»   » ಪವರ್ ಸ್ಟಾರ್ ಗೆ ಆಕ್ಷನ್-ಕಟ್ ಹೇಳ್ತಾರಾ?, ರಂಗಿ ನಿರ್ದೇಶಕ

ಪವರ್ ಸ್ಟಾರ್ ಗೆ ಆಕ್ಷನ್-ಕಟ್ ಹೇಳ್ತಾರಾ?, ರಂಗಿ ನಿರ್ದೇಶಕ

Posted By:
Subscribe to Filmibeat Kannada

ಕನ್ನಡ ಚಿತ್ರರಂಗ ಕಂಡ ಅಸಾಮಾನ್ಯ ಹಾಗೂ ಚೊಚ್ಚಲ ಹಿಟ್ ನಿರ್ದೇಶಕ ಅನುಪ್ ಭಂಡಾರಿ ಅವರ 'ರಂಗಿತರಂಗ' ಎಲ್ಲೆಡೆ ಭರ್ಜರಿ ಯಶಸ್ಸು ಗಳಿಸಿದ ನಂತರ ಕೈ ಕಟ್ಟಿ ಕೂರದ ನಿರ್ದೇಶಕರು ಇದೀಗ ಹೊಸ ಪ್ರಾಜೆಕ್ಟ್ ನ ಕಡೆ ಕಣ್ಣು ಹಾಯಿಸುತ್ತಿದ್ದಾರೆ.

ಸದ್ಯಕ್ಕೆ ನಿರ್ದೇಶಕ ಅನುಪ್ ಭಂಡಾರಿ ಅಭಿಮಾನಿಗಳ ಜೊತೆಗೆ ಅಪ್ಪು ಫ್ಯಾನ್ಸ್ ಗೆ ಒಂದು ಗುಡ್ ನ್ಯೂಸ್. ಅದೇನಪ್ಪಾ ಅಂದ್ರೆ ಬಲ್ಲ ಮಾಹಿತಿಗಳ ಪ್ರಕಾರ ನಿರ್ದೇಶಕ ಅನುಪ್ ಭಂಡಾರಿ ಅವರು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಮುಂದಿನ ಚಿತ್ರಕ್ಕೆ ಆಕ್ಷನ್-ಕಟ್ ಹೇಳಲಿದ್ದಾರಂತೆ.

Director Anup Bhandari to direct Puneeth in next film

ವಿಭಿನ್ನ ಕಥಾಹಂದರದೊಂದಿಗೆ ಸಸ್ಪೆನ್ಸ್-ಥ್ರಿಲ್ಲರ್ ಮೂಲಕ ಪ್ರೇಕ್ಷರಲ್ಲಿ ಭಾರಿ ಕುತೂಹಲ ಮೂಡಿಸಿದ್ದ ಭಂಡಾರಿ ಸಹೋದರರ 'ರಂಗಿತರಂಗ' [ಚಿತ್ರ ವಿಮರ್ಶೆ : 'ರಂಗಿತರಂಗ' ಬಲು ರೋಚಕ]ಮುಂದಿನ ಚಿತ್ರ ಯಾವುದಿರಬಹುದು ಎಂಬ ಅಭಿಮಾನಿಗಳ ಕುತೂಹಲದ ಪ್ರಶ್ನೆಗಳಿಗೆ ಇದೀಗ ತೆರೆ ಬೀಳುವ ಸಮಯ ಹತ್ತಿರವಾಗಿದೆ.

ಮೂಲಗಳ ಪ್ರಕಾರ ಅನುಪ್ ಭಂಡಾರಿ ಎರಡನೇ ಚಿತ್ರದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಚಿತ್ರಕ್ಕೆ ನಿರ್ದೇಶನ ಮಾಡುವ ಅವಕಾಶ ಪಡೆದಿದ್ದಾರೆ. ಜೊತೆಗೆ ಇದೇ ತಿಂಗಳ 21 ರಂದು ಚಿತ್ರಕ್ಕೆ ಮೂಹೂರ್ತ ಫಿಕ್ಸ್ ಮಾಡುವ ಸಂಭವವಿದೆ.

ಅಂದಹಾಗೆ ಇನ್ನೊಂದು ವಿಶೇಷ ಏನಪ್ಪಾ ಅಂದ್ರೆ 'ರಂಗಿತರಂಗ' ಚಿತ್ರವನ್ನು ನಿರ್ಮಾಣ ಮಾಡಿದ್ದ ನಿರ್ಮಾಪಕ ಪ್ರಕಾಶ್ ಅವರೇ ಈ ಚಿತ್ರಕ್ಕೂ ಬಂಡವಾಳ ಹಾಕಲಿದ್ದಾರೆ. ಮಾತ್ರವಲ್ಲದೇ ನಿರ್ದೇಶಕ ಅನುಪ್ ಹೇಳುವ ಪ್ರಕಾರ ಚಿತ್ರಕ್ಕೆ ಸಿನಿಮಾಟೋಗ್ರಾಫರ್ ಆಗಿ ಲ್ಯಾನ್ಸ್ ಕ್ಯಾಪ್ಲೆನ್ ಒಪ್ಪಿಕೊಂಡರೆ ಅವರೇ ಮುಂದುವರಿಯುತ್ತಾರೆ ಎಂದಿದ್ದಾರೆ.[ಭಜರಂಗಿ ಬಾಹುಬಲಿಗೆ ಸೆಡ್ಡು ಹೊಡೆದ ರಂಗಿಯ ರಹಸ್ಯ?]

ಈಗಾಗಲೇ ಪುನೀತ್ ರಾಜ್ ಕುಮಾರ್ ಅವರು ದುನಿಯಾ ಸೂರಿ ಅವರ 'ದೊಡ್ಮನೆ ಹುಡುಗ' ಹಾಗೂ 'ಚಕ್ರವ್ಯೂಹ' ಚಿತ್ರದಲ್ಲಿ ಬ್ಯುಸಿಯಾಗಿದ್ದು, ಹಿಟ್ ನಿರ್ದೇಶಕ ಅನುಪ್ ಅವರೊಂದಿಗೆ ಕೈ ಜೋಡಿಸುತ್ತಾರ ಅಂತ ಕಾದು ನೋಡಬೇಕಿದೆ.

ಒಟ್ನಲ್ಲಿ ಈ ಸಿಹಿ ಸುದ್ದಿ ನಿಜವಾದರೆ ರಂಗಿಯ ಮೂಲಕ ಕನ್ನಡ ಪ್ರೇಕ್ಷಕರನ್ನು ಕಮಾಲ್ ಮಾಡಿದ ಅನುಪ್ ಭಂಡಾರಿ ಅವರು ಪವರ್ ಸ್ಟಾರ್ ಜೊತೆ ಸೇರಿಕೊಂಡು ಪವರ್ ಫುಲ್ ಚಿತ್ರವನ್ನು ಪ್ರೇಕ್ಷಕರಿಗೆ ನೀಡುತ್ತಾರ ನೋಡೋಣ.

    English summary
    Great news is brewing up for Puneeth Rajkumar and Anup Bhandari fans. According to reports, 'RangiTaranga' Director Anup Bhandari will direct a movie in which apparently Puneeth is going to be the lead hero.

    ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada