Just In
Don't Miss!
- Lifestyle
"ಭಾನುವಾರದ ರಾಶಿಫಲ: ಮೇಷ-ಮೀನದವರೆಗಿನ ದಿನ ಭವಿಷ್ಯ "
- Education
BEL Recruitment 2021: 205 ಟೆಕ್ನೀಶಿಯನ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Automobiles
ಟಾಟಾ ಆಲ್ಟ್ರೊಜ್ ಐಟರ್ಬೋ ಕಾರಿನ ಟೀಸರ್ ಬಿಡುಗಡೆ ಮಾಡಿದ ಟಾಟಾ ಮೋಟಾರ್ಸ್
- Sports
ಐಎಸ್ಎಲ್: ಪ್ಲೇ ಆಫ್ ನಿರೀಕ್ಷೆಯಲ್ಲಿ ಜೆಮ್ಷೆಡ್ಪುರ, ನಾರ್ಥ್ ಈಸ್ಟ್
- News
ಭಾರತದಲ್ಲಿ ಮೊದಲ ದಿನ ಕೊರೊನಾ ಲಸಿಕೆ ಪಡೆದವರೆಷ್ಟು ಮಂದಿ?
- Finance
ಬಜೆಟ್ 2021: MSME ವಲಯಕ್ಕೆ ಏನು ಸಿಗಬಹುದು?
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಚಲನಚಿತ್ರ ಅಕಾಡೆಮಿ ನಡೆಗೆ 'ಛೀ! ಅಸಹ್ಯ' ಎಂದ ಬಿ.ಎಸ್.ಲಿಂಗದೇವರು
ಮಂಗಳಮುಖಿಯರ ವಾಸ್ತವ ಬದುಕು, ಅವರ ಮಾನಸಿಕ ತುಮುಲವನ್ನು 'ನಾನು ಅವನಲ್ಲ...ಅವಳು' ಚಿತ್ರದ ಮೂಲಕ ತೆರೆಮೇಲೆ ಸೂಕ್ಷ್ಮವಾಗಿ ಕಟ್ಟಿಕೊಟ್ಟ ಖ್ಯಾತಿ ನಿರ್ದೇಶಕ ಬಿ.ಎಸ್.ಲಿಂಗದೇವರು ರವರಿಗೆ ಸಲ್ಲಬೇಕು.
ಪ್ರಯೋಗಾತ್ಮಕ ಮತ್ತು ಸೃಜನಶೀಲ 'ನಾನು ಅವನಲ್ಲ...ಅವಳು' ಚಿತ್ರಕ್ಕೆ 62ನೇ ಸಾಲಿನ ಎರಡು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ದೊರಕಿದೆ. [ವಿಮರ್ಶೆ: ನೋಡುಗರ ಪರಿಕಲ್ಪನೆ ಬದಲಾಯಿಸುವ 'ನಾನು ಅವನಲ್ಲ...ಅವಳು']
ಮೆಲ್ಬರ್ನ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ, ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ, 2015ನೇ ಸಾಲಿನ ಇಂಡಿಯನ್ ಪನೋರಮಾ ಸೇರಿದಂತೆ ಹಲವಾರು ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನ ಕಂಡಿರುವ 'ನಾನು ಅವನಲ್ಲ...ಅವಳು' ಚಿತ್ರ ಇದೀಗ ವಿವಾದದ ಕೇಂದ್ರ ಬಿಂದು ಆಗಿದೆ.
'ಶಿವಮೊಗ್ಗ ಪನೋರಮಾ'ದಲ್ಲಿ 'ನಾನು ಅವನಲ್ಲ...ಅವಳು' ಚಿತ್ರ ಪ್ರದರ್ಶನಕ್ಕೆ ಉದ್ದೇಶ ಪೂರ್ವಕವಾಗಿ ಕರ್ನಾಟಕ ಸರ್ಕಾರ ಹಾಗೂ ಕರ್ನಾಟಕ ಚಲನಚಿತ್ರ ಅಕಾಡೆಮಿ ಅವಕಾಶ ನೀಡಿಲ್ಲ ಅಂತ ನಿರ್ದೇಶಕ ಬಿ.ಎಸ್.ಲಿಂಗದೇವರು ಆಪಾದಿಸಿದ್ದಾರೆ. ಮುಂದೆ ಓದಿ....

ಅಕಾಡೆಮಿ ಅಧ್ಯಕ್ಷರು ನೇರ ಹೊಣೆ
'ಶಿವಮೊಗ್ಗ ಪನೋರಮಾ'ಗೆ ಬೇಕಂತಲೇ 'ನಾನು ಅವನಲ್ಲ...ಅವಳು' ಚಿತ್ರವನ್ನ ಕೈಬಿಟ್ಟಿರುವುದಕ್ಕೆ ಅಕಾಡೆಮಿ ಅಧ್ಯಕ್ಷರುಗಳು, ರಿಜಿಸ್ಟ್ರಾರ್ ಮತ್ತು ಇಲಾಖೆಯ ಅಧಿಕಾರಿಗಳೇ ನೇರ ಹೊಣೆ ಎಂಬುದು ನಿರ್ದೇಶಕ ಬಿ.ಎಸ್.ಲಿಂಗದೇವರು ರವರ ಆರೋಪ. [ನಟಿ ತಾರಾ ವಿರುದ್ಧ ಲಿಂಗದೇವರು ಫೇಸ್ ಬುಕ್ ಬಾಂಬ್]

ಛೀ! ಅಸಹ್ಯ
''ನೀವುಗಳು ಈ ರೀತಿಯ ತಂತ್ರ ಬಳಸಿರುವುದು ಇದು ಮೊದಲಲ್ಲ. ನನ್ನ ಹೋರಾಟ ಇದದ್ದೇ. ಛೀ! ಅಸಹ್ಯ'' ಎಂದಿದ್ದಾರೆ 'ನಾನು ಅವನಲ್ಲ...ಅವಳು' ಚಿತ್ರದ ನಿರ್ದೇಶಕ ಬಿ.ಎಸ್.ಲಿಂಗದೇವರು.

ಖಂಡನೀಯ
''2015ನೇ ಸಾಲಿನ ಭಾರತೀಯ ಪನೋರಮಾಗೆ ಆಯ್ಕೆ ಆದ ಏಕೈಕ ಕನ್ನಡ ಚಿತ್ರ 'ನಾನು ಅವನಲ್ಲ...ಅವಳು'. ಹೀಗಿದ್ದರೂ, ಕರ್ನಾಟಕದಲ್ಲಿ ಅದರಲ್ಲೂ 'ಶಿವಮೊಗ್ಗ ಪನೋರಮಾ'ಗೆ ಕನ್ನಡ ಚಿತ್ರವನ್ನ ಕೈಬಿಟ್ಟಿರುವುದು ಖಂಡನೀಯ'' - ಬಿ.ಎಸ್.ಲಿಂಗದೇವರು.

ಯಾರು ಹೊಣೆ?
''ಕರ್ನಾಟಕ ಚಲನಚಿತ್ರ ಅಕಾಡೆಮಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಗೆ ಸುಮಾರು ಒಂದು ತಿಂಗಳಿಗೆ ಮುಂಚಿತವಾಗಿಯೇ 'ಶಿವಮೊಗ್ಗ ಪನೋರಮಾ'ದ ಚಲನಚಿತ್ರ ಪಟ್ಟಿಯನ್ನು DFF ತಿಳಿಸಿದೆ. ಈ ಚಿತ್ರೋತ್ಸವ ಕೂಡ ಕರ್ನಾಟಕ ಚಲನಚಿತ್ರ ಅಕಾಡೆಮಿ ಅಥವಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕೋರಿಕೆ ಮೇರೆಗೆ ಎನ್ನುವುದು ವಿಶೇಷ! ಹಾಗಿದ್ದೂ, 'ನಾನು ಅವನಲ್ಲ...ಅವಳು' ಎನ್ನುವ ಕನ್ನಡ ಚಿತ್ರಕ್ಕೆ ಎಲ್ಲಾ ಮಾನದಂಡ ಮತ್ತು ಅರ್ಹತೆ ಇದ್ದರೂ ಕೈಬಿಡಲಾಗಿದೆ. ಈ ನಿರ್ಲಕ್ಷ್ಯಕ್ಕೆ ಯಾರು ಹೊಣೆ?'' ಎಂಬ ಪ್ರಶ್ನೆ ಬಿ.ಎಸ್.ಲಿಂಗದೇವರು ರವರದ್ದು.

ಕೇಂದ್ರ ಮಂತ್ರಿಗಳಿಗೆ ಪತ್ರ
ವಿವಾದದ ಕುರಿತು ಕೇಂದ್ರ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಸಚಿವ ವೆಂಕಯ್ಯ ನಾಯ್ದು ರವರಿಗೂ ಬಿ.ಎಸ್.ಲಿಂಗದೇವರು ಪತ್ರ ಬರೆದಿದ್ದಾರೆ.

ಚಲನಚಿತ್ರೋತ್ಸವ ಯಾವಾಗ?
ಆಗಸ್ಟ್ 25 ರಿಂದ 27 ರವರೆಗೆ ಶಿವಮೊಗ್ಗದಲ್ಲಿ 'ಭಾರತೀಯ ಪನೋರಮಾ ಚಲನಚಿತ್ರೋತ್ಸವ' ನಡೆಯಲಿದೆ.

ಯಾವ್ಯಾವ ಚಿತ್ರಗಳ ಪ್ರದರ್ಶನ?
ಕೋರ್ಟ್ (ಮರಾಠಿ), ಕತ್ಯಾರ್ ಕಲಿಜಿತ್ ಗೌಸ್ಲಿ (ಮರಾಠಿ), ಮಸಾನ್ (ಹಿಂದಿ), ಕೋಯಾದ್ (ಅಸ್ಸಾಮಿ), ನಾಚೋಮ್-ಇ-ಕುಂಪಾಸರ್ (ಕೊಂಕಣಿ), ದಿ ಹೆಡ್ ಹಂಟರ್ (ಅರುಣಾಚಲಿ), ಸಿನಿಮಾವಾಲಾ (ಬೆಂಗಾಲಿ), ಆಂಕೋನ್ ದೇಖಿ (ಹಿಂದಿ) ಚಿತ್ರಗಳು ಪ್ರದರ್ಶನವಾಗಲಿವೆ.