For Quick Alerts
  ALLOW NOTIFICATIONS  
  For Daily Alerts

  ಬಂದ್ ಗೆ 'ಮಠ' ಗುರು, ನಿರ್ಮಾಪಕ ಸಂಘ ವಿರೋಧ

  By ಜೇಮ್ಸ್ ಮಾರ್ಟಿನ್
  |

  'ಡಬ್ಬಿಂಗ್ ಬೇಕು ಅಂತೇನೆ ನಾನು.. ಐದಾರು ವರ್ಷಗಳಿಂದ ಕನ್ನಡ ಇಂಡಸ್ಟ್ರೀಗೆ ಡಬ್ಬಿಂಗ್ ಬೇಕು ಎನ್ನುವುದೇ ನನ್ನ ವಾದ. ಯಾವ ವೇದಿಕೆಯಲ್ಲಾದರೂ ಬಂದು ಮಾತನಾಡಲು ಸಿದ್ಧನಿದ್ದೇನೆ, ಇದರ ಹಿಂದೆ 26 ವರ್ಷಗಳ ರಿಸರ್ಚ್ ಇದೆ. ನಾಳೆ ನಡೆಯುತ್ತಿರುವ ಪ್ರತಿಭಟನೆಯಲ್ಲಿ ನಾನು ಭಾಗವಹಿಸುವುದಿಲ್ಲ.'- ಮಠ ಗುರುಪ್ರಸಾದ್, ಎರಡನೇ ಸಲ ಹೊಚ್ಚ ಹೊಸ ಸಿನಿಮಾ ಮುಹೂರ್ತ ನೆರವೇರಿಸಿ ಹೇಳಿದ ಮಾತುಗಳಿವು.

  ನಮಗೆ ಡಬ್ಬಿಂಗ್ ಬೇಡ. ಅದಕ್ಕೂ ಮುಂಚೆ ಈ ಕೆಳಗಿನ ಅಂಶಗಳು ಜಾರಿಗೆ ಬರಲಿ... ಇದು ಸಾಧ್ಯವೇ ಯೋಚಿಸಿ. ಸಾಧ್ಯವಾಗುವುದೇ ಆದರೇ ನಮಗೆ ಡಬ್ಬಿಂಗ್ ಬೇಡ. ಇಲ್ಲದಿದರೆ ಕನ್ನಡ ಚಿತ್ರರಂಗದಲ್ಲಿ ಡಬ್ಬಿಂಗ್ ವಿರೋಧಿಸಿ ಚಿತ್ರೋದ್ಯಮ ಬಂದ್ ಮಾಡುವುದರಲ್ಲಿ ಅರ್ಥವಿಲ್ಲ ಎಂದಿದ್ದಾರೆ ಯುವ ಚಿತ್ರ ಸಾಹಿತಿ ಹೃದಯಶಿವ.[ಅವರ ಪ್ರಶ್ನೆಗಳು ಇಲ್ಲಿವೆ]

  ಕನ್ನಡ ಚಿತ್ರರಂಗದಲ್ಲಿ ಡಬ್ಬಿಂಗ್ ಭೂತ ಕಾಲಿಡದಂತೆ ಮೆಟ್ಟಿ ಹಾಕಲು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನೇತೃತ್ವದಲ್ಲಿ ಕನ್ನಡ ಚಿತ್ರರಂಗ ತೊಡೆ ತಟ್ಟಿ ನಿಂತಿದೆ. ಡಬ್ಬಿಂಗ್ ವಿರೋಧಿಸಿ ಸೋಮವಾರ(ಜ.27) ದಂದು ನಡೆಯಲಿರುವ ಬೃಹತ್ ಮೆರಣಿಗೆ ಹಾಗೂ ಪ್ರತಿಭಟನೆಗೆ ಪೂರ್ವಭಾವಿಯಾಗಿ ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಚಲನಚಿತ್ರ ತಾರೆ, ತಂತ್ರಜ್ಞರ ಬೃಹತ್ ಪತ್ರಿಕಾಗೋಷ್ಠಿ ಭಾನುವಾರ ಹಮ್ಮಿಕೊಳ್ಳಲಾಗಿತ್ತು. ಸಭೆಯಲ್ಲಿ ಸೋಮವಾರ ಬಂದ್ ಆಚರಿಸಲು ಒಕ್ಕೊರಲ ನಿರ್ಣಯ ಕೈಗೊಳ್ಳಲಾಯಿತು [ಸಭೆ ವಿವರ ಇಲ್ಲಿ ಓದಿ]

  ಕನ್ನಡ ಚಿತ್ರರಂಗದ ಕಲಾವಿದರ ಸಂಘ, ಕನ್ನಡ ಪರ ಸಂಘಟನೆಗಳು ಕರೆದಿರುವ ಚಿತ್ರೋದ್ಯಮ ಬಂದ್ (ಜ.27) ನಲ್ಲಿ ಪಾಲ್ಗೊಳ್ಳದಿರಲು ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘ ನಿರ್ಧರಿಸಿದೆ. ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು, ದ್ವಾರಕೀಶ್, ಪವನ್ ಕುಮಾರ್ ಸೇರಿದಂತೆ ಹಲವಾರು ಚಿತ್ರಕರ್ಮಿಗಳು ಬಂದ್ ವಿರೋಧಿಸಿದ್ದಾರೆ. ಈ ಬಗ್ಗೆ ಇನ್ನಷ್ಟು ವಿವರ ಮುಂದಿದೆ.

  ಬಂದ್ ನಲ್ಲಿ ಭಾಗವಹಿಸಬಾರದೆಂದು ನಿರ್ಮಾಪಕರ ಸಂಘ

  ಬಂದ್ ನಲ್ಲಿ ಭಾಗವಹಿಸಬಾರದೆಂದು ನಿರ್ಮಾಪಕರ ಸಂಘ

  ಡಬ್ಬಿಂಗ್ ಕುರಿತಂತೆ ಕೆಎಫ್ ಸಿಸಿ ಹಾಗೂ ನಿರ್ಮಾಪಕರ ಸಂಘ ಕೇಸ್ ನಡೆಯುತ್ತಿದೆ. Competon Commission of India ಕೇಸ್ ವಿಚಾರಣೆಗೆ ತಡೆಕೋರಿ ಕೆಎಫ್ ಸಿಸಿ ಸುಪ್ರೀಂಕೋರ್ಟಿನಲ್ಲಿ ದಾವೆ ಸಲ್ಲಿಸಿದೆ.

  ನ್ಯಾಯಾಲಯದಲ್ಲಿ ದಾವೆ ಇರುವ ಕಾರಣ ಡಬ್ಬಿಂಗ್ ಬೇಕು ಬೇಡವೇ ಎಂಬ ವಿಷಯದಲ್ಲಿ ಈ ಹಂತದಲ್ಲಿ ಪ್ರಸ್ತಾಪಿಸುವುದು ಸೂಕ್ತವಲ್ಲ. ಈ ಬಗ್ಗೆ ಜ.22ರಂದು ಕೆಎಫ್ ಸಿಸಿ ಕಾರ್ಯಕಾರಿ ಸಮಿತಿ ಸಭೆ ಸೇರಿ ತೀರ್ಮಾನಿಸಿದಂತೆ ಬಂದ್ ನಲ್ಲಿ ಭಾಗವಹಿಸಬಾರದೆಂದು ನಿರ್ಮಾಪಕರ ಸಂಘವು ಒಮ್ಮತದ ನಿರ್ಧಾರ ಕೈಗೊಂಡಿದೆ.

  ಚಿತ್ರೋದ್ಯಮ ಒಂದು ದಿನ ಬಂದ್ ನಡೆದರೆ ಏನು ನಷ್ಟ?

  ಚಿತ್ರೋದ್ಯಮ ಒಂದು ದಿನ ಬಂದ್ ನಡೆದರೆ ಏನು ನಷ್ಟ?

  ಬಂದ್ ನಡೆದರೆ ಸುಮಾರು 850ಕ್ಕೂ ಅಧಿಕ ಚಿತ್ರಮಂದಿರಗಳು ಮುಚ್ಚುತ್ತವೆ. ಚಿತ್ರೀಕರಣ ನಡೆಸುವಂತಿಲ್ಲ. ದಿನಗೂಲಿ ನೌಕರರ ಹೊಟ್ಟೆಪಾಡಿನ ಕಥೆ ಇನ್ನೂ ಗೊತ್ತಿಲ್ಲ. ಕಲಾವಿದರ ಸಂಘದವರು ಪ್ರತಿಭಟನೆ ನಂತರ ಊಟ ಹಾಕಿ ಕೈಗೆ ಆ ದಿನದ ಸಂಬಳ ನೀಡಿದರೆ ಅಡ್ಡಿಯಿಲ್ಲ.

  ಈ ಹಿಂದೆ ಸೇವಾ ತೆರಿಗೆ ವಿರೋಧಿಸಿ ಬಂದ್ ನಡೆದಾಗ ನಿರ್ಮಾಪಕ, ಕೆಎಫ್ ಸಿಸಿ ಸದಸ್ಯ, ಹೊಚ್ಚ ಹೊಸ ನಾಯಕ ಉಮೇಶ್ ಬಣಕಾರ್ ಅವರು ನೀಡಿದ ಅಂಕಿ ಅಂಶ ಪ್ರಕಾರ ಏನಾದರೂ ಒಂದು ದಿನದ ಬಂದ್ ನಿಂದ 200 ಕೋಟಿ ರು ನಷ್ಟವಾಗುತ್ತದೆಯಂತೆ

  ಆನ್ ಲೈನ್ ಪಿಟೀಷನ್ ಹಾಕಿರುವ ಪ್ರಶಾಂತ್ ಮಾತುಗಳು

  ಆನ್ ಲೈನ್ ಪಿಟೀಷನ್ ಹಾಕಿರುವ ಪ್ರಶಾಂತ್ ಮಾತುಗಳು

  ಡಬ್ಬಿಂಗ್ ಪರ ಆನ್ ಲೈನ್ ಪಿಟೀಷನ್ ಹಾಕಿರುವ ಪ್ರಶಾಂತ್ ಅವರು ಮಾತನಾಡಿ, ಕನ್ನಡ ಚಿತ್ರರಂಗದಲ್ಲಿ ರಿಮೇಕ್ ಗೆ ಅವಕಾಶ ನೀಡಿರುವುದರಿಂದ ಸ್ವಂತಿಕೆ ಕಳೆದುಹೋಗಿದೆ. ತಮಿಳರು ಧೂಮ್ 3 ಚಿತ್ರ, ಕಾರ್ಟೂನ್, ನ್ಯಾಷನಲ್ ಜಿಯೋಗ್ರಾಫಿಕ್ ಚಾನೆಲ್ ಗಳನ್ನು ಅವರದ್ದೇ ಭಾಷೆಯಲ್ಲಿ ನೋಡಿ ಆನಂದಿಸುತ್ತಾರೆ. ನಮ್ಮ ಕನ್ನಡಿಗರಿಗೆ ಮಾತ್ರ ಇದು ಸಾಧ್ಯವಾಗುತ್ತಿಲ್ಲ. ಇದನ್ನು ವಿರೋಧಿಸುವ ಕನ್ನಡ ಚಿತ್ರರಂಗ ಗ್ರಾಹಕರ ಬೇಡಿಕೆ ಈಡೇರಿಸಲು ಅಸಮರ್ಥವಾಗಿದೆ.

  ಚಿತ್ರರಂಗದಲ್ಲಿ ರಿಮೇಕ್ ಹಾವಳಿ ಕಾಣುತ್ತಿಲ್ಲವೇ?

  ಚಿತ್ರರಂಗದಲ್ಲಿ ರಿಮೇಕ್ ಹಾವಳಿ ಕಾಣುತ್ತಿಲ್ಲವೇ?

  ಈಗ ರವಿಚಂದ್ರನ್ ಕೂಡಾ ರಿಮೇಕ್ ಕೂಡಾ ಬೇಡ ಎನ್ನುತ್ತಿದ್ದಾರೆ. ಕಳೆದ ವರ್ಷ ತೆರೆ ಕಂಡ ಸುಮಾರು 127 ಚಿತ್ರಗಳಲ್ಲಿ 87ಕ್ಕೂ ಅಧಿಕ ಚಿತ್ರಗಳು ರಿಮೇಕ್ ಚಿತ್ರಗಳಾಗಿತ್ತು. ಇದು ಆಮದು ಸಂಸ್ಕೃತಿಯನ್ನು ನಮ್ಮ ನಾಯಕರ ಕೈಲಿ ಪ್ರಚಾರ ಮಾಡಿಸಿದಂತೆ ಅಲ್ಲವೇ?

  ಡಬ್ಬಿಂಗ್ ಏಕೆ ಬೇಕು ಎಂಬುದರ ಬಗ್ಗೆ 2006ರಿಂದ ಸಾಕಷ್ಟು ಅಧ್ಯಯನ ನಡೆಸಿದ್ದೇವೆ. ಹೆಚ್ಚಿನ ಮಾಹಿತಿಗೆ dubbingbeku.wordpress.com ಬ್ಲಾಗ್ ಗೆ ಭೇಟಿ ಕೊಡಿ-ಪ್ರಶಾಂತ್

  English summary
  Director Guruprasad dares to say that he is not supporting Kannada Film Industries rally against dubbing. Guruprasad said he has done 26 years of research on why dubbing is necessary for Kannada cinema. Dwarkish, Rajendra Singh Babu, Pawan Kumar also back Producers association decision support KFI bandh

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X