For Quick Alerts
  ALLOW NOTIFICATIONS  
  For Daily Alerts

  'ಸೀತಾರಾಮ ಕಲ್ಯಾಣ' ರೀಮೇಕ್ ? : ಪತ್ರಕರ್ತೆ ಪ್ರಶ್ನೆಗೆ ಹರ್ಷ ತಬ್ಬಿಬ್ಬು!

  |

  'ಸೀತಾರಾಮ ಕಲ್ಯಾಣ' ಸಿನಿಮಾ ಬಿಡುಗಡೆಯಾಗಿ ಆರು ದಿನ ಕಳೆದಿದೆ. ಸಿನಿಮಾಗೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದ್ದು, ಚಿತ್ರತಂಡ ಇತ್ತೀಚಿಗಷ್ಟೆ ಪತ್ರಿಕಾಗೋಷ್ಠಿ ಮಾಡಿ ಸಂತಸ ಹಂಚಿಕೊಂಡಿದೆ.

  'ಸೀತಾರಾಮ ಕಲ್ಯಾಣ' ಸಿನಿಮಾ ಪಕ್ಕಾ ತೆಲುಗು ಫ್ಲೇವರ್ ನಲ್ಲಿ ಬಂದ ಚಿತ್ರ. ಈ ಚಿತ್ರ ಶುರು ಆದಗಿಂದಲೂ ಒಂದಲ್ಲ ಒಂದು ತೆಲುಗು ಸಿನಿಮಾಗೆ ಹೋಲಿಕೆ ಮಾಡಲಾಗುತ್ತಿತ್ತು. ಈ ಸಿನಿಮಾ ರೀಮೇಕಾ ಅಥವಾ ಸ್ವಮೇಕಾ ಎನ್ನುವ ಡೌಟ್ ಶುರು ಆಗಿತ್ತು.

  Seetharama Kalyana Review : 'ಸೀತಾರಾಮ ಕಲ್ಯಾಣ', ಇದು ಎಲ್ಲದರ ಮಿಶ್ರಣ Seetharama Kalyana Review : 'ಸೀತಾರಾಮ ಕಲ್ಯಾಣ', ಇದು ಎಲ್ಲದರ ಮಿಶ್ರಣ

  ಸಿನಿಮಾ ಕಳೆದ ವಾರ ಬಿಡುಗಡೆಯಾಗಿದ್ದು, ತೆಲುಗಿನ ''ರರಾಂಡೋಯ್ ವೇಡುಕ ಚೂದ್ದಂ'' ಸಿನಿಮಾದ ಅನೇಕ ದೃಶ್ಯಗಳು ಹೋಲಿಕೆ ಆಗುತ್ತಿದೆ. ಈ ಬಗ್ಗೆ ನಿರ್ದೇಶಕ ಹರ್ಷಗೆ ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನೆ ಮಾಡಲಾಗಿದೆ.

  ನೀವು ರಿಮೇಕ್ ಮಾಡಿದ್ದೀರಾ? ಎಂಬ ಸಾಲು ಸಾಲು ಪ್ರಶ್ನೆಗೆ ತಬ್ಬಿಬ್ಬಾದ ಹರ್ಷ ಬಳಿಕ ತಮ್ಮ ಉತ್ತರ ನೀಡಲು ಪ್ರಾರಂಭ ಮಾಡಿದ್ದರು. ಅಂದಹಾಗೆ, ಹರ್ಷ ಮಾತುಗಳು ಮುಂದಿದೆ ಓದಿ...

  ಸೀತಾರಾಮ ಕಲ್ಯಾಣ ರೀಮೇಕ ?

  ಸೀತಾರಾಮ ಕಲ್ಯಾಣ ರೀಮೇಕ ?

  ''ಯಾವುದೇ ಸಿನಿಮಾ ತೆಗೆದುಕೊಂಡರು. ಅಲ್ಲಿ ಕೆಲವು ಲಿಂಕ್ ಇದ್ದೇ ಇರುತ್ತದೆ. ಅಲ್ಲಿ ಆ ತರ ಸೀನ್ ಇದೆ, ಇಲ್ಲಿ ಈ ತರ ಇದೆ ಅಂತ್ತಾರೆ. ಆದರೆ, ಅಂತಹ ಮಾತು ತಪ್ಪಲ್ಲಾ. ಸಿನಿಮಾ ನೋಡಿದವರ ರಿವ್ಯೂಗೆ ನಾನು ತಲೆ ಬಾಗುತ್ತೇನೆ. ಆದರೆ, 'ಸೀತಾರಾಮ ಕಲ್ಯಾಣ' ಇಟ್ ಇಸ್ ನಾಟ್ ಎ ರಿಮೇಕ್.'' - ಎ ಹರ್ಷ, ನಿರ್ದೇಶಕ

  'ಸೀತಾರಾಮ ಕಲ್ಯಾಣ' ನೋಡಿ ಭಲೇ ಭಲೇ ಎಂದ ರಾಜಕಾರಣಿಗಳು.! 'ಸೀತಾರಾಮ ಕಲ್ಯಾಣ' ನೋಡಿ ಭಲೇ ಭಲೇ ಎಂದ ರಾಜಕಾರಣಿಗಳು.!

  ಅನೇಕ ಹೊಸ ದೃಶ್ಯಗಳಿವೆ

  ಅನೇಕ ಹೊಸ ದೃಶ್ಯಗಳಿವೆ

  ''ರಿಮೇಕ್ ಎಂದರೆ, ಅದೇ ಕಥೆ ತೆಗೆದುಕೊಂಡು, ಅದೇ ಸೀನ್ ಗಳನ್ನು ಮಾಡುವುದು. ಶಾಟ್ ಬೈ ಶಾಟ್ ತೆಗೆದುಕೊಳ್ಳುವುದು. ಸ್ಫೂರ್ತಿ ಪಡೆದು ಮಾಡುವ ಸಾಕಷ್ಟು ಸಿನಿಮಾಗಳಿವೆ. ಸಿನಿಮಾ ಓಪನಿಂಗ್, ಸೆಕೆಂಡ್ ಹಾಫ್, ರೈತರ ಎಪಿಸೋಡ್ ಸಿನಿಮಾದ ಅನೇಕ ದೃಶ್ಯಗಳು ಎಲ್ಲ ಹೊಸತಾಗಿವೆ.'' - ಎ ಹರ್ಷ, ನಿರ್ದೇಶಕ

  ಸೀನ್ ಬೈ ಸೀನ್ ಕಾಪಿ ಮಾಡಿಲ್ಲ

  ಸೀನ್ ಬೈ ಸೀನ್ ಕಾಪಿ ಮಾಡಿಲ್ಲ

  ''ನಾವು ಯಾವುದೇ ಚಿತ್ರದ ಸೀನ್ ಬೈ ಸೀನ್ ಕಾಪಿ ಮಾಡಿಲ್ಲ. ನಿರ್ಮಾಪಕ ಜಯಣ್ಣ ಸಿನಿಮಾದ ಹಂಚಿಕೆ ಮಾಡಿದ್ದಾರೆ. ಜೀ ಟಿವಿ, ಹಿಂದಿ ರೈಟ್ ಎಲ್ಲ ಕಡೆ ಸೇಲ್ ಆಗಿದೆ. ಇವರು ಸಿನಿಮಾ ನೋಡಿಯೇ ತೆಗೆದುಕೊಳ್ಳುವುದು, ಅವರಿಗೆ ನಾವು ಮೋಸ ಮಾಡಲು ಆಗುವುದಿಲ್ಲ.'' - ಎ ಹರ್ಷ, ನಿರ್ದೇಶಕ

  ''ರರಾಂಡೋಯ್ ವೇಡುಕ ಚೂದ್ದಂ'' ಚಿತ್ರದ ತರ ಇದೆಯಲ್ಲ?

  ''ರರಾಂಡೋಯ್ ವೇಡುಕ ಚೂದ್ದಂ'' ಚಿತ್ರದ ತರ ಇದೆಯಲ್ಲ?

  ''ನಾನು ಆ ಸಿನಿಮಾವನ್ನು ನೋಡಿಲ್ಲ. ಸಿನಿಮಾದ ಶುರು ಆದಾಗ ಅಲ್ಲು ಅರ್ಜುನ್ ಅವರ ಒಂದು ದೃಶ್ಯ ಕಾಫಿ ಮಾಡಿದ್ದೇವೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಹಾಕಿದ್ದರು. ನಾವು ಆ ಸಿನಿಮಾದ ರೀತಿಯೇ ಮಾಡಿದ್ದರೆ, ಅವರು ಕೇಸ್ ಹಾಕಬೇಕಿತ್ತು. ನಾವು ನಾಲೈದು ಜನ ಕೂತು ಮಾಡಿರುವ ಕಥೆ ಇದು.'' - ಎ ಹರ್ಷ, ನಿರ್ದೇಶಕ

  ಆ ಚಿತ್ರಕ್ಕೆ ಹೋಲಿಕೆ ಖಂಡಿತ ಇದೆ

  ಆ ಚಿತ್ರಕ್ಕೆ ಹೋಲಿಕೆ ಖಂಡಿತ ಇದೆ

  ''ನಾನು ಆ ಸಿನಿಮಾವನ್ನು ನೋಡುತ್ತೇನೆ ನಮ್ಮ ಚಿತ್ರ ಹಾಗೆಯೇ ಇದ್ದರೆ ಖಂಡಿತ ಕ್ಷಮೆ ಕೇಳುತ್ತೇನೆ.'' ಎಂದು ಹರ್ಷ ಹೇಳಿದ್ದಾರೆ. ಆದರೆ, 'ಸೀತಾರಾಮ ಕಲ್ಯಾಣ' ಹಾಗೂ 'ರರಾಂಡೋಯ್ ವೇಡುಕ ಚೂದ್ದಂ' ಸಿನಿಮಾ ನೋಡಿದರೆ ಎರಡರಲ್ಲಿ ಅನೇಕ ಹೋಲಿಕೆ ಇವೆ. ಸಿನಿಮಾದ ಅನೇಕ ದೃಶ್ಯಗಳು ಸೇಮ್ ಟು ಸೇಮ್ ಇವೆ.

  English summary
  Director A Harsha give clarification about 'Seetharama Kalyana' movie remake rumors .

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X