»   » 'ಕಿಲ್ಲಿಂಗ್ ವೀರಪ್ಪನ್'ನಲ್ಲಿ ಭಟ್ರ ಶಿಷ್ಯ 'ದ್ಯಾವ್ರೇ' ಗಡ್ಡಾ ವಿಜಿ

'ಕಿಲ್ಲಿಂಗ್ ವೀರಪ್ಪನ್'ನಲ್ಲಿ ಭಟ್ರ ಶಿಷ್ಯ 'ದ್ಯಾವ್ರೇ' ಗಡ್ಡಾ ವಿಜಿ

Posted By:
Subscribe to Filmibeat Kannada

ಸ್ಯಾಂಡಲ್ ವುಡ್ ನ ಈ ವರ್ಷದ ಬಹುನಿರೀಕ್ಷಿತ ಚಿತ್ರ 'ಕಿಲ್ಲಿಂಗ್ ವೀರಪ್ಪನ್' ಸೆಟ್ಟೇರಿದಾಗಿನಿಂದಲೂ ಸಖತ್ ಸುದ್ದಿಯಲ್ಲಿದೆ. ಇದೀಗ 'ಕಿಲ್ಲಿಂಗ್ ವೀರಪ್ಪನ್' ಚಿತ್ರದಿಂದ ಲೇಟೆಸ್ಟ್ ಸುದ್ದಿಯೊಂದು ಹೊರಬಿದ್ದಿದೆ.

ಅದೇನಪ್ಪಾ ಅಂದ್ರೆ, ಟಾಲಿವುಡ್ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಆಕ್ಚನ್-ಕಟ್ ಹೇಳುತ್ತಿರುವ 'ಕಿಲ್ಲಿಂಗ್ ವೀರಪ್ಪನ್' ಚಿತ್ರದಲ್ಲಿ 'ದ್ಯಾವ್ರೇ' ಚಿತ್ರದ ಫೇಮಸ್ ಡೈರೆಕ್ಟರ್ ಗಡ್ಡಾ ವಿಜಿ ಸಣ್ಣ ಪಾತ್ರವೊಂದರಲ್ಲಿ ನಟಿಸಿದ್ದಾರೆ.[ವೀರಪ್ಪನ್ ಕೊಲ್ಲೋಕೆ ಶಿವರಾಜ್ ಕುಮಾರ್ ಸಿದ್ಧ]

ಇತ್ತೀಚೆಗಷ್ಟೆ ಗಾಂಧಿನಗರದಲ್ಲಿ ಸೌಂಡ್ ಮಾಡುತ್ತಿರುವ ಅನಂತ್ ನಾಗ್ ಮುಖ್ಯ ಭೂಮಿಕೆಯಲ್ಲಿರುವ 'ಪ್ಲಸ್' ಚಿತ್ರದ ನಿರ್ದೇಶಕ ಈ ಗಡ್ಡಾ ವಿಜಿ. ತಮ್ಮ 'ಪ್ಲಸ್' ಚಿತ್ರದ ಶೂಟಿಂಗ್ ಶೆಡ್ಯೂಲ್ ನಡುವೆ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಕಣ್ಣು ಕುಕ್ಕಿರುವ ಗಡ್ಡಾ ವಿಜಿ 'ಕಿಲ್ಲಿಂಗ್ ವೀರಪ್ಪನ್' ಚಿತ್ರದಲ್ಲಿ ಸಣ್ಣ ಪಾತ್ರ ಗಿಟ್ಟಿಸಿಕೊಂಡಿದ್ದಾರೆ.['ಪ್ಲಸ್; ಚಿತ್ರದಲ್ಲಿ ಮೈನಸ್ ಇಲ್ವೆ, ಇಲ್ವಂತೆ!!]

Director Gadda Viji in RGV's 'Killing Veerappan'

ಮೊನ್ನೆಯಷ್ಟೇ ಬಿಡುಗಡೆಯಾದ 'ಕಿಲ್ಲಿಂಗ್ ವೀರಪ್ಪನ್' ಚಿತ್ರದ ತೆಲುಗು ಟ್ರೈಲರ್ ನಲ್ಲಿ ಗಡ್ಡಾ ವಿಜಿ ಮಿಂಚಿದ್ದಾರೆ. ಇದೀಗ ತಾನೇ ನಿರ್ದೇಶನದಲ್ಲಿ ಭರವಸೆಯ ಬೆಳಕು ಚೆಲ್ಲುತ್ತಿರುವ ನಿರ್ದೇಶಕ ಗಡ್ಡಾ ವಿಜಿಯವರು ಆಕ್ಟಿಂಗ್ ನಲ್ಲೂ ಒಂದು ಕೈ ನೋಡೇ ಬಿಡೋಣ ಅಂತ 'ಕಿಲ್ಲಿಂಗ್ ವೀರಪ್ಪನ್' ಚಿತ್ರಕ್ಕಾಗಿ ಬಣ್ಣ ಹಚ್ಚಿದ್ದಾರೆ.[ರಾಮ್ ಗೋಪಾಲ್ ವರ್ಮಾ ಬಗ್ಗೆ ಎಂಥಾ ಕಾಮೆಂಟು.!]

ಈಗಾಗಲೇ ಒಂದು ದಿನದ ಶೂಟಿಂಗ್ ಮುಗಿಸಿರುವ ಗಡ್ಡಾ ವಿಜಿ ಅವರು ಇನ್ನೂ 3 ದಿನಗಳ ಕಾಲ ಶೂಟಿಂಗ್ ನಲ್ಲಿ ಭಾಗವಹಿಸಬೇಕಿದೆ. ಚಿತ್ರದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಪಾರುಲ್ ಯಾದವ್, ಸಂದೀಪ್ ಭಾರದ್ವಾಜ್, ಯಜ್ಞಾ ಶೆಟ್ಟಿ ಮತ್ತು ಸಂಚಾರಿ ವಿಜಯ್ ಲೀಡ್ ರೋಲ್ ನಲ್ಲಿ ಕಾಣಿಸಿಕೊಂಡಿದ್ದಾರೆ.[ಬಂದ..ಬಂದ..ನೋಡಿ ಹೊಸ ವೀರಪ್ಪನ್..]

'ಕಿಲ್ಲಿಂಗ್ ವೀರಪ್ಪನ್' ವಿವಿಧ ಭಾಷೆಗಳಿಗೆ ಡಬ್ ಆಗುವುದರಿಂದ ಈ ಚಿತ್ರದಲ್ಲಿ ನಟಿಸಿರುವ ಇನ್ನಿತರೇ ಸ್ಯಾಂಡಲ್ ವುಡ್ ನಟ -ನಟಿಯರಿಗೆ ಬೇರೆ ಭಾಷೆಯ ಚಿತ್ರದಲ್ಲಿ ನಟಿಸಿದ ಅನುಭವವಾಗೋದು ಗ್ಯಾರಂಟಿ.

English summary
Director Gadda Viji of 'Dyavre' fame has roped into play a small role in Ram Gopal Varma's 'Killing Veerappan'. The film features Kannada Actor Shiva Rajkumar, Kannada Actress Parul Yadav and Yagna Shetty.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada