»   » ಕರಿ ಚಿರತೆಗೆ ಆಕ್ಷನ್-ಕಟ್ ಹೇಳ್ತಾರಂತೆ, 'ಭಜರಂಗಿ' ಹರ್ಷ.!

ಕರಿ ಚಿರತೆಗೆ ಆಕ್ಷನ್-ಕಟ್ ಹೇಳ್ತಾರಂತೆ, 'ಭಜರಂಗಿ' ಹರ್ಷ.!

Posted By:
Subscribe to Filmibeat Kannada

ಇದೇ ಮೊದಲ ಬಾರಿಗೆ ನೃತ್ಯ ನಿರ್ದೇಶಕ ಕಮ್ ನಿರ್ದೇಶಕ ಹರ್ಷ ಅವರು ಬ್ಲ್ಯಾಕ್ ಕೋಬ್ರಾ ದುನಿಯಾ ವಿಜಯ್ ಅವರಿಗೆ ಆಕ್ಷನ್-ಕಟ್ ಹೇಳಲು ತಯಾರಾಗಿದ್ದಾರೆ. ದುನಿಯಾ ವಿಜಿ ಹಾಗೂ ಖ್ಯಾತ ನಿರ್ದೇಶಕ ಹರ್ಷ ಅವರ ಕಾಂಬಿನೇಷನ್ ನಲ್ಲಿ ಹೊಸ ಚಿತ್ರವೊಂದು ಸೆಟ್ಟೇರುತ್ತಿದೆ.

'ಕೆ.ಪಿ ಶ್ರೀಕಾಂತ್ ನಿರ್ಮಾಣದಲ್ಲಿ ನನ್ನ ಹೊಸ ಚಿತ್ರಕ್ಕೆ, ನಿರ್ದೇಶಕ ಎ.ಹರ್ಷ ಅವರು ನಿರ್ದೇಶನ ಮಾಡುತ್ತಿದ್ದು, ನಾನು ಸೇರಿ ಮೂವರ ಸಂಯೋಜನೆ ವಿಭಿನ್ನವಾಗಿ ಮೂಡಿ ಬರಲಿದೆ. ಚಂದನವನದ ಖ್ಯಾತ ನೃತ್ಯ ನಿರ್ದೇಶಕ ಕಮ್ ನಿರ್ದೇಶಕ ಎ.ಹರ್ಷ ಅವರ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ಹೊಸ ಅನುಭವ ನೀಡಲಿದೆ ಎಂದು ಕರಿ ಚಿರತೆ ದುನಿಯಾ ವಿಜಯ್ ಅವರು ಸಂತಸ ವ್ಯಕ್ತಪಡಿಸಿದ್ದಾರೆ.[ಚಿತ್ರಗಳು: ಭರ್ಜರಿಯಾಗಿ ದನ ಕಾಯುತ್ತಿರುವ ವಿಜಿ ಮತ್ತು ಪ್ರಿಯಾಮಣಿ..!]

Director Harsha to helm a project for Actor Duniya Vijay

ನಿರ್ಮಾಪಕ ಶ್ರೀಕಾಂತ್ ಅವರ ನಿರ್ಮಾಣದಲ್ಲಿ ಮೂಡಿಬರುತ್ತಿರುವ, ಮೊದಲ ಚಿತ್ರ ಇದಾಗಿದ್ದು, ಈಗಾಗಲೇ ಚಿತ್ರದ ಸ್ಕ್ರಿಪ್ಟ್ ತಯಾರಾಗುತ್ತಿದೆ ಎಂದು ನಟ ದುನಿಯಾ ವಿಜಯ್ ಹೇಳಿದ್ದಾರೆ.

ಇನ್ನು ನಟ ದುನಿಯಾ ವಿಜಯ್ ಅವರು ಯೋಗರಾಜ್ ಭಟ್ಟರ 'ದನ ಕಾಯೋನು' ಚಿತ್ರದ ಶೂಟಿಂಗ್ ನಲ್ಲಿ ಬ್ಯುಸಿಯಾದರೆ, ನಿರ್ದೇಶಕ ಹರ್ಷ ಅವರು ಕಾಮಿಡಿ ನಟ ಶರಣ್ ಅವರ ಜೊತೆ 'ಜೈ ಮಾರುತಿ 800' ಚಿತ್ರದ ಚಿತ್ರೀಕರಣದಲ್ಲಿದ್ದಾರೆ.['ಜೈ ಮಾರುತಿ 800' ಫುಲ್ ಕಾಮಿಡಿ ಸಿನಿಮಾ: ಎ ಹರ್ಷ]

ಒಟ್ನಲ್ಲಿ ದುನಿಯಾ ವಿಜಿ ಮತ್ತು ಹರ್ಷ ಅವರ ಬಹುನಿರೀಕ್ಷಿತ ಪ್ರಾಜೆಕ್ಟ್ ಗಳು ಮುಗಿದ ನಂತರ, ಇವರಿಬ್ಬರ ಜುಗಲ್ ಬಂದಿಯಲ್ಲಿ ಹೊಸ ಪ್ರಾಜೆಕ್ಟ್ ಸೆಟ್ಟೇರಲಿದೆ.

English summary
The latest buzz in Gandhinagar is that for the first time, actor Duniya Vijay and director Harsha will come together for a movie to be produced by KP Srikanth. And the news is now confirmed by the actor himself.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada