For Quick Alerts
  ALLOW NOTIFICATIONS  
  For Daily Alerts

  ಮಠ ಗುರುಪ್ರಸಾದ್ ಕಣ್ಣು ಸಾ.ರಾ.ಗೋವಿಂದ್ ಮಗನ ಮೇಲೆ ಬಿದ್ಬಿಟೈತೆ

  |

  ಗುರುಪ್ರಸಾದ್ ಅಂದ್ರೆ ಮಾತಿನ ಮಲ್ಲ... ಸಿನಿಮಾದಲ್ಲೇ ಆಗಲಿ, ರಿಯಲ್ ಆಗಿಯೇ ಆಗಲಿ... ಅವ್ರನ್ನ ಮಾತಿನಲ್ಲಿ ಸೋಲಿಸೋದು ಕಷ್ಟ. 'ಎರಡನೇ ಸಲ' ಸಿನಿಮಾ ಮಾಡಿ ತಮ್ಮದೇ ಚಿತ್ರತಂಡದೊಂದಿಗೆ ಫೈಟ್ ಮಾಡಿದ್ದ ಗುರು ಈಗ ಮತ್ತೊಂದು ಹೊಸ ಸಿನಿಮಾ ಮಾಡ್ತಿದ್ದಾರೆ.

  ಗುರುಪ್ರಸಾದ್ 'ಎರಡನೇ ಸಲ' ಸಿನಿಮಾ ರಿಲೀಸ್ ಆಗೋಕ್ಕೂ ಮುಂಚೆನೇ 'ಅದೇಮಾ' ಅನ್ನೋ ಸಿನಿಮಾ ಮಾಡೋದಾಗಿ ಪ್ರಚಾರ ಮಾಡಿದ್ರು. ಅದ್ರೀಗ ಈ ಸಿನಿಮಾ ಸೆಟ್ಟೇರುತ್ತಿದೆ.

  'ಅದೇಮಾ' ಸಿನಿಮಾದ ಮುಹೂರ್ತ ಇದೇ ತಿಂಗಳು 24ಕ್ಕೆ ಅಂದ್ರೆ ಡಾ.ರಾಜ್ ಕುಮಾರ್ ಅವ್ರ ಹುಟ್ಟುಹಬ್ಬದಂದು ನಡೆಯಲಿದೆ. ವಿಶೇಷ ಅಂದ್ರೆ ಈ ಸಿನಿಮಾದ ನಾಯಕನಾಗಿ ಆಯ್ಕೆ ಆಗಿರೋದು ಸಾ.ರಾ.ಗೋವಿಂದ್ ಪುತ್ರ ಅನೂಪ್.

  ಗುರುಪ್ರಸಾದ್ ನಿರ್ದೇಶನದಲ್ಲಿ ಅನೂಪ್ ಸಾ.ರಾ.ಗೋವಿಂದ್ ಸಿನಿಮಾ ಮಾಡೋದು ಪಕ್ಕಾ ಅಂತೆ. ಈ ವಿಷಯವನ್ನ ಸ್ವತಃ ಅನೂಪ್ ಫಿಲ್ಮಿ ಬೀಟ್ ಗೆ ಕನ್ಫರ್ಮ್ ಮಾಡಿದ್ದಾರೆ. ಜೊತೆಗೆ ಡಾ.ರಾಜ್ ಕುಮಾರ್ ಹುಟ್ಟುಹಬ್ಬದ ದಿನವೇ ಹೊಸ ಸಿನಿಮಾ ಲಾಂಚ್ ಆಗಿರೋದು ತುಂಬನೇ ಖುಷಿ ಕೊಟ್ಟಿದೆ ಎಂದಿದ್ದಾರೆ.

  'ಅದೇಮಾ' ಸಿನಿಮಾ ಶ್ರೀಧರ್ ರೆಡ್ಡಿ ತಮ್ಮ ಶ್ರೀ ವಿಜಯ ಗಣಧಿಪತಿ ಬ್ಯಾನರ್ ನಲ್ಲಿ ನಿರ್ಮಾಣ ಮಾಡುತ್ತಿದ್ದಾರೆ. ಸಿನಿಮಾ ಮುಹೂರ್ತ ಇದೇ ಸೋಮವಾರ ಕಂಠೀರವ ಸ್ಟುಡಿಯೋದಲ್ಲಿ ಗ್ರ್ಯಾಂಡ್ ಆಗಿ ನೆರವೇರಲಿದೆ. ಸದ್ಯ 'ಮಿಸ್ಟರ್ ಪರ್ಫೆಕ್ಟ್' ಮತ್ತು 'ಸುಬ್ಬ ಸುಬ್ಬಿ' ಸಿನಿಮಾದಲ್ಲಿ ಅನೂಪ್ ಸಖತ್ ಬಿಜಿಯಾಗಿದ್ದಾರೆ.

  English summary
  Director Guru Prasad is doing his next movie with Anup Sa.Ra.Govindu titled as 'Adema'

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X