»   » 'ಅಂಬಾರಿ' ಏರಿಬಂದ ಎಪಿ ಅರ್ಜುನ್‌ಗೆ 'ಅದ್ಧೂರಿ' ಶುಭಾಶಯ

'ಅಂಬಾರಿ' ಏರಿಬಂದ ಎಪಿ ಅರ್ಜುನ್‌ಗೆ 'ಅದ್ಧೂರಿ' ಶುಭಾಶಯ

Posted By:
Subscribe to Filmibeat Kannada

ಸ್ಯಾಂಡಲ್ ವುಡ್ ಕ್ಷೇತ್ರಕ್ಕೆ ದ್ರುವ ಸರ್ಜಾರಂತಹ ಹಿಟ್ ಹೀರೋಗಳನ್ನು ನೀಡಿದ ನಿರ್ದೇಶಕ ಎ.ಪಿ ಅರ್ಜುನ್ ಗೆ ಇಂದು (ಆಗಸ್ಟ್ 8) ಹುಟ್ಟುಹಬ್ಬದ ಸಂಭ್ರಮ.

'ಅಂಬಾರಿ', 'ಅದ್ದೂರಿ', 'ರಾಟೆ' ಮುಂತಾದ ಚಿತ್ರಗಳನ್ನು ಪ್ರೇಕ್ಷಕ ವರ್ಗಕ್ಕೆ ನೀಡಿ ಅವರ ಮನಸ್ಸಿನಲ್ಲಿ ಉಳಿದುಕೊಂಡಿರುವ ನಿರ್ದೇಶಕ ಎ.ಪಿ ಅರ್ಜುನ್ ಗೆ ಇಂದು 43ನೇ ಜನುಮದಿನದ ಸಂಭ್ರಮ.

Director AP Arjun, Birthday, celebrates his 43rd birthday

2009 ರಲ್ಲಿ 'ಅಂಬಾರಿ'ಯಂತಹ ಹಿಟ್ ಚಿತ್ರದ ಮೂಲಕ ನಿರ್ದೇಶಕರ ಪಟ್ಟ ಹೊತ್ತುಕೊಂಡ ಎ.ಪಿ ಅರ್ಜುನ್ 2012 ರಲ್ಲಿ 'ಅದ್ದೂರಿ' ಚಿತ್ರವನ್ನ ಪ್ರೇಕ್ಷಕರಿಗೆ ನೀಡಿ ತಮ್ಮ ಪ್ರತಿಭೆಯನ್ನು ತೋರಿಸುವುದರ ಜೊತೆಗೆ ಒಬ್ಬ ಪ್ರತಿಭಾವಂತ ನಟನನ್ನು ಗಾಂಧಿನಗರಕ್ಕೆ ಪರಿಚಯಿಸಿದರು.[ಧ್ರುವ ಸರ್ಜಾ ಚೊಚ್ಚಲ ಚಿತ್ರ ಅದ್ದೂರಿ ಸೂಪರ್ ಹಿಟ್]

ದ್ರುವ ಸರ್ಜಾ ಹಾಗೂ ರಾಧಿಕಾ ಪಂಡಿತ್ ಲೀಡ್ ರೋಲ್ ನಲ್ಲಿ ಕಾಣಿಸಿಕೊಂಡಿದ್ದ, 'ಅದ್ದೂರಿ' ಚಿತ್ರ ಬಾಕ್ಸಾಫೀಸ್ ಧೂಳಿಪಟ ಮಾಡುವ ಮೂಲಕ ಅದ್ಭುತ ದಾಖಲೆ ಸೃಷ್ಟಿಸಿತು. ಮಾತ್ರವಲ್ಲದೇ ಫಿಲ್ಮ್ ಫೇರ್ ಆವಾರ್ಡ್, ಸುವರ್ಣ ಮತ್ತು ಉದಯ ಫಿಲ್ಮ್ ಆವಾರ್ಡ್ ನಲ್ಲೂ 'ಅತ್ಯತ್ತಮ ನಿರ್ದೇಶಕ' ಎನ್ನುವ ಗರಿಯನ್ನು ನಿರ್ದೇಶಕ ಎ.ಪಿ ಅರ್ಜುನ್ ಗೆ ತಂದುಕೊಟ್ಟಿದೆ.

ಯಾರ ನೆರವು ಇಲ್ಲದೇ ಗಾಂಧಿನಗರಕ್ಕೆ ಕಾಲಿಟ್ಟ ನಿರ್ದೇಶಕ ಎ.ಪಿ ಅರ್ಜುನ್, ನಿರ್ದೇಶಕ ಎನ್ನುವ ಪಟ್ಟ ಹೊತ್ತುಕೊಳ್ಳುವ ಮುನ್ನ ಬಾಕ್ಸಾಫೀಸ್ ಸುಲ್ತಾನ ದರ್ಶನ್ ಹಾಗೂ ಆದಿತ್ಯ ಅಭಿನಯಿಸಿದ್ದ 'ಸ್ನೇಹನಾ ಪ್ರೀತಿನಾ' ಚಿತ್ರದಲ್ಲಿ ಸಹಾಯಕ ನಿರ್ದೇಶಕರಾಗಿ ದುಡಿದು ಬಂದಿದ್ದರು.

Director AP Arjun, Birthday, celebrates his 43rd birthday

ಅಂದಹಾಗೆ ಉತ್ತಮ ಗೀತರಚನಕಾರರಾಗಿರುವ ಎ.ಪಿ ಅರ್ಜುನ್ 'ಯುಗ', 'ರಜನಿಕಾಂತ', 'ವರದನಾಯಕ', 'ಚಂದ್ರ', 'ಗಜಕೇಸರಿ', 'ರಾಟೆ', 'ಮಿ.ಆಂಡ್ ಮಿಸಸ್' ರಾಮಾಚಾರಿ ಮುಂತಾದ ಚಿತ್ರಗಳಿಗೆ ಗೀತೆ ರಚನೆ ಕೂಡ ಮಾಡಿರುವ ಹೆಗ್ಗಳಿಕೆ ಇವರದು.

ಸದ್ಯಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ಮಿಸ್ಟರ್ ಐರಾವತ' ಚಿತ್ರದಲ್ಲಿ ಬ್ಯುಸಿಯಾಗಿರುವ ನಿರ್ದೇಶಕ ಒಬ್ಬ ಪ್ರತಿಭಾವಂತ ನಿರ್ದೇಶಕ ಅಂತಾನೇ ಹೇಳಬಹುದು. ಅದೇನೇ ಗಾಸಿಪ್ ಗಳಿಗೂ ತಲೆಕೆಡಿಸಿಕೊಳ್ಳದೇ ತನ್ನದೇ ಹಾದಿಯಲ್ಲಿ ಮುನ್ನುಗ್ಗುತ್ತಿರುವ ನಿರ್ದೇಶಕ ಎ.ಪಿ ಅರ್ಜುನ್ ಗೆ ನಮ್ಮ ಕಡೆಯಿಂದಲೂ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು.

English summary
Director AP Arjun, Birthday, celebrated his 43rd birthday Today (August 8) with his family and friends.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada