»   » ಮತ್ತೊಂದು 'ಮಾಸ್ಟರ್ ಪೀಸ್' ರೆಡಿ ಮಾಡಲು ಮಂಜು ಮಾಂಡವ್ಯ ರೆಡಿ

ಮತ್ತೊಂದು 'ಮಾಸ್ಟರ್ ಪೀಸ್' ರೆಡಿ ಮಾಡಲು ಮಂಜು ಮಾಂಡವ್ಯ ರೆಡಿ

Posted By:
Subscribe to Filmibeat Kannada

'ಮಾಸ್ಟರ್ ಪೀಸ್'.. ರಾಕಿಂಗ್ ಸ್ಟಾರ್ ಯಶ್ ಅಭಿನಯದ ಸಿನಿಮಾ. ತಮ್ಮ ಸಂಭಾಷಣೆ ಮೂಲಕ ಸಿನಿಮಾ ರಂಗದಲ್ಲಿ ಹೆಸರು ಮಾಡಿದ್ದ ನಿರ್ದೇಶಕ ಹಾಗೂ ಬರಹಗಾರ ಮಂಜು ಮಾಂಡವ್ಯ ಡೈರೆಕ್ಟ್ ಮಾಡಿದ ಚೊಚ್ಚಲ ಚಿತ್ರ.

ಮೊದಲ ನಿರ್ದೇಶನದ ಸಿನಿಮಾದಲ್ಲೇ ಬಾಕ್ಸ್ ಆಫೀಸ್ ನಲ್ಲಿ ಬಾರಿ ಸೌಂಡ್ ಮಾಡಿದ್ದ ಮಂಜು ಹೊಸ ಸಿನಿಮಾ ಯಾವಾಗ ಮಾಡುತ್ತಾರೆ ಅನ್ನುವ ಕುತೂಹಲಕ್ಕೆ ತೆರೆ ಬಿದ್ದಿದೆ. ರಿಯಲ್ ಸ್ಟಾರ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಬೇಕಿದ್ದ ಮಂಜು ಹೊಸ ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬರಲು ತಯಾರಿ ನಡೆಸಿದ್ದಾರೆ.

ರಾಜಕೀಯಕ್ಕೆ ಬಂದ ನಂತರವೂ ಸಿನಿಮಾಗಳಲ್ಲೂ ಕಾಣಿಸಿಕೊಳ್ಳುತ್ತೇನೆ ಎಂದು ಉಪ್ಪಿ ತಿಳಿಸಿದ್ದರು. ಆದರೆ ಉಪೇಂದ್ರ ಸದ್ಯ ಚುನಾವಣೆಯ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಹಾಗಾದರೆ ಮಂಜು ಮಾಂಡವ್ಯ ಉಪ್ಪಿ ಅವರಿಗಾಗಿ ಮಾಡಿಕೊಂಡ ಕಥೆಯನ್ನ ಬೇರೆ ನಾಯಕನಿಗೆ ಸಿನಿಮಾ ಮಾಡುತ್ತಿದ್ದಾರ? ಮಂಜು ಈ ಬಾರಿ ಯಾವ ನಾಯಕನಿಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ? ಚಿತ್ರ ಯಾವಾಗ ಸೆಟ್ಟೇರುತ್ತೆ? ಇವೆಲ್ಲವುಗಳ ಸಂಪೂರ್ಣ ಮಾಹಿತಿ ಇಲ್ಲಿದೆ. ಮುಂದೆ ಓದಿ

ಹೊಸ ಸಿನಿಮಾ ಅನೌನ್ಸ್ ಮಾಡಿದ ಮಂಜು ಮಾಂಡವ್ಯ

ಮಾಸ್ಟರ್ ಪೀಸ್ ಸಿನಿಮಾವನ್ನ ಕನ್ನಡ ಸಿನಿಮಾರಂಗಕ್ಕೆ ನೀಡಿದ ನಿರ್ದೇಶಕ ಮಂಜು ಮಾಂಡವ್ಯ ತಮ್ಮ ಎರಡನೇ ಸಿನಿಮಾಗೆ ಆಕ್ಷನ್ ಕಟ್ ಹೇಳಲು ಸಜ್ಜಾಗಿದ್ದಾರೆ. ಹೊಸ ವರ್ಷದಂದು ಹೊಸ ಚಿತ್ರದ ಬಗ್ಗೆ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ.

ಕಮರ್ಷಿಲ್ ಜೊತೆಗೆ ರೊಮ್ಯಾಂಟಿಕ್

ಕಮರ್ಷಿಯಲ್ ಸಿನಿಮಾವನ್ನ ಡೈರೆಕ್ಟ್ ಮಾಡಿ ಸಕ್ಸಸ್ ಕಂಡಿದ ನಿರ್ದೇಶಕ ಈ ಬಾರಿ ಪ್ರೇಕ್ಷಕರಿಗೆ ಇಷ್ಟವಾಗುವಂತಹ ಚಿತ್ರವನ್ನ ಡೈರೆಕ್ಟ್ ಮಾಡಲು ನಿರ್ಧರಿಸಿದ್ದಾರೆ. ಚಿತ್ರಕ್ಕೆ ಮಣಿಕಾಂತ್ ಕದ್ರಿ ಸಂಗೀತ ನಿರ್ದೇಶನ ಮಾಡುತ್ತಿದ್ದು ಸಿನಿಮಾದ ಹಾಡುಗಳಿಗೆ ಟ್ಯೂನ್ ಹಾಕುವ ಕೆಲಸ ಶುರುವಾಗಿದೆ.

ಚಿತ್ರದ ಬಗ್ಗೆ ಇಲ್ಲ ಸಂಪೂರ್ಣ ಮಾಹಿತಿ

ಮಂಜು ಮಾಂಡವ್ಯ ಹಾಗೂ ಸಂಗೀತ ನಿರ್ದೇಶಕ ಮಣಿಕಾಂತ್ ಕದ್ರಿ ಇಬ್ಬರು ಸೇರಿ ಮ್ಯೂಸಿಕ್ ಕಂಪೋಸ್ ಮಾಡುತ್ತಿರುವ ವಿಡಿಯೋ ಬಿಡುಗಡೆ ಮಾಡಿರುವ ನಿರ್ದೇಶಕರು ಚಿತ್ರದ ಬಗ್ಗೆ ಇನ್ನು ಹತ್ತು ದಿನಗಳಲ್ಲಿ ಮಾಹಿತಿ ನೀಡುತ್ತಾರಂತೆ.

ಉಪ್ಪಿಗಾಗಿ ಕಾದಿದೆ ಕಥೆ

ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಉಪ್ಪಿ ಅಭಿನಯದ 50ನೇ ಚಿತ್ರವನ್ನ ಮಂಜು ಮಾಂಡವ್ಯ ನಿರ್ದೇಶನ ಮಾಡಬೇಕಿತ್ತು. ಉಪೇಂದ್ರ ರಾಜಕೀಯ ಪ್ರವೇಶ ಮಾಡಿದ ಕಾರಣದಿಂದ ಚಿತ್ರ ಸೆಟ್ಟೇರಲಿಲ್ಲ. ಆದರೆ ಮುಂದಿನ ದಿನಗಳಲ್ಲಿ ರಿಯಲ್ ಸ್ಟಾರ್ ಅವರಿಗೆ ಚಿತ್ರ ನಿರ್ದೇಶನ ಮಾಡಲಿದ್ದಾರಂತೆ ಮಂಜು.

English summary
Kannada movie Master piece Director Manju mandavya update facebook status about his next film. Manikanth Kadri is directing the music for the movie. in the next ten days film's title and artists will be announced.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X