For Quick Alerts
  ALLOW NOTIFICATIONS  
  For Daily Alerts

  ಯಾರಾದರೂ ಸಾಧುಕೋಕಿಲಾರನ್ನ ಹುಡುಕಿ ಕೊಡಿ !

  By Pavithra
  |

  ಸಾಧುಕೋಕಿಲಾರನ್ನ ಹುಡುಕಬೇಕಾಗಿದೆ. ಯಾಕಂದರೆ ಕನ್ನಡ ಸಿನಿಮಾರಂಗದ ಹೆಸರಾಂತ ನಿರ್ದೇಶಕರಾದ ನಾಗತಿಹಳ್ಳಿ ಚಂದ್ರಶೇಖರ್ ಸಾಧು ಅವರನ್ನ ಹುಡುಕುತ್ತಿದ್ದಾರೆ. ಯಾರಾದರೂ ಸಾಧುಕೋಕಿಲಾರನ್ನ ಹುಡುಕಿ ಕೊಡಿ ಎಂದು ಮೇಷ್ಟ್ರು ತಮ್ಮ ಫೇಸ್ ಬುಕ್ ಹಾಗೂ ಟ್ವಿಟ್ಟರ್ ನಲ್ಲಿ ಹಾಕಿಕೊಂಡಿದ್ದಾರೆ.

  ನಟ, ನಿರ್ದೇಶಕ , ಸಂಗೀತ ನಿರ್ದೇಶಕ ಸಾಧುಕೋಕಿಲ ನಾಗತಿಹಳ್ಳಿ ಚಂದ್ರಶೇಖರ್ ಬರೆದಿರುವ ಒಂದು ಹಾಡನ್ನ ಅರ್ಧ ಹಾಡಿದ್ದಾರಂತೆ. ಮಿಕ್ಕ ಹಾಡನ್ನ ಅರ್ಧಗಂಟೇಲಿ ಬಂದು ಹಾಡುತ್ತೇನೆ ಎಂದು ಹೋದವರು ಇನ್ನು ಬಂದಿಲ್ಲವಂತೆ. ಹಾಗಾಗಿ "ಸ್ಟುಡಿಯೋಗೆ ಬಂದು ಎರಡುಸಾಲು ಅದ್ಭುತವಾಗಿ ಹಾಡಿ ಅರ್ಧ ಗಂಟೇಲಿ ಬರ್ತೀನಿ ಅಂತ ಯಾವುದೋ ರಾಜಕಾರಣಿಯ ಹಿಂದೆ ಹೋಗಿ ಒಂದು ವಾರವಾಯ್ತು. ದಯವಿಟ್ಟು ಯಾರಾದರೂ ಸಾಧುಕೋಕಿಲಾ ಹುಡುಕಿಕೊಡಿ. ಚರಣ ಬಾಕಿ ಇದೆ: ಎಂದು ಟ್ವಿಟ್ಟರ್ ನಲ್ಲಿ ವಿಡಿಯೋ ಸಮೇತ ಹಾಕಿದ್ದಾರೆ.

  ಕಾಂಗ್ರೆಸ್ ಪ್ರಚಾರಕ್ಕಾಗಿ ರಸ್ತೆಗಿಳಿದರು ಸ್ಟಾರ್ ಕಲಾವಿದರುಕಾಂಗ್ರೆಸ್ ಪ್ರಚಾರಕ್ಕಾಗಿ ರಸ್ತೆಗಿಳಿದರು ಸ್ಟಾರ್ ಕಲಾವಿದರು

  ಮೇಷ್ಟ್ರು ತಿಳಿಸಿರುವಂತೆ ಸಾಧುಕೋಕಿಲ ಈ ಬಾರಿ ಕಾಂಗ್ರೆಸ್ ಪಕ್ಷದ ಪರವಾಗಿ ಸ್ಟಾರ್ ಪ್ರಚಾರಕರಾಗಿ ಕೆಲಸ ಮಾಡುತ್ತಿದ್ದಾರೆ. ಹಾಗಾಗಿ ಚುನಾವಣಾ ಪ್ರಚಾರದಲ್ಲಿ ಬ್ಯುಸಿ ಆಗಿದ್ದಾರೆ. ಆದ್ದರಿಂದ ಸಿನಿಮಾ ಕಾರ್ಯಕ್ರಮಗಳಿಗೆ ಸಿಗುತ್ತಿಲ್ಲ.

  ಅಂದ್ಹಾಗೆ ಸಾಧುಕೋಕಿಲ ಹಾಡಬೇಕಿರುವ ಹಾಡು ಚಂದ್ರಶೇಖರ್ ಬಂಡಿಯಪ್ಪ ನಿರ್ದೇಶನದ ತಾರಕಾಸುರ ಸಿನಿಮಾಗೆ. ನವ ನಾಯಕ ವೈಭವ್ ಸಿನಿಮಾದಲ್ಲಿ ನಾಯಕನಾಗಿ ಅಭಿನಯ ಮಾಡುತ್ತಿದ್ದು ಮಾನ್ವಿತಾ ಹರೀಶ್ ನಾಯಕಿಯಾಗಿ ಅಭಿನಯಿಸಿದ್ದಾರೆ. ಈಗಾಗಲೇ ಚಿತ್ರೀಕರಣ ಮುಗಿಸಿರುವ ನಿರ್ದೇಶಕರು ಚುನಾವಣೆ ನಂತರ ಚಿತ್ರದ ಪ್ರಚಾರ ಆರಂಭ ಮಾಡಲಿದ್ದಾರೆ.

  English summary
  Kannada director Nagathihalli Chandrashekhar has tweeted that "Find someone sadukkila'. Sadhukokikala is a Sing the song written by Nagathihalli Chandrasekhar for Tarakasura cinema.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X