Don't Miss!
- News
ಅಮಿತ್ ಶಾ ಜಮ್ಮುವಿನಿಂದ ಲಾಲ್ ಚೌಕ್ವರೆಗೆ ನಡೆಯಲಿ: ರಾಹುಲ್ ಗಾಂಧಿ ಸವಾಲು
- Sports
ಭಾರತ ತಂಡಕ್ಕೆ ಏಕದಿನ ವಿಶ್ವಕಪ್ ಗೆಲ್ಲುವ ಆಸೆಯಿದ್ದರೆ ಹೀಗೆ ಮಾಡಲಿ ಎಂದ ಸೌರವ್ ಗಂಗೂಲಿ
- Lifestyle
ಫೆಬ್ರವರಿಯಲ್ಲಿದೆ ಈ 3 ಗ್ರಹಗಳ ಸಂಚಾರ: ಈ 4 ರಾಶಿಯವರಿಗೆ ಮಂಗಳಕರ
- Finance
ರಾಷ್ಟ್ರವ್ಯಾಪಿ ಬ್ಯಾಂಕ್ ಮುಷ್ಕರ ಮುಂದೂಡಿದ ಬ್ಯಾಂಕ್ ಯೂನಿಯನ್ಸ್: ಜ.31ಕ್ಕೆ ಮಹತ್ವದ ಸಭೆ
- Technology
ಬಜೆಟ್ ಬೆಲೆಯಲ್ಲಿ ಈ ಸ್ಮಾರ್ಟ್ಫೋನ್ಗಳು ಬೆಸ್ಟ್ ಎನಿಸಿಲಿವೆ! ಜಬರ್ದಸ್ತ್ ಫೀಚರ್ಸ್!
- Automobiles
ಬೆಲೆ ಏರಿಕೆ ಪಡೆದುಕೊಂಡ ಪರ್ಫಾಮೆನ್ಸ್ ಕಾರು ಪ್ರಿಯರ ಮೆಚ್ಚಿನ ಹ್ಯುಂಡೈ ಐ20 ಎನ್ ಲೈನ್
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಯಶ್ 'ರಾಣ' ಆಗೇ ಆಗ್ತಾರೆ ಅಂತಿದ್ದಾರೆ ಇವ್ರು!
Recommended Video

'ರಾಣ' ಸಿನಿಮಾಗೆ ಹೀರೋ ಯಾರು? ಎನ್ನುವುದು ಗಾಂಧಿನಗರದಲ್ಲಿ ಬಹಳ ಚರ್ಚೆ ಮಾಡುತ್ತಿರುವ ವಿಷಯ. ಈ ಗೊಂದಲಕ್ಕೆ ಸದ್ಯ ನಿರ್ದೇಶಕ ಎ ಹರ್ಷ ತೆರೆ ಎಳೆದಿದ್ದಾರೆ.
ರಾಕಿಂಗ್ ಸ್ಟಾರ್ ಯಶ್ ಹಾಗೂ ಹರ್ಷ ಕಾಂಬಿನೇಶನ್ ನಲ್ಲಿ 'ರಾಣ' ಸಿನಿಮಾ ಬರಬೇಕಿತ್ತು. ಆದರೆ, ಈ ಸಿನಿಮಾ ಶಿವರಾಜ್ ಕುಮಾರ್ ಗೆ ಹೋಗಿದೆ ಎಂಬ ಸುದ್ದಿ ಇತ್ತು. ಯಶ್ ಈ ಸಿನಿಮಾದಲ್ಲಿ ನಟಿಸುವುದಿಲ್ಲ ಎಂದ ಕಾರಣ ಹರ್ಷ ನಟ ಶಿವಣ್ಣನಿಗೆ ಈ ಸಿನಿಮಾವನ್ನು ಮಾಡುತ್ತಾರೆ ಎಂಬ ಮಾತಿತ್ತು.
ಹರ್ಷ
ನಿರ್ದೇಶನದ
'ರಾಣಾ'
ಚಿತ್ರವನ್ನು
ಮಾಡಲ್ಲ
ಅಂದ್ರಾ
ಯಶ್?
ಆದರೆ, ಈಗ 'ರಾಣ' ಸಿನಿಮಾದ ಬಗ್ಗೆ ಬಂದ ಗೊಂದಲಕ್ಕೆ ನಿರ್ದೇಶಕ ಹರ್ಷ ತೆರೆ ಎಳೆದಿದ್ದಾರೆ. 'ರಾಣ' ಸಿನಿಮಾದಲ್ಲಿ ಯಶ್ ನಟಿಸುವುದು ಪಕ್ಕಾ ಎಂದಿದ್ದಾರೆ. ಅಂದಹಾಗೆ, ಹರ್ಷ ಪತ್ರಿಕೆಯೊಂದಕ್ಕೆ ಈ ಬಗ್ಗೆ ಮಾತನಾಡಿದ್ದಾರೆ ಅವರ ಮಾತು ಮುಂದಿವೆ ಓದಿ...

ನೂರಕ್ಕೆ ನೂರರಷ್ಟು ಸತ್ಯ ಎಂದ ಹರ್ಷ
ಚಿತ್ರದ ಗೊಂದಲದ ಬಗ್ಗೆ ಮಾತನಾಡಿರುವ ಹರ್ಷ ''ರಾಣ' ಸಿನಿಮಾದ ಟೈಟಲ್ ಅನ್ನು ಈ ಹಿಂದೆಯೇ ನೊಂದಣಿ ಮಾಡಿದ್ದೇವೆ. ಈ ಚಿತ್ರದಲ್ಲಿ ಯಶ್ ಅವರೇ ನಟಿಸುತ್ತಾರೆ. ಇದರಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ. ಈ ಕೇಳಿ ಬರುತ್ತಿರುವ ಎಲ್ಲ ಸುದ್ದಿಗಳು ಸುಳ್ಳು. ಯಶ್ 'ರಾಣ' ಸಿನಿಮಾ ಮಾಡುವುದು ನೂರಕ್ಕೆ ನೂರರಷ್ಟು ಸತ್ಯ'' ಎಂದಿದ್ದಾರೆ.

'ಕೆಜಿಎಫ್ ಚಾಪ್ಟರ್ 2' ಮುಗಿದ ಮೇಲೆ
'ಕೆಜಿಎಫ್' ಚಿತ್ರದ ಸೂಪರ್ ಸಕ್ಸಸ್ ನಂತರ ಯಶ್ 'ಕೆಜಿಎಫ್ ಚಾಪ್ಟರ್ 2' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದ ಶೂಟಿಂಗ್ ಇದೇ ತಿಂಗಳು ಶುರು ಆಗುತ್ತಿದೆ. ನಿರ್ದೇಶಕ ಹರ್ಷ ಪ್ರಕಾರ 'ಕೆಜಿಎಫ್ ಚಾಪ್ಟರ್ 2' ಚಿತ್ರೀಕರಣ ಮುಗಿದ ಮೇಲೆ 'ರಾಣ' ಸಿನಿಮಾ ಪ್ರಾರಂಭ ಆಗಲಿದೆಯಂತೆ. ಈ ಚಿತ್ರ ಶುರು ಆಗಲು 2020 ಆಗಬಹುದಂತೆ.
'ಸೀತಾರಾಮ
ಕಲ್ಯಾಣ'
ರೀಮೇಕ್
?
:
ಪತ್ರಕರ್ತೆ
ಪ್ರಶ್ನೆಗೆ
ಹರ್ಷ
ತಬ್ಬಿಬ್ಬು!

ಜಯಣ್ಣ ಬ್ಯಾನರ್
'ರಾಣ' ಸಿನಿಮಾ ಜಯಣ್ಣ ಬ್ಯಾನರ್ ನಲ್ಲಿ ನಿರ್ಮಾಣ ಆಗುತ್ತಿದೆ. ಜಯಣ್ಣ ಹಾಗೂ ಯಶ್ ಕಾಂಬಿನೇಶನ್ ನಲ್ಲಿ ಅದೆಷ್ಟೋ ಹಿಟ್ ಚಿತ್ರಗಳು ಬಂದಿದ್ದು, ಮತ್ತೆ ಈ ಜೋಡಿ 'ರಾಣ'ದಲ್ಲಿ ಒಂದಾಗಲಿದೆ. 'ಸೀತಾರಾಮ ಕಲ್ಯಾಣ' ಮುಗಿಸಿರುವ ಹರ್ಷ ಸದ್ಯ 'ರಾಣ' ಸ್ಕ್ರಿಪ್ಟ್ ನಲ್ಲಿ ಬ್ಯುಸಿ ಇದ್ದಾರಂತೆ.

ಶಿವಣ್ಣನಿಗೆ ಇನ್ನೊಂದು ಸಿನಿಮಾ
ಯಶ್ ಮಾಡಬೇಕಿದ್ದ 'ರಾಣ' ಸಿನಿಮಾ ಶಿವರಾಜ್ ಕುಮಾರ್ ಗೆ ಹೋಗಿದೆ ಎನ್ನುವ ಸುದ್ದಿ ಕೂಡ ಇತ್ತು. ಈ ಬಗ್ಗೆ ಸಹ ಹರ್ಷ ಪ್ರತಿಕ್ರಿಯೆ ನೀಡಿದ್ದಾರೆ. ಶಿವಣ್ಣಗೆ ಇನ್ನೊಂದು ಸಿನಿಮಾ ಮಾಡುತ್ತೇನೆ. ಆದರೆ, ಅದು 'ರಾಣಾ' ಅಲ್ಲ ಎಂದು ತಿಳಿಸಿದ್ದಾರೆ. ಈ ಹಿಂದೆ 'ಭಜರಂಗಿ' ಹಾಗೂ 'ವಜ್ರಕಾಯ' ಚಿತ್ರಗಳನ್ನು ಶಿವಣ್ಣನಿಗೆ ಹರ್ಷ ಮಾಡಿದ್ದಾರೆ.