»   » 'ಮತ್ತೊಮ್ಮೆ ಶ್' ಅನ್ನುತ್ತಿದ್ದ ಹೇಮಂತ್ ಈಗ 'ಸ' ಅನ್ನುತ್ತಿದ್ದಾರೆ..!

'ಮತ್ತೊಮ್ಮೆ ಶ್' ಅನ್ನುತ್ತಿದ್ದ ಹೇಮಂತ್ ಈಗ 'ಸ' ಅನ್ನುತ್ತಿದ್ದಾರೆ..!

Posted By:
Subscribe to Filmibeat Kannada

ನಿಂಬೆಹುಳಿ ನಿರ್ದೇಶಕ ಹೇಮಂತ್ ಹೆಗ್ಡೆ ಅವರ ಹೊಸ ಸಿನಿಮಾ 'ಮತ್ತೊಮ್ಮೆ ಶ್' ಚಿತ್ರದ ಹೆಸರನ್ನು 'ಸ' ಎಂದು ಬದಲಾಯಿಸಿದ್ದಾರೆ. ಈ ಮೊದಲು ಸುಮಾರು 20 ವರ್ಷಗಳ ಹಿಂದೆ ಉಪ್ಪಿ ಅವರು ಆಕ್ಷನ್-ಕಟ್ ಹೇಳಿದ್ದ 'ಶ್' ಚಿತ್ರ ಸ್ಯಾಂಡಲ್ ವುಡ್ ನಲ್ಲಿ ಸಖತ್ ಸದ್ದು ಮಾಡಿರುವ ವಿಷಯ ನಿಮಗೆ ಗೊತ್ತೇ ಇದೆ ಅಲ್ವಾ.

ವಿವಾದಗಳ ಮೂಟೆ ಆಗಿರುವ ನಿರ್ದೇಶಕ ಹೇಮಂತ್ ಅವರು 'ಶ್ 2' ಮಾಡಲು ಹೊರಟಿದ್ದರು. ಆದರೆ ಕುಮಾರ್ ಗೋವಿಂದು ಅವರು ಆಗಲೇ ಆ ಹೆಸರನ್ನು ರಿಜಿಸ್ಟರ್ ಮಾಡಿರುವುದರಿಂದ ಹೇಮಂತ್ ಅವರು ಕೈ ಬಿಟ್ಟಿದ್ದರು.

Director Hemanth Hegde's Mattomme Ssh Title Changed to 'Sa'

ಆ ನಂತರ 'ಮತ್ತೊಮ್ಮೆ ಶ್' ಅಂತ ಟೈಟಲ್ ಕೊಟ್ಟರು ಕೂಡ ಅದೂ ಸಮಸ್ಯೆ ತಂದೊಡ್ಡಿದ್ದರಿಂದ ಯಾರ ಉಸಾಬರಿನೂ ಬೇಡ ಅಂತ 'ಮತ್ತೊಮ್ಮೆ ಶ್' ಎಂದಿದ್ದನ್ನು 'ಸ' ಎಂದು ಮಾಡಿ ಎಲ್ಲಾ ಸಮಸ್ಯೆಗಳಿಗೆ ಹಾಗೂ ವಿವಾದಗಳಿಗೆ ಇತಿಶ್ರೀ ಹಾಡಿದ್ದಾರೆ.[ಹೇಮಂತ್ ಹೆಗಡೆ ಆಕ್ಷನ್ ಕಟ್ ನಲ್ಲಿ 'ಮತ್ತೊಮ್ಮೆ ಶ್' ]

ಈಗಾಗಲೇ 'ಶ್', ಶ್ 2', 'ಶ್ ಎಚ್ಚರಿಕೆ', ಅಂತ ಹಲವಾರು ಸಿನಿಮಾಗಳು ಬಂದಿರುವುದರಿಂದ ತಮ್ಮದು ಕೊಂಚ ವಿಭಿನ್ನವಾಗಿರಲಿ ಅಂತ 'ಸ' ಎಂದಿಟ್ಟು ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದ್ದಾರೆ.

Director Hemanth Hegde's Mattomme Ssh Title Changed to 'Sa'

ಅಂದಹಾಗೆ ಚಿತ್ರದಲ್ಲಿ 'ಅಗ್ನಿಸಾಕ್ಷಿ' ಖ್ಯಾತಿಯ ವಿಜಯ್ ಸೂರ್ಯ, ಜೆಕೆ ಅಲಿಯಾಸ್ ಜಯ್ ಕಾರ್ತಿಕ್, ಸಂಯುಕ್ತಾ ಬೆಳವಾಡಿ, ಅನುರಾಧ ಮುಖರ್ಜಿ ಮುಂತಾದವರು ಪ್ರಮುಖ ಪಾತ್ರದಲ್ಲಿ ಮಿಂಚುತ್ತಿದ್ದಾರೆ.

English summary
Director Hemanth Hegde has changed the name of his movie 'Mattomme Ssh'. The film will henceforth be called 'Sa'. The change was necessitated after several other films have been announced with similar sounding names.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada