»   » ಮಾಲಾಶ್ರೀ 'ಉಪ್ಪು ಹುಳಿ ಖಾರ'ದ 'ಕಹಿ' ಸತ್ಯ ಬಿಚ್ಚಿಟ್ಟ ಇಮ್ರಾನ್.!

ಮಾಲಾಶ್ರೀ 'ಉಪ್ಪು ಹುಳಿ ಖಾರ'ದ 'ಕಹಿ' ಸತ್ಯ ಬಿಚ್ಚಿಟ್ಟ ಇಮ್ರಾನ್.!

Posted By:
Subscribe to Filmibeat Kannada

ಅಂತೂ ಇಂತೂ ನಿನ್ನೆ ಭುಗಿಲೆದ್ದ ವಿವಾದದ ಬಗ್ಗೆ ನೃತ್ಯ ಸಂಯೋಜಕ ಹಾಗೂ ನಿರ್ದೇಶಕ ಇಮ್ರಾನ್ ಸರ್ದಾರಿಯಾ ಬಾಯ್ಬಿಟ್ಟಿದ್ದಾರೆ.

''ನಿಮ್ಮ ಪರ್ಫಾಮೆನ್ಸ್ ಚೆನ್ನಾಗಿಲ್ಲ ಎಂಬ ಕಾರಣಕ್ಕೆ ನಿರ್ಮಾಪಕ ಕೆ.ಮಂಜು ಸಿಟ್ಟಾಗಿ 'ಉಪ್ಪು ಹುಳಿ ಖಾರ' ಚಿತ್ರವನ್ನು ನಿಲ್ಲಿಸುವಂತೆ ಹೇಳಿದ್ದಾರೆ. ಸದ್ಯಕ್ಕೆ ನಾನು ಅಸಹಾಯಕ. ನಿಮಗೆ ಕೊಟ್ಟಿರುವ ಅಡ್ವಾನ್ಸ್ ಹಣವನ್ನು ವಾಪಸ್ ನೀಡಿ'' ಅಂತ ನಟಿ ಮಾಲಾಶ್ರೀಗೆ ಇಮ್ರಾನ್ ಸರ್ದಾರಿಯಾ ಮಾಡಿದ ಮೆಸೇಜ್ ನಿನ್ನೆ ಗಾಂಧಿನಗರದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿತ್ತು. [ತುರ್ತು ಸುದ್ದಿಗೋಷ್ಠಿ ಕರೆದು ನಟಿ ಮಾಲಾಶ್ರೀ ಕಣ್ಣೀರಿಟ್ಟಿದ್ದು ಯಾಕೆ?]

ಈ ಕುರಿತಾಗಿ ನಿನ್ನೆ ಸಂಜೆ ನಟಿ ಮಾಲಾಶ್ರೀ ತುರ್ತು ಸುದ್ದಿಗೋಷ್ಠಿ ಕರೆದು ಮಾಧ್ಯಮ ಹಾಗೂ ಪತ್ರಕರ್ತರ ಮುಂದೆ ಕಣ್ಣೀರು ಹಾಕಿದ್ಮೇಲೆ, ತುಟಿಕ್ ಪಿಟಿಕ್ ಎನ್ನದ 'ಉಪ್ಪು ಹುಳಿ ಖಾರ' ಚಿತ್ರದ ನಿರ್ದೇಶಕ ಇಮ್ರಾನ್ ಸರ್ದಾರಿಯಾ ಇಂದು ನಿರ್ಮಾಪಕ ಕೆ.ಮಂಜು ಜೊತೆ ಬೆಂಗಳೂರಿನ ಗ್ರೀನ್ ಹೌಸ್ ನಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿದರು. [ಮಾಲಾಶ್ರೀ ಆಪಾದನೆಗಳಿಗೆ ಉತ್ತರಿಸಲು ಕೆ.ಮಂಜು ಸಿದ್ಧ.!]

ಸುದ್ದಿಗೋಷ್ಠಿಯಲ್ಲಿ ತಮ್ಮನ್ನ ತಾವು ಸಮರ್ಥನೆ ಮಾಡಿಕೊಂಡ ಇಮ್ರಾನ್ ಸರ್ದಾರಿಯಾ, ಮಾಲಾಶ್ರೀ ರವರ ಸಮಯಪ್ರಜ್ಞೆ ಬಗ್ಗೆ ಕಾಮೆಂಟ್ ಮಾಡಲು ಶುರು ಮಾಡಿದರು.

ನಟಿ ಮಾಲಾಶ್ರೀ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಇಮ್ರಾನ್ ಸರ್ದಾರಿಯಾ ಏನೇನೆಲ್ಲಾ ಹೇಳಿದರು ಅಂತ ತಿಳಿಯಲು ಕೆಳಗಿರುವ ಸ್ಲೈಡ್ ಗಳನ್ನು ಕ್ಲಿಕ್ಕಿಸಿ, ಅವರ ಮಾತುಗಳಲ್ಲೇ ಓದಿರಿ.....

ಮೆಸೇಜ್ ನಲ್ಲಿ ಹಾಗೆ ಹೇಳಿಲ್ಲ!

''ನಿಮಗೆ ನಟನೆ ಬರಲ್ಲ ಅಂತ ನಾನು ಅವರಿಗೆ ಹೇಳಿಲ್ಲ. We need to work on the timing, work on the body language, how to bring it to the mark'' ಎನ್ನುವ ಅರ್ಥದಲ್ಲಿ ನಾನು ಮೆಸೇಜ್ ಮಾಡಿದ್ದು. ಅವರು ಬ್ಯಾಡ್ ಆಕ್ಟರ್ ಅಂತ ಅಲ್ಲ. ಪಾತ್ರಕ್ಕಾಗಿ ಅವರ ಪ್ರಿಪರೇಷನ್ ಏನೂ ಇರ್ಲಿಲ್ಲ. 15 ದಿನಗಳ ಹಿಂದೆ ಸ್ಕ್ರಿಪ್ಟ್ ಕೊಟ್ಟಿದ್ದರೂ, ಒಂದೇ ಒಂದು ಡೈಲಾಗ್ ಕೂಡ ಅವರು ಓದಿರಲಿಲ್ಲ'' - ಇಮ್ರಾನ್ ಸರ್ದಾರಿಯಾ [ಮಾಲಾಶ್ರೀ ನಟನೆ ಬಗ್ಗೆ ಅಂಬಿ, ಶ್ರುತಿ, ಉಮಾಶ್ರೀ ಮಾಡಿದ ಕಾಮೆಂಟ್ ಏನು?]

ಮೊದಲ ದಿನವೇ ಲೇಟ್ ಆಗಿ ಬಂದ ಮಾಲಾಶ್ರೀ!

''ಮೊದಲ ದಿನವೇ ಶೂಟಿಂಗ್ ಗೆ ಲೇಟ್ ಆಗಿ ಬಂದ್ರು. 9.30ಕ್ಕೆ ಬರ್ತೀನಿ ಅಂತ ಹೇಳಿದವರು, 1.30ಕ್ಕೆ ಬಂದ್ರು. ಅವರು 9.30ಕ್ಕೆ ಬರ್ತಾರೆ ಅಂತ ಹೇಳಿದ್ಮೇಲೆ, ನಾನೂ ಸೇರಿದಂತೆ ಇಡೀ ಚಿತ್ರತಂಡ ಶೂಟಿಂಗ್ ಸ್ಪಾಟ್ ನಲ್ಲಿ ಬೆಳಗ್ಗೆ 6.30ಕ್ಕೆ ಇದ್ವಿ. 1.30ಕ್ಕೆ ಅವರು ಬಂದ ಮೇಲೆ ಊಟ ಮಾಡಿ 3.30ಕ್ಕೆ ಶೂಟಿಂಗ್ ಶುರು ಮಾಡಿದ್ದೀವಿ'' - ಇಮ್ರಾನ್ ಸರ್ದಾರಿಯಾ

ಎರಡನೇ ದಿನದ ಕಥೆ!

''ಎರಡನೇ ದಿನ 9.30ಕ್ಕೆ ಬರ್ತೀನಿ ಅಂದವರು 11.30 ಕ್ಕೆ ಬಂದಿದ್ದಾರೆ. 2 ಗಂಟೆ ವೇಸ್ಟ್. ಅಷ್ಟರಲ್ಲಿ ನಾನು ನನ್ನ ಸ್ಪೀಡ್ ಗೆ ಒಂದು ಸೀನ್ ಶೂಟ್ ಮಾಡುತ್ತಿದ್ದೆ'' - ಇಮ್ರಾನ್ ಸರ್ದಾರಿಯಾ

ಏನೂ ಮಾಡಿಲ್ಲ!

''ಮೊದಲ ದಿನ ಅಡ್ಜಸ್ಟ್ ಮಾಡಬಹುದು. ಆದ್ರೆ, ಪ್ರಿಪರೇಷನ್ ಇಲ್ಲ ಅಂದ್ರೆ ಹೇಗೆ. ಹುಬ್ಬಳ್ಳಿ ಭಾಷೆ ಕಲಿಯುತ್ತೇನೆ ಅಂತ ಹೇಳಿದ್ರು. ಆದ್ರೆ, ಅದೂ ಆಗಿಲ್ಲ'' - ಇಮ್ರಾನ್ ಸರ್ದಾರಿಯಾ

ನನಗೂ ಕನಸು ಇದೆ!

''ಒಬ್ಬ ಮೇಕರ್ ಆಗಿ ನನಗೂ ಒಂದು ವಿಶನ್, ಡ್ರೀಮ್ ಅನ್ನೋದು ಇದೆ. ಅವರಿಂದಲೇ ನನ್ನ ಕನಸು ನನಸಾಗಬೇಕು. ಅದಕ್ಕಾಗಿ ಅವರಿಗೆ ನಾನು ಮೆಸೇಜ್ ಮಾಡಿದ್ದು. ಅದು ರಿಕ್ಷೆಸ್ಟ್ ಮೆಸೇಜ್ ಅಷ್ಟೆ. ಅದನ್ನ ಯಾಕೆ ಅವರು ಆ ತರಹ ತಿಳಿದುಕೊಂಡರು?'' - ಇಮ್ರಾನ್ ಸರ್ದಾರಿಯಾ

ದೊಡ್ಡ ನಟರ ಜೊತೆ ನಾನೂ ಕೆಲಸ ಮಾಡಿದ್ದೇನೆ!

''ನಾನು ಇಂಡಸ್ಟ್ರಿಯಲ್ಲಿ ದೊಡ್ಡ ದೊಡ್ಡ ನಟರ ಜೊತೆ ಕೆಲಸ ಮಾಡಿದ್ದೇನೆ. ಶಿವಣ್ಣ ಜೊತೆ ಕೆಲಸ ಮಾಡುವಾಗಲೂ ನಾನು ಅವರ ಬಳಿ ರಿಕ್ಷೆಸ್ಟ್ ಮಾಡಿಕೊಂಡಿದ್ದೇನೆ, ರಿಹರ್ಸಲ್ ಮಾಡೋಣ ಅಂತ. ಹಾಗಂದ ಮಾತ್ರಕ್ಕೆ ಶಿವಣ್ಣ ಡ್ಯಾನ್ಸರ್ ಅಲ್ಲ, ನಟ ಅಲ್ಲ ಅಂತ ಅಲ್ಲ'' - ಇಮ್ರಾನ್ ಸರ್ದಾರಿಯಾ

ನೆಗೆಟಿವ್ ಆಗಿ ಹೇಳ್ಲಿಲ್ಲ!

''ನಾನು ಅದನ್ನ ನೆಗೆಟಿವ್ ಆಗಿ ಹೇಳಲೇ ಅಲ್ಲ. ಅವರು ಯಾಕೆ ನೆಗೆಟಿವ್ ಆಗಿ ತೆಗೆದುಕೊಂಡರು? ನಾನು ಅವರಿಗೆ ನೋವು ಮಾಡಿಲ್ಲ. ನಾವೆಲ್ಲ ಒಂದೇ ಫ್ಯಾಮಿಲಿ ಇದ್ದ ಹಾಗೆ. ಸಿನಿಮಾದಲ್ಲಿ ಏನಾದರೂ ಹೆಚ್ಚು ಕಮ್ಮಿ ಆದರೆ ಎಲ್ಲರೂ ಒಟ್ಟಿಗೆ ಇರಬೇಕು'' - ಇಮ್ರಾನ್ ಸರ್ದಾರಿಯಾ

ನನಗೆ ವಾಪಸ್ ಕೇಳಬಹುದಿತ್ತು!

''ಆ ಮೆಸೇಜ್ ನಿಂದ ಅವರಿಗೆ ಹರ್ಟ್ ಆಗಿದ್ರೆ, ನನಗೆ ಮತ್ತೆ ರಿಪ್ಲೈ ಮಾಡಬಹುದಿತ್ತು. ಇಲ್ಲಾಂದ್ರೆ, ಮನೆಗೆ ಕರೆಸಿ ಮಾತನಾಡಬಹುದಿತ್ತು. ಹಾಗೆ ಯಾಕೆ ಮಾಡಲಿಲ್ಲ.? ಒಂದು ಫೋನ್ ಇಲ್ಲ, ಮೆಸೇಜ್ ಇಲ್ಲ ಏನೂ ಇಲ್ಲ. ನನ್ನಿಂದ ತೊಂದರೆ ಆದರೆ, ವಾಣಿಜ್ಯ ಮಂಡಳಿ ಇದೆ. ಅಲ್ಲೇ ಹೇಳಬಹುದಿತ್ತು'' - ಇಮ್ರಾನ್ ಸರ್ದಾರಿಯಾ

ಟೈಮಿಂಗ್ ಸಮಸ್ಯೆ!

''ಟೈಮಿಂಗ್ ವಿಚಾರವಾಗಿ ತುಂಬಾ ಸಮಸ್ಯೆ ಆಯ್ತು. ನಾವೆಲ್ಲಾ ಟೈಮ್ ಲಿಮಿಟ್ ನಲ್ಲಿ ಕೆಲಸ ಮಾಡ್ತಿದ್ವಿ. ಈಗಲೂ ಹೇಳುತ್ತೇನೆ, ನಾನು ಅವರಿಗೆ ನಟನೆ ಬರೋದಿಲ್ಲ ಅಂತ ಹೇಳಿಲ್ಲ'' - ಇಮ್ರಾನ್ ಸರ್ದಾರಿಯಾ

ಬಜೆಟ್ ಕೈ ಮೀರಿತ್ತು!

''ಬಜೆಟ್ ಕೈ ಮೀರಿ ಹೋಗುತ್ತಿತ್ತು. Performance not up to the mark ಅಂದ್ರೆ ಕಾರ್ಯ ನಿರ್ವಹಣೆ. ಅವರಿಗೆ ಆಕ್ಟ್ ಮಾಡೋಕೆ ಬರಲ್ಲ ಅಂತ ಅಲ್ಲ. ನನಗೆ ಪ್ರಿಪರೇಷನ್ ಬೇಕು. ಒಬ್ಬ ಡೈರೆಕ್ಟರ್ ಆಗಿ ನಟರ ಹತ್ರ ರಿಕ್ವೆಸ್ಟ್ ಮಾಡೋದು ತಪ್ಪಾ?'' - ಇಮ್ರಾನ್ ಸರ್ದಾರಿಯಾ

ನನಗೂ 12 ವರ್ಷ ಅನುಭವ ಇದೆ!

''ನಾನು ಅವರ ಬಳಿ ಹೋಗಿ ಎಷ್ಟೊತ್ತಿಗೆ ಬರ್ತೀರಾ ಸೆಟ್ ಗೆ ಅಂತ ಕೇಳಿದ್ದೀನೇ ಹೊರತು, ಇಷ್ಟೊತ್ತಿಗೇ ಬರಬೇಕು ಅಂತ ಹೇಳಿಲ್ಲ. ಸ್ಟಾರ್ ಹತ್ರ ಹೇಗೆ ನಡೆದುಕೊಳ್ಳಬೇಕು ಅನ್ನೋದು ನನಗೂ ಗೊತ್ತಿದೆ. ನಾನು ಹನ್ನೆರಡು ವರ್ಷದಿಂದ ಇಂಡಸ್ಟ್ರಿಯಲ್ಲಿ ಇದ್ದೇನೆ'' - ಇಮ್ರಾನ್ ಸರ್ದಾರಿಯಾ

ನಾಲ್ಕುವರೆ ಲಕ್ಷ ವೇಸ್ಟ್!

''ಒಬ್ಬ ಟೆಕ್ನೀಷಿಯನ್ ಆಗಿ ನನಗೂ ಭಯ ಆಗುತ್ತೆ. ನಿರ್ದೇಶಕನಾಗಿ ನನಗೆ ಇದು ಎರಡನೇ ಸಿನಿಮಾ. ಮೊದಲ ದಿನ ಎರಡುವರೆ ಲಕ್ಷ, ಎರಡನೇ ದಿನ ಎರಡು ಲಕ್ಷ ಸುಮ್ಮನೆ ವೇಸ್ಟ್ ಆಗಿದೆ. ಯಾವ ನಿರ್ಮಾಪಕ ತಾನೆ ಸುಮ್ಮನೆ ಬಿಡ್ತಾರೆ ಹೇಳಿ?'' - ಇಮ್ರಾನ್ ಸರ್ದಾರಿಯಾ

ಕೆ.ಮಂಜು ಏನು ಹೇಳಿದ್ರು?

''ಸಿನಿಮಾ ಸ್ಟಾಪ್ ಮಾಡಿಬಿಡು ಬೇಡ. ಅವಾಗ ಲಾಸ್ ಆಗುವ ಬದಲು ಇವಾಗ್ಲೇ ಲಾಸ್ ಆಗ್ಲಿ, ಪರ್ವಾಗಿಲ್ಲ ಅಂತ ಕೆ.ಮಂಜು ನನಗೆ ಹೇಳಿದ್ರು'' - ಇಮ್ರಾನ್ ಸರ್ದಾರಿಯಾ

English summary
Choreographer turned Director Imran Sardhariya lashes back to Kannada Actress Malashri while addressing the press meet today in Green House, Bengaluru over 'Uppu Huli Khara' Controversy.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada