For Quick Alerts
  ALLOW NOTIFICATIONS  
  For Daily Alerts

  'ಭರತ-ಬಾಹುಬಲಿ' ಟ್ರೈಲರ್ ರಿಲೀಸ್: ಸಿನಿಮಾ ನೋಡಿ 1 ಕೋಟಿ ಗೆಲ್ಲಿ

  |

  ಮಾಸ್ಟರ್ ಪೀಸ್ ಖ್ಯಾತಿಯ ನಿರ್ದೇಶಕ ಮಂಜು ಮಾಂಡವ್ಯ ಸಾರಥ್ಯದಲ್ಲಿ ಮೂಡಿ ಬಂದಿರುವ ಸಿನಿಮಾ ಶ್ರೀ ಭರತ ಬಾಹುಬಲಿ. ಇತ್ತೀಚಿಗಷ್ಟೆ ರಾಕಿಂಗ್ ಸ್ಟಾರ್ ಯಶ್ ಶ್ರೀ ಭರತ ಬಾಹುಬಲಿ ಚಿತ್ರದ ಟ್ರೈಲರ್ ರಿಲೀಸ್ ಮಾಡಿ ಶುಭ ಹಾರೈಸಿದ್ದಾರೆ. ಚಿತ್ರದಲ್ಲಿ ನಿರ್ದೇಶಕ ಮಂಜು ಮಾಂಡವ್ಯ ಮತ್ತು ಚಿಕ್ಕಣ್ಣ ಪ್ರಮುಖ ಪಾತ್ರದಲ್ಲಿ ಮಿಂಚಿದ್ದಾರೆ.

  ಕಾಮಿಡಿ ಡ್ರಾಮ ಟ್ರೈಲರ್ ಗೆ ಫಿದಾ ಆಗಿದ್ದಾರೆ. ಸದ್ಯ ಟ್ರೈಲರ್ ಮೂಲಕ ಸದ್ದು ಮಾಡುತ್ತಿರುವ ಭರತ ಬಾಹುಬಲಿ ಇದೇ ತಿಂಗಳು 17ಕ್ಕೆ ರಿಲೀಸ್ ಆಗುತ್ತಿದೆ. ವಿಶೇಷ ಅಂದರೆ ಭರತ ಬಾಹುಬಲಿ ಸಿನಿಮಾ ನೋಡಿ 1 ಕೋಟಿ ರೂಪಾಯಿ ಬಹುಮಾನ ಗೆಲ್ಲಬಹುದು. 1 ಕೋಟಿನಾ ಅಂತ ಅಚ್ಚರಿಯಾಗುತ್ತಿದೆಯಾ. ಅಚ್ಚರಿ ಎನಿಸಿದರು ಇದು ನಿಜ.

  ಚಿಕ್ಕಣ್ಣ ಹೀರೋ ಆಗುವುದು ಪಕ್ಕಾ: ಗುಟ್ಟು ಬಿಚ್ಚಿಟ್ಟ ನಿರ್ದೇಶಕಚಿಕ್ಕಣ್ಣ ಹೀರೋ ಆಗುವುದು ಪಕ್ಕಾ: ಗುಟ್ಟು ಬಿಚ್ಚಿಟ್ಟ ನಿರ್ದೇಶಕ

  ಭರತ ಬಾಹುಬಲಿ ಸಿನಿಮಾ ನಿರ್ಮಾಪಕ ಐಶ್ವರ್ಯ ಡೆವಲಪರ್ಸ್ ನ ಶಿವಕುಮಾರ್. ಸಿನಿಮಾ ಗೆಲುವಿಗಾಗಿ ನಿರ್ಮಾಪಕರು ಮಾಸ್ಟರ್ ಪ್ಲಾನ್ ಮಾಡಿದ್ದಾರೆ. ಮೊದಲೆರಡು ವಾರ ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಕರೆತರಲು ಕೋಟಿ ಆಸೆ ಮೂಡಿಸಿದ್ದಾರೆ. ಅಂದರೆ ಮೊದಲೆರಡು ವಾರ ಸಿನಿಮಾ ಟಿಕೆಟ್ ಜೊತೆಗೆ ಲಕ್ಕಿ ಕೂಪನ್ ಅನ್ನು ನೀಡಲಾಗುತ್ತೆ.

  10 ಮಂದಿಗೆ 5 ಲಕ್ಷ ಬೆಲೆಯ ಕಾರು ಮತ್ತು ಐವತ್ತು ಲಕ್ಷರೂಗಳ ಚಿನ್ನಾಭರಣಗಳನ್ನು ಲಕ್ಕಿ ಡಿಪ್ ಮೂಲಕ ನೀಡಲಾಗುತ್ತದೆಯಂತೆ. ಸಿನಿಮಾ ರಿಲೀಸ್ ಆಗಿ 15 ದಿನಗಳ ನಂತರ ಅದೃಷ್ಟವಂತರಿಗೆ ಕಾರು ಮತ್ತು ಚಿನ್ನಾಭರಣಗಳನ್ನು ವಿತರಿಸಲಿದ್ದಾರೆ. ಕೋಟಿ ಆಸೆಗಾದರು ಜನ ಚಿತ್ರಮಂದಿರಕ್ಕೆ ಬರ್ತಾರೆ ಎನ್ನುವುದು ಚಿತ್ರತಂಡದ ಪ್ಲಾನ್.

  ಸಿನಿಮಾ ರಿಲೀಸ್ ಸಮಯದಲ್ಲಿ ನಾನಾರೀತಿಯ ಪ್ರಮೋಷನ್ ಗಳನ್ನು ಮಾಡುತ್ತಾರೆ. ಆದರೆ ಇದೆ ಮೊದಲ ಬಾರಿಗೆ ಇಷ್ಟು ದೊಡ್ಡ ಮೊತ್ತದ ಬಹುಮಾನವನ್ನು ನೀಡುವುದಾಗಿ ಹೇಳಿ ಪ್ರೇಕ್ಷಕರನ್ನು ಆಕರ್ಶಿಸುತ್ತಿದ್ದಾರೆ. ಸದ್ಯ ಟ್ರೈಲರ್ ಮೂಲಕ ಸದ್ದು ಮಾಡುತ್ತಿರುವ ಭರತ ಬಾಹುಬಲಿ ಸಿನಿಮಾ ಹೇಗಿರಲಿದೆ ಎನ್ನುವ ಕುತೂಹಲ ಪ್ರೇಕ್ಷಕರಲ್ಲಿ ಇದೆ.

  English summary
  Kannada Director Manju Mandavya and Chikkanna starrer Sri Bharatha Bahubali trialer released. This film set to release on January 17th.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X