»   » 'ಮಠ' ನಿರ್ದೇಶಕ ಗುರುಪ್ರಸಾದ್ ರವರ ಮತ್ತೊಂದು ಮುಖ ಅನಾವರಣ

'ಮಠ' ನಿರ್ದೇಶಕ ಗುರುಪ್ರಸಾದ್ ರವರ ಮತ್ತೊಂದು ಮುಖ ಅನಾವರಣ

Posted By:
Subscribe to Filmibeat Kannada

'ಮಠ', 'ಎದ್ದೇಳು ಮಂಜುನಾಥ' ಅಂತಹ ಹಿಟ್ ಚಿತ್ರಗಳನ್ನ ನೀಡಿದ್ದ ನಿರ್ದೇಶಕ ಗುರುಪ್ರಸಾದ್ ರವರ ಇನ್ನೊಂದು ಮುಖ ಪರಿಚಯ ಮಾಡಿಕೊಡ್ತಿದ್ದೀವಿ...ಓದಿ...

ತಮ್ಮ ಹೊಸ ಸಿನಿಮಾ 'ಎರಡನೇ ಸಲ' ಚಿತ್ರದ ಚಿತ್ರೀಕರಣಕ್ಕಾಗಿ ನಿರ್ದೇಶಕ ಗುರುಪ್ರಸಾದ್ ಗೋಕರ್ಣಕ್ಕೆ ಹೋಗಿದ್ರಂತೆ. ಅಲ್ಲಿ, ಮುತ್ತಣ್ಣ ಎಂಬ ಓರ್ವ ಹುಚ್ಚ ಗುರುಪ್ರಸಾದ್ ಕಣ್ಣಿಗೆ ಬಿದ್ದಿದ್ದಾನೆ. [ಗುರುಪ್ರಸಾದ್ ಸಿನಿಮಾ ಶಾಲೆ ಬಗ್ಗೆ ವಿದ್ಯಾರ್ಥಿಗಳ ಫೀಡ್ ಬ್ಯಾಕ್]

Director Guruprasad rescues an insane person in Gokarna

ಉದ್ದನೆಯ ದಾಡಿ ಬಿಟ್ಟುಕೊಂಡು, ಕೊಳಕು ಬಟ್ಟೆ ತೊಟ್ಟಿದ್ದ ಆ ಹುಚ್ಚನ ಪರಿಚಯ ಮಾಡಿಕೊಂಡಿದ್ದಾರೆ ಗುರುಪ್ರಸಾದ್. ನಂತರ ಆತನಿಗೆ ಕಟಿಂಗ್ ಮಾಡಿಸಿ, ಸ್ನಾನ ಮಾಡಿಸಿ, ಹೊಸ ಬಟ್ಟೆ ತೊಡಿಸಿ, ತಮ್ಮ ಚಿತ್ರದಲ್ಲಿ ಆಕ್ಟಿಂಗ್ ಮಾಡಿಸಿದ್ದಾರೆ. ಇಷ್ಟೇ ಅಲ್ಲದೆ, ಮುತ್ತಣ್ಣನಿಗೆ ತಮ್ಮ ಕಛೇರಿಯಲ್ಲೇ ಕೆಲಸ ಕೊಡಿಸುವುದಾಗಿ ತಮ್ಮೊಟ್ಟಿಗೆ ಕರೆದುಕೊಂಡು ಬಂದಿದ್ದಾರೆ.

ಬದುಕಿನಲ್ಲಿ ದಿಕ್ಕೇ ಕಾಣದೆ, ಹುಚ್ಚನಾಗಿ ಅಲೆಯುತ್ತಿದ್ದ ಮುತ್ತಣ್ಣನಿಗೆ ಹೊಸ ಬೆಳಕು ನೀಡಿದ್ದಾರೆ ಗುರುಪ್ರಸಾದ್. ಹೆಚ್ಚಿನ ಮಾಹಿತಿಗೆ ಈ ವಿಡಿಯೋ ಕ್ಲಿಕ್ ಮಾಡಿ....

English summary
Director Guruprasad has rescued an Insane person in Gokarna, during 'Eradane Sala' shooting.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada