For Quick Alerts
  ALLOW NOTIFICATIONS  
  For Daily Alerts

  ಸ್ಟಾರ್ ಡೈರೆಕ್ಟರ್ ಇಂದ್ರಜಿತ್ ಲಂಕೇಶ್ ರಾಜಕೀಯಕ್ಕೆ ಎಂಟ್ರಿ

  By Bharath Kumar
  |

  ಕನ್ನಡ ಚಿತ್ರರಂಗದ ಸ್ಟಾರ್ ಡೈರೆಕ್ಟರ್ ಹಾಗೂ ಸ್ಟೈಲಿಶ್ ಡೈರೆಕ್ಟರ್ ಎಂದು ಗುರುತಿಸಿಕೊಂಡಿರುವ ಇಂದ್ರಜಿತ್ ಲಂಕೇಶ್ ಅವರು ರಾಜಕೀಯ ಪ್ರವೇಶ ಮಾಡಲಿದ್ದಾರಂತೆ. ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಇಂದ್ರಜಿತ್ ಲಂಕೇಶ್ ಅವರು ಬಿಜೆಪಿ ಪಕ್ಷವನ್ನ ಸೇರುವ ಬಗ್ಗೆ ಸುಳಿವು ನೀಡಿದ್ದಾರೆ ಎಂದು ಕನ್ನಡಪ್ರಭ ಸುದ್ದಿ ಪತ್ರಿಕೆ ವರದಿ ಮಾಡಿದೆ.

  ಈ ಕಾರ್ಯಕ್ರಮದಲ್ಲಿ ಮಾತನಾಡಿದ ಇಂದ್ರಜಿತ್ ಲಂಕೇಶ್ ಅವರು ''25 ವರ್ಷಗಳ ಕಾಲ ಪತ್ರಿಕೋದ್ಯಮದಲ್ಲಿ ಮತ್ತು ಚಿತ್ರರಂಗದಲ್ಲಿದ್ದೆ. ಸುದೀರ್ಘ ಪಯಣದಲ್ಲಿ ಜನರ ಸಾಕಷ್ಟು ಪ್ರೀತಿ ಹಾಗೂ ವಾತ್ಸಲ್ಯವನ್ನು ಸಂಪಾದಿಸಿದ್ದೇನೆ. ರಾಜಕೀಯವೆಂಬುದು ಮತ್ತೊಂದು ಹೊಸ ಜವಾಬ್ದಾರಿಯಾಗಿದೆ'' ಎಂದಿದ್ದಾರೆ.

  ''ರಾಜಕೀಯ ಸೇರ್ಪಡೆಗೆ ಯಡಿಯೂರಪ್ಪ ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನಾಯಕತ್ವ ಪ್ರೇರಣೆಯಾಗಿದೆ. ಬಿಜೆಪಿಯ ಸಿದ್ಧಾಂತಗಳ ಬಗ್ಗೆ ತಿಳಿದುಕೊಂಡಿದ್ದೇನೆ. ರಾಜಕೀಯ ಪ್ರವೇಶ ಕೇವಲ ಆಲೋಚನೆಯಷ್ಟೇ, ರಾಜಕೀಯ ಪ್ರವೇಶ ಕುರಿತು ಇಷ್ಟು ಬೇಗ ದೃಢೀಕರಣ ನೀಡಲು ಸಾಧ್ಯವಿಲ್ಲ. ರಾಜಕೀಯ ಹೊಸ ಜವಾಬ್ದಾರಿಯಾಗಿದ್ದು, ಚಿತ್ರರಂಗವನ್ನು ಬಿಡುವುದಿಲ್ಲ'' ಎಂದು ತಿಳಿಸಿದ್ದಾರಂತೆ.

  2002ರಲ್ಲಿ 'ತುಂಟಾಟ' ಚಿತ್ರದ ಮೂಲಕ ನಿರ್ದೇಶಕರಾದ ಇಂದ್ರಜಿತ್ ಲಂಕೇಶ್ ಅವರು, 'ಲಂಕೇಶ್ ಪತ್ರಿಕೆ', 'ಮೊನಾಲಿಸಾ', 'ಐಶ್ವರ್ಯ', 'ಹುಡುಗ ಹುಡುಗಿ', 'ಲವ್ ಯೂ ಆಲಿಯಾ' ಅಂತಹ ಸಿನಿಮಾಗಳನ್ನ ಡೈರೆಕ್ಟ್ ಮಾಡಿದ್ದಾರೆ. ಅಷ್ಟೇ ಅಲ್ಲದೇ ಪತ್ರಕರ್ತರಾಗಿ, ಕಿರುತೆರೆ ಕಾರ್ಯಕ್ರಮಗಳಲ್ಲಿಯೂ ತೊಡಗಿಸಿಕೊಂಡಿದ್ದಾರೆ.

  English summary
  Filmmaker Indrajit Lankesh who is mostly known to Sandalwood as the Stylish Director will be joining politics soon.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X