»   » ಇವ್ರು 'ರಾಜರಥ' ಸಿನಿಮಾವನ್ನು ಐದು ಸಾವಿರ ಬಾರಿ ನೋಡಿದ್ದಾರಂತೆ

ಇವ್ರು 'ರಾಜರಥ' ಸಿನಿಮಾವನ್ನು ಐದು ಸಾವಿರ ಬಾರಿ ನೋಡಿದ್ದಾರಂತೆ

Posted By:
Subscribe to Filmibeat Kannada
ಇವ್ರು 'ರಾಜರಥ' ಸಿನಿಮಾವನ್ನು ಐದು ಸಾವಿರ ಬಾರಿ ನೋಡಿದ್ದಾರಂತೆ | Filmibeat Kannada

'ರಾಜರಥ' ಸಿನಿಮಾ ಇಂದು ರಾಜ್ಯಾದಂತ್ಯ ಬಿಡುಗಡೆಯಾಗಿದೆ. ಸಿನಿಮಾ ನೋಡಿದ ಅನೇಕರು ಚಿತ್ರ ತುಂಬ ನಿಧಾನ ಇದೆ. 'ರಂಗಿತರಂಗ' ಮಟ್ಟಕ್ಕೆ 'ರಾಜರಥ' ಸಿನಿಮಾ ಇಲ್ಲ ಎಂದು ಹೇಳುತ್ತಿದ್ದಾರೆ. ಆದರೆ 'ರಾಜರಥ' ಸಿನಿಮಾವನ್ನು ಒಬ್ಬರು ಐದು ಸಾವಿರ ಬಾರಿ ನೋಡಿದ್ದಾರಂತೆ.

ಅಬ್ಬಾ... ಐದು ಸಾವಿರ ಬಾರಿ ಒಂದು ಸಿನಿಮಾವನ್ನು ನೋಡುವುದಕ್ಕೆ ಸಾಧ್ಯನಾ ಎಂದು ನಿಮಗೆ ಆಶ್ಚರ್ಯ ಆಗಬಹುದು. ಆದರೆ ಇದು ಸತ್ಯ. ಅಂದಹಾಗೆ, 'ರಾಜರಥ' ಚಿತ್ರವನ್ನು ಐದು ಸಾವಿರ ಬಾರಿ ನೋಡಿದವರು ಬೇರೆ ಯಾರು ಅಲ್ಲ ಸಿನಿಮಾದ ನಿರ್ದೇಶಕ ಅನೂಪ್ ಭಂಡಾರಿ. ಅನೂಪ್ ಸಿನಿಮಾದ ಚಿತ್ರದ ಬಿಡುಗಡೆಗೆ ಮುಂಚೆ ಮಾತನಾಡಿ ''ರಂಗಿತರಂಗ' ಸಿನಿಮಾಕ್ಕಿಂತ 'ರಾಜರಥ' ಸಿನಿಮಾಗೆ ಹೆಚ್ಚು ಕಷ್ಟ ಪಟ್ಟಿದ್ದೇನೆ. ಎರಡು ವರ್ಷ ಈ ಸಿನಿಮಾಗಾಗಿ ಮೀಸಲಿಟ್ಟಿದ್ದೇನೆ. ಇದುವರೆಗೆ ಐದು ಸಾವಿರ ಸಲ ಸಿನಿಮಾ ನೋಡಿದರು ನನಗೆ ಬೋರ್ ಆಗಲಿಲ್ಲ'' ಎಂದು ಅನೂಪ್ ಭಂಡಾರಿ ಹೇಳಿದ್ದಾರೆ. ಆದರೆ ಅದೇಕೋ ಅನೇಕರು ಸಿನಿಮಾ ಒಕೆ ಒಕೆ ಅಷ್ಟೆ ಎಂದು ಹೇಳುತ್ತಿದ್ದಾರೆ.

ವಿಮರ್ಶೆ: ಅಲ್ಲಲ್ಲಿ ನಿಂತು ಮುಂದೆ ಸಾಗುವ 'ರಾಜರಥ'

Director Anup Bandari watched Rajaratha movie 5000 times

'ರಾಜರಥ' ವಿಮರ್ಶೆ:

ರಾಜರಥ' ಎಂಬ ಹೈಟೆಕ್ ಬಸ್ ನಲ್ಲಿ ಚೆನ್ನೈಗೆ ಹೊರಟಿರುವ ಪ್ರಯಾಣಿಕರ ಕಥೆಯೇ ಈ ಸಿನಿಮಾ. ಬಸ್ ನಲ್ಲಿ ಪ್ರಯಾಣ ಬೆಳೆಸುವವರ ಪರಿಚಯ ಒಂದೆಡೆ ಆದರೆ, ಇದ್ದಕ್ಕಿದ್ದಂತೆ ಭುಗಿಲೇಳುವ ಹಿಂಸಾಚಾರದ ಹಿನ್ನಲೆ ಇನ್ನೊಂದು ಕಡೆ. ಹಿಂಸಾಚಾರದಲ್ಲಿ ಪ್ರಯಾಣಿಕರು ಸೇಫ್ ಆಗ್ತಾರಾ, ಇಲ್ವಾ ಅನ್ನೋದೇ ಕ್ಲೈಮ್ಯಾಕ್ಸ್. 'ರಾಜರಥ' ಸಿನಿಮಾದಲ್ಲಿ ಮನರಂಜನೆ ಜೊತೆಗೆ ಉತ್ತಮ ಸಂದೇಶ ಕೂಡ ಇದೆ. ಕೀಳುಮಟ್ಟದ ರಾಜಕೀಯದಿಂದಾಗಿ ಅಮಾಯಕರು ಬಲಿಯಾಗುತ್ತಿರುವ ಇಂದಿನ ಸಮಾಜದಲ್ಲಿ ಹಿಂಸೆಗೆ ಹಿಂಸೆಯೇ ಉತ್ತರ ಅಲ್ಲ ಎಂಬ ಸಂದೇಶ 'ರಾಜರಥ' ಚಿತ್ರದಲ್ಲಿದೆ. ಭಂಡಾರಿ ಸಹೋದರರ 'ರಾಜರಥ' ಸಿನಿಮಾ ಒಮ್ಮೆ ನೋಡಬಹುದು.

English summary
Director Anup Bandari watched Rajaratha movie 5000 times.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X