For Quick Alerts
  ALLOW NOTIFICATIONS  
  For Daily Alerts

  ಭಟ್ಟರ 'ಮುಗುಳುನಗೆ' ನೋಡಿದ ಮೊದಲ ವೀಕ್ಷಕ ದುನಿಯಾ ಸೂರಿ ಏನಂದ್ರು?

  By Bharath Kumar
  |

  ಒಬ್ಬ ನಿರ್ದೇಶಕನ ಸಿನಿಮಾವನ್ನ ಮತ್ತೊರ್ವ ನಿರ್ದೇಶಕ ಬಿಡುಗಡೆಗೂ ಮುಂಚೆ ನೋಡುವುದು ಕನ್ನಡ ಚಿತ್ರರಂಗದಲ್ಲಿ ಬಹಳ ಅಪರೂಪ. ಆದ್ರೆ, ಯೋಗರಾಜ್ ಭಟ್ ಮತ್ತು ದುನಿಯಾ ಸೂರಿ ಜೋಡಿ ಆಗಾಗ ಇಂತಹ ಅಪರೂಪದ ಕೆಲಸಗಳನ್ನ ಮಾಡುತ್ತಿರುತ್ತಾರೆ.

  ಸದ್ಯ, ಶಿವರಾಜ್ ಕುಮಾರ್ ಅಭಿನಯಿಸುತ್ತಿರುವ 'ಟಗರು' ಚಿತ್ರದಲ್ಲಿ ತೊಡಗಿಕೊಂಡಿರುವ ದುನಿಯಾ ಸೂರಿ, ತಮ್ಮ ಬಿಡುವಿಲ್ಲದ ಸಮಯವನ್ನ ಭಟ್ಟರಿಗಾಗಿ ಬಿಡುವು ಮಾಡಿಕೊಂಡು, 'ಮುಗುಳುನಗೆ' ಚಿತ್ರವನ್ನ ನೋಡಿದ್ದಾರೆ.

  ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ತಂಡದ ಜೊತೆ ಸಿನಿಮಾ ನೋಡಿದ ದುನಿಯಾ ಸೂರಿ, ಮೊದಲ ವೀಕ್ಷಕನಾಗಿ ಚಿತ್ರದ ಬಗ್ಗೆ ಏನಂದ್ರು ಅಂತ ಮುಂದೆ ಓದಿ....

  'ಮುಗುಳುನಗೆ' ಮೊದಲ ಕಾಪಿ ನೋಡಿದ ಸೂರಿ

  'ಮುಗುಳುನಗೆ' ಮೊದಲ ಕಾಪಿ ನೋಡಿದ ಸೂರಿ

  ಯೋಗರಾಜ್ ಭಟ್ ನಿರ್ದೇಶನ ಹಾಗೂ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ 'ಮುಗುಳುನಗೆ' ಚಿತ್ರದ ಮೊದಲ ಕಾಪಿಯನ್ನ ನಿರ್ದೇಶಕ ದುನಿಯಾ ಸೂರಿ ಇತ್ತೀಚೆಗಷ್ಟೇ ವೀಕ್ಷಿಸಿದ್ದಾರೆ. ಒಬ್ಬ ನಿರ್ದೇಶಕನಾಗಿ ಸಿನಿಮಾ ನೋಡಿದ್ದು, ಭಟ್ಟರ ಕೆಲಸದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

  ನಾಲ್ಕು ಹುಡುಗಿಯರ ಜೊತೆ 'ಮುಗುಳು ನಗೆ' ಬೀರಿದ ಗಣಪ

  ಭಟ್ಟರಿಗೆ ಕಂಬ್ಯಾಕ್ ಸಿನಿಮಾ

  ಭಟ್ಟರಿಗೆ ಕಂಬ್ಯಾಕ್ ಸಿನಿಮಾ

  ''ಮುಗುಳುನಗೆ ಚಿತ್ರ ನಿರ್ದೇಶಕ ಯೋಗರಾಜ್ ಭಟ್ ಅವರಿಗೆ ಕಂಬ್ಯಾಕ್ ಸಿನಿಮಾವಾಗಲಿದೆ''. ದನಕಾಯೋನು ಚಿತ್ರದ ನಂತರ ಭಟ್ಟರು ಈ ಚಿತ್ರವನ್ನ ನಿರ್ದೇಶನ ಮಾಡಿದ್ದಾರೆ.

  ಮತ್ತೆ ಹಾರಲಿದೆ 'ಗಾಳಿಪಟ': ಭಟ್ಟರ ಅಡ್ಡಾಗೆ ಬಂದ ಮತ್ತೊಬ್ಬ ಸ್ಟಾರ್ ನಟ!

  ಟ್ರೆಂಡ್ ಮಾರ್ಕ್ ಆಗುತ್ತೆ

  ಟ್ರೆಂಡ್ ಮಾರ್ಕ್ ಆಗುತ್ತೆ

  ಗಣೇಶ್ ಹಾಗೂ ಯೋಗರಾಜ್ ಭಟ್ ಕಾಂಬಿನೇಷನ್ ನಲ್ಲಿ ಮೂಡಿಬಂದಿದ್ದ 'ಮುಂಗಾರು ಮಳೆ' ಚಿತ್ರದಂತೆ 'ಮುಗುಳುನಗೆ' ಚಿತ್ರವೂ ಟ್ರೆಂಡ್ ಮಾರ್ಕ್ ಆಗಲಿದೆ' - ದುನಿಯಾ ಸೂರಿ, ನಿರ್ದೇಶಕ

  'ಮುಗುಳುನಗೆ' ಚಿತ್ರಕ್ಕಾಗಿ ಹೇಗಿದ್ದ ಗಣೇಶ್ ಹೇಗಾದ್ರೂ ನೋಡಿ!

  ಗಣೇಶ್ ಪರ್ಫಾಮೆನ್ಸ್

  ಗಣೇಶ್ ಪರ್ಫಾಮೆನ್ಸ್

  'ಮುಗುಳುನಗೆ' ಚಿತ್ರದಲ್ಲಿ ನಟ ಗಣೇಶ್ ಅವರ ನಟನೆ ಅತ್ಯುತ್ತಮವಾಗಿದೆ. ಇದು ಈ ಚಿತ್ರಕ್ಕೆ ಮತ್ತಷ್ಟು ಸಕ್ಸಸ್ ನೀಡಲಿದೆ ''- ದುನಿಯಾ ಸೂರಿ, ನಿರ್ದೇಶಕ

  ಜನರ ನಿರೀಕ್ಷೆ ಮೀರಿಸುವ ಚಿತ್ರ

  ಜನರ ನಿರೀಕ್ಷೆ ಮೀರಿಸುವ ಚಿತ್ರ

  ''ಭಟ್ಟರು ಮತ್ತು ಗಣೇಶ್ ಜೋಡಿ ಅಂದ್ಮೇಲೆ ಮತ್ತೊಂದು 'ಮುಂಗಾರು ಮಳೆ' ಅಂತಹ ಚಿತ್ರವನ್ನ ನಿರೀಕ್ಷೆ ಮಾಡುತ್ತಾರೆ. ಆದ್ರೆ, ಈ ಚಿತ್ರ ಆ ನಿರೀಕ್ಷೆಗಿಂತ ಹೆಚ್ಚು ಯಶಸ್ಸು ಗಳಿಸುತ್ತೆ'' - ದುನಿಯಾ ಸೂರಿ, ನಿರ್ದೇಶಕ

  'ಮುಗುಳುನಗೆ' ಚಿತ್ರದ ಬಗ್ಗೆ

  'ಮುಗುಳುನಗೆ' ಚಿತ್ರದ ಬಗ್ಗೆ

  ಯೋಗರಾಜ್ ಭಟ್ ನಿರ್ದೇಶನವಿದ್ದು, ಗಣೇಶ್ ನಾಯಕರಾಗಿದ್ದಾರೆ. ಚಿತ್ರದಲ್ಲಿ ನಾಲ್ಕು ಜನ ನಾಯಕಿಯರಿದ್ದು, ಆಶಿಕಾ ರಂಗನಾಥ್, ನಿಖಿತಾ ನಾರಯಣ್, ಅಪೂರ್ವ ಆರೋರ, ಮತ್ತು ವಿಶೇಷ ಪಾತ್ರದಲ್ಲಿ ಅಮೂಲ್ಯ ಕಾಣಿಸಿಕೊಂಡಿದ್ದಾರೆ. ವಿ.ಹರಿಕೃಷ್ಣ ಅವರ ಸಂಗೀತ ನೀಡಿದ್ದು, ಜಾಕ್ ಮಂಜು ವಿತರಣೆ ಮಾಡಲಿದ್ದಾರೆ.

  English summary
  Director Duniya Suri watch the final copy of Mugulu Nage a couple of days ago along with its director, actor Ganesh, producer and a few technicians.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X