್ಕಿಕೊಳ್ಳಬೇಕು. ಆ ವಿಷಯಗಳು ನಿಮಗೆ ಪೂರ್ಣ ಗೊತ್ತಾಗುವವರೆಗೆ ಸಿನಿಮಾ ಪ್ರಾರಂಭ ಮಾಡಬಾರದು. ಗೊತ್ತಾದ ಮೇಲಷ್ಟೆ ಸಿನಿಮಾ ಪ್ರಾರಂಭ ಮಾಡಬೇಕು ಇದನ್ನು ನಾನು ನಂಬಿದ್ದೇನೆ. ಈ ಪ್ರಕ್ರಿಯೆಯಿಂದ ಹೊಸದನ್ನು ಕಲೀತೀರ. ಇದರಿಂದ ಸಿನಿಮಾ ಫ್ರೆಶ್ ಆಗಿ ಕಾಣುತ್ತದೆ'' ಎಂದಿದ್ದಾರೆ ರಾಜ್ ಬಿ ಶೆಟ್ಟಿ.

ನಿಯಮ ಹಾಕಿಕೊಂಡಿದ್ದೇನೆ: ರಾಜ್ ಬಿ ಶೆಟ್ಟಿ
''ಕಾಮಿಡಿ ಮತ್ತು ಗ್ಯಾಂಗ್‌ಸ್ಟರ್ ಎರಡೂ ನನಗೆ ಗೊತ್ತಿಲ್ಲದ ವಿಷಯ. ಅದನ್ನು ಆಯ್ಕೆ ಮಾಡಿಕೊಂಡು ಸಿನಿಮಾ ಮಾಡಿದ್ದೇನೆ. ಈಗ ಮುಂದೇನು ಮಾಡುತ್ತೇನೆ ಅದೂ ನನಗೆ ಗೊತ್ತಿರಲ್ಲ. ಅದನ್ನೆಲ್ಲ ಗೊತ್ತು ಮಾಡಿಕೊಂಡು ಸಿನಿಮಾ ಮಾಡಲು ಸ್ವಲ್ಪ ಟೈಮ್ ಬೇಕು. ನನಗೆ ಒಂದರ ನಂತರ ಒಂದು ಸಿನಿಮಾ ಮಾಡಬೇಕು ಎಂಬ ತುರ್ತು ಇಲ್ಲ ಹಾಗಾಗಿ ಈಗ ಸದ್ಯಕ್ಕೆ ಆರಾಮವಾಗಿ ವಾಲಿಬಾಲ್ ಆಡಿಕೊಂಡು ಓಡಾಡಿಕೊಂಡು ಇದ್ದೀನಿ'' ಎಂದಿದ್ದಾರೆ ರಾಜ್ ಬಿ ಶೆಟ್ಟಿ.

ಯಾವ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ರಾಜ್ ಬಿ ಶೆಟ್ಟಿ
ನಿರ್ದೇಶನ ಬಿಡಿ ಯಾವ ಸಿನಿಮಾದಲ್ಲಿ ನಟಿಸುತ್ತಿದ್ದೀರ? ಎಂಬ ಪ್ರಶ್ನೆಗೆ ಉತ್ತರಿಸಿದ ರಾಜ್ ಬಿ ಶೆಟ್ಟಿ, ''ನಾನು ಯಾವುದೇ ಸಿನಿಮಾದಲ್ಲಿ ಬ್ಯುಸಿ ಇಲ್ಲ. ಯಾವ ಸಿನಿಮಾವನ್ನೂ ಸಹ ನಾನು ಒಪ್ಪಿಕೊಂಡಿಲ್ಲ. ನನ್ನನ್ನು ಪೂರ್ಣಗೊಳಿಸುವಂಥಹಾ ಸಿನಿಮಾಗಳನ್ನು ಮಾಡಬೇಕು ಎಂಬ ಕಾರಣಕ್ಕೆ ನಾನು ಯಾವ ಸಿನಿಮಾದಲ್ಲಿಯೂ ಮಾಡುತ್ತಿಲ್ಲ. ಅಂಥಹಾ ಕತೆಗಳು ಬಂದರೆ, ನನ್ನನ್ನು 'ಕಂಪ್ಲೀಟ್' ಮಾಡುವಂತ ಸಿನಿಮಾ ಆಗಬೇಕು. ಅಂಥಹಾ ಸಿನಿಮಾ ಸಿಗುತ್ತೆ ಅಂದುಕೊಂಡಿದ್ದೇನೆ, ಸಿಕ್ಕಾಗ ಖಂಡಿತ ಮಾಡುತ್ತೇನೆ'' ಎಂದಿದ್ದಾರೆ ರಾಜ್ ಬಿ ಶೆಟ್ಟಿ.

ಜೂನ್ 10 ಕ್ಕೆ ಬಿಡುಗಡೆ ಆಗಲಿದೆ '777 ಚಾರ್ಲಿ'
ರಾಜ್ ಬಿ ಶೆಟ್ಟಿ ಪ್ರಸ್ತುತ '777 ಚಾರ್ಲಿ' ಸಿನಿಮಾದಲ್ಲಿ ನಟಿಸಿದ್ದಾರೆ. ಕಿರಣ್ ರಾಜ್ ನಿರ್ದೇಶನ ಮಾಡಿರುವ ಈ ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿ ನಾಯಕ ಪಾತ್ರದಲ್ಲಿ ನಟಿಸಿದ್ದು, ನಾಯಿ ಹಾಗೂ ನಾಯಕ ನಟನ ನಡುವಿನ ಕತೆಯನ್ನು ಈ ಸಿನಿಮಾ ಒಳಗೊಂಡಿದೆ. ಸಿನಿಮಾವು ಜೂನ್ 10 ಕ್ಕೆ ಕನ್ನಡ, ತೆಲುಗು, ತಮಿಳು ಹಾಗೂ ಹಿಂದಿ ಭಾಷೆಗಳಲ್ಲಿ ಬಿಡುಗಡೆ ಆಗುತ್ತಿದೆ. ಸಿನಿಮಾಕ್ಕೆ ರಕ್ಷಿತ್ ಶೆಟ್ಟಿ ಹಾಗೂ ಜಿಎಸ್ ಗುಪ್ತ ಬಂಡವಾಳ ಹೂಡಿದ್ದಾರೆ. ರಕ್ಷಿತ್ ಶೆಟ್ಟಿಯ ಮೊದಲ ಪ್ಯಾನ್ ಇಂಡಿಯಾ ಸಿನಿಮಾ ಇದು.