For Quick Alerts
  ALLOW NOTIFICATIONS  
  For Daily Alerts

  ಪಿರಂಗಿಪುರ ಪ್ರವೇಶ ಮಾಡಿದ ಸುನೀಲ್ ಶೆಟ್ಟಿ

  By Pavithra
  |
  ಪೈಲ್ವಾನ್ ನಂತರ ಮತ್ತೊಂದು ಕನ್ನಡ ಸಿನಿಮಾದಲ್ಲಿ ಸುನೀಲ್ ಶೆಟ್ಟಿ...!! | Filmibeat Kannada

  ಸಂಚಾರಿ ವಿಜಯ್ ಅವರ ಫಸ್ಟ್ ಲುಕ್ ನಿಂದಲೇ ಸಖತ್ ಸುದ್ದಿ ಮಾಡಿದ್ದ 'ಪಿರಂಗಿಪುರ' ಸಿನಿಮಾ ಸಾಕಷ್ಟು ದಿನಗಳ ಗ್ಯಾಪ್ ನಂತರ ಮತ್ತೆ ಸುದ್ದಿ ಮಾಡಿತ್ತು. ಬಾಲಿವುಡ್ ನಟ ಸುನೀಲ್ ಶೆಟ್ಟಿ ಚಿತ್ರದಲ್ಲಿ ಅಭಿನಯಿಸುತ್ತಾರೆ ಎನ್ನುವ ವಿಚಾರ ಎಲ್ಲೆಡೆ ಹರಡಿತ್ತು.

  ನಂತರ ಸುನೀಲ್ ಶೆಟ್ಟಿ ನಾನು 'ಪೈಲ್ವಾನ್' ಸಿನಿಮಾ ಬಿಟ್ಟು ಮತ್ಯಾವುದೇ ಕನ್ನಡ ಚಿತ್ರದಲ್ಲಿ ಅಭಿನಯ ಮಾಡುತ್ತಿಲ್ಲ ಎಂದು ಟ್ವಿಟ್ಟರ್ ಮೂಲಕ ಖಚಿತ ಪಡಿಸಿದ್ದರು. ಆದರೆ 'ಪಿರಂಗಿಪುರ' ಸಿನಿಮಾ ನಿರ್ದೇಶಕ ಜನಾರ್ಧನ್ ಪಿ ಜಾನಿ ಸುನೀಲ್ ಶೆಟ್ಟಿ ಅಭಿನಯಿಸುತ್ತಿರುವುದು ನಿಜ ಎಂದು ಖಾತ್ರಿ ಪಡಿಸಿದ್ದಾರೆ.

  'ಪೈಲ್ವಾನ್' ತಂಡ ಸೇರುವ ಮೊದಲ ಸುನೀಲ್ ಶೆಟ್ಟಿ ಮಾಡಿದ ಟ್ವೀಟ್ 'ಪೈಲ್ವಾನ್' ತಂಡ ಸೇರುವ ಮೊದಲ ಸುನೀಲ್ ಶೆಟ್ಟಿ ಮಾಡಿದ ಟ್ವೀಟ್

  ಸುನೀಲ್ ಶೆಟ್ಟಿ ಚಿತ್ರದಲ್ಲಿ ರಾಜನ ಪಾತ್ರವನ್ನು ನಿರ್ವಹಿಸುತ್ತಿದ್ದಾರಂತೆ. ಸದ್ದಿಲ್ಲದೆ ಒಂದು ಶೆಡ್ಯೂಲ್ ಚಿತ್ರೀಕರಣ ಮುಗಿಸಿರುವ ನಿರ್ದೇಶಕರು ಮೂರು ಸಾವಿರ ವರ್ಷದ ಹಿಂದಿನ ಕಥೆಯನ್ನ ಪ್ರೇಕ್ಷಕರ ಮುಂದೆ ತರುವ ಪ್ರಯತ್ನಕ್ಕೆ ಕೈ ಹಾಕಿದ್ದಾರೆ.

  ಸಂಚಾರಿ ವಿಜಯ್ ಸೇರಿದಂತೆ ಚಿತ್ರದಲ್ಲಿ ನಾಯಕಿಯಾಗಿ ಗಾನವಿ ಅಭಿನಯ್ ಮಾಡುತ್ತಿದ್ದಾರಂತೆ. ಕನ್ನಡ, ಹಿಂದಿ, ತಮಿಳು, ತೆಲುಗು ಮತ್ತು ಮಲೆಯಾಳಂ ನಲ್ಲಿ ಚಿತ್ರ ತಯಾರಾಗಲಿದ್ದು 25ಕೋಟಿ ವ್ಯಚ್ಚದಲ್ಲಿ ಚಿತ್ರ ನಿರ್ಮಾಣವಾಗಲಿದ್ಯಂತೆ.

  English summary
  Bollywood actor Sunil Shetty is acting in Kannada film Pirangipura. Director Janardhan P Johnny said that Sunil Shetty is doing the film in Pirangirpura.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X