For Quick Alerts
  ALLOW NOTIFICATIONS  
  For Daily Alerts

  ಶಾರುಖ್ ಬಿಟ್ಟು ಮತ್ತೊಬ್ಬ ಸ್ಟಾರ್ ನಟನ ಕೈ ಹಿಡೀತಾರಾ ನಿರ್ದೇಶಕ ಅಟ್ಲೀ

  |

  ತಮಿಳು ಚಿತ್ರರಂಗದ ಖ್ಯಾತ ನಿರ್ದೇಶಕ, ಅತಿ ಚಿಕ್ಕ ವಯಸ್ಸಿನಲ್ಲೆ ಭಾರತೀಯ ಚಿತ್ರರಂಗದ ಗಮನ ಸಳೆದಿರುವ ಆಟ್ಲೀ ಮುಂದಿನ ಸಿನಿಮಾ ಯಾವುದು ಎನ್ನುವ ಚರ್ಚೆ ಜೋರಾಗಿ ನಡೆಯುತ್ತಿದೆ. ಸದ್ಯ ವಿಜಯ್ ಜೊತೆ ಬಿಗಿಲ್ ಸಿನಿಮಾ ಮಾಡಿರುವ ಅಟ್ಲೀ ಈಗ ಪ್ರಮೋಷನ್ ನಲ್ಲಿ ಬ್ಯುಸಿಯಾಗಿದ್ದಾರೆ.

  ಬಿಗಿಲ್ ಸಿನಿಮಾ ಇದೇ ತಿಂಗಳು 27ಕ್ಕೆ ತೆರೆಗೆ ಬರುತ್ತಿದೆ. ಟ್ರೈಲರ್ ಮೂಲಕ ಚಿತ್ರಾಭಿಮಾನಿಗಳ ಕುತೂಹಲ ಹೆಚ್ಚಿಸಿರುವ ಜೊತೆಗೆ ನಿರ್ದೇಶಕರ ಬೇಡಿಕೆ ಕೂಡ ಹೆಚ್ಚಾಗಿದೆ. ಇತ್ತೀಚಿಗೆ ಆಟ್ಲೀ ಬಾಲಿವುಡ್ ಕಿಂಗ್ ಖಾನ್ ಶಾರುಖ್ ಖಾನ್ ಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ ಎನ್ನುವ ಸುದ್ದಿ ಜೋರಾಗಿ ಹರಿದಾಡುತ್ತಿತ್ತು.

  ಪ್ರಶಾಂತ್ ನೀಲ್-ಎನ್.ಟಿ.ಆರ್ ಚಿತ್ರಕ್ಕೆ ಬ್ರೇಕ್: ಇದು ಹೊಸ ಸುದ್ದಿ.!

  ಇದರ ಜೊತೆಗೆ ಆಟ್ಲಿ ಮತ್ತೊಬ್ಬ ಸ್ಟಾರ್ ನಟನಿಗೆ ನಿರ್ದೇಶನ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಅದೂ ಮತ್ಯಾರು ಅಲ್ಲ ಟಾಲಿವುಡ್ ನ ಸ್ಟಾರ್ ನಟ ಜ್ಯೂ.ಎನ್ ಟಿ ಆರ್. ಇತ್ತೀಚಿಗೆ ಬಿಗಿಲ್ ಸಿನಿಮಾ ಪ್ರಮೋಷನ್ ಗೆಂದು ಹೈದರಾಬಾದ್ ಗೆ ತೆರಳಿದ್ದ ಆಟ್ಲೀ ತೆಲುಗು ಸಿನಿಮಾ ಮಾಡುವ ಕನಸನ್ನು ಬಿಚ್ಚಿಟ್ಟಿದ್ದಾರೆ.

  ತೆಲುಗು ಸಿನಿಮಾ ಮಾಡಬೇಕು ಎನ್ನುವುದು ಆಟ್ಲಿಯ ಬಹು ದಿನಗಳ ಕನಸಂತೆ. "ಅತೀ ಶೀಘ್ರದಲ್ಲೇ ಇದು ನೇರವೇರಲಿದೆ. ನನ್ನ ಸಿನಿಮಾ ರಿಲೀಸ್ ಆದಗೆಲ್ಲ ಜ್ಯೂ.ಎನ್ ಟಿ ಆರ್ ಕರೆ ಮಾಡಿ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ನನ್ನೆಲ್ಲಾ ಸಿನಿಮಾವನ್ನು ಮೆಚ್ಚಿಕೊಂಡಿದ್ದಾರೆ. ತುಂಬ ಒಳ್ಳೆಯ ವ್ಯಕ್ತಿ" ಎಂದು ಹೇಳುತ್ತ ಜ್ಯೂ. ಎನ್ ಟಿ ಆರ್ ಜೊತೆಗಿನ ಒಡನಾಟವನ್ನು ನೆನಪಿಸಿಕೊಂಡಿದ್ದಾರೆ.

  ಅಟ್ಲೀಯ ಈ ಮಾತು ಜ್ಯೂ.ಎನ್ ಟಿ ಆರ್ ಜೊತೆ ಸಿನಿಮಾ ಮಾಡುತ್ತಾರೆ ಎನ್ನುವ ಸುದ್ದಿಗೆ ಮತ್ತಷ್ಟು ಪುಷ್ಟಿ ನೀಡುವಂತಿದೆ. ಶೀಘ್ರದಲ್ಲೆ ತೆಲುಗು ಸಿನಿಮಾ ಮಾಡುವುದಾಗಿ ಹೇಳಿದ ಆಟ್ಲೀ, ಬಿಗಿಲ್ ರಿಲೀಸ್ ಆಗುತ್ತಿದ್ದಂತೆ ಜ್ಯೂ.ಎನ್ ಟಿ ಆರ್ ಗೆ ಸಿನಿಮಾ ಮಾಡುವ ಸಾಧ್ಯತೆ ಹೆಚ್ಚಾಗಿದೆ. ಆದ್ರೆ ಇದರ ಜೊತೆಗೆ ಬಾಲಿವುಡ್ ಗೆ ಹಾರಲಿದ್ದಾರೆ ಎನ್ನುವ ಮಾತುಗಳು ಹೇಳಿ ಬರುತ್ತಿವೆ. ಈಗಾಗಲೆ ಶಾರುಖ್ ಖಾನ್ ಜೊತೆ ಮಾತುಕತೆ ಕೂಡ ನಡೆದಿದೆ, ಸಧ್ಯದಲ್ಲೇ ಇಬ್ಬರ ಸಿನಿಮಾ ಸೆಟ್ಟೇರಲಿದೆ ಎನ್ನುವ ಮಾತುಗಳು ಬಲವಾಗಿ ಕೇಳಿಬರುತ್ತಿವೆ. ಅದ್ಮೇಲೆ ಅಟ್ಲೀ ಮೊದಲು ಯಾವ ಸ್ಟಾರ್ ನಟನ ಸಿನಿಮಾ ಕೈಗೆತ್ತಿಕೊಳ್ಳಲಿದ್ದಾರೆ ಎನ್ನುವುದನ್ನು ಕಾದು ನೋಡಬೇಕು.

  Read more about: ntr ಎನ್ ಟಿ ಆರ್
  English summary
  Director Atlee is likely to make the film with Jr NTR.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X