For Quick Alerts
  ALLOW NOTIFICATIONS  
  For Daily Alerts

  ಕಿಚ್ಚ ಸುದೀಪ್ ಒಬ್ಬ ಪರಿಪೂರ್ಣ ನಟ ಎಂದವರು ಯಾರು?

  By Suneetha
  |

  ಚಂದನವನದ ಹಿರಿಯ ನಿರ್ದೇಶಕ ನಾಗತೀಹಳ್ಳಿ ಚಂದ್ರಶೇಖರ್ ಅವರು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರನ್ನು ತುಂಬಾ ಹೊಗಳಿದ್ದಾರೆ.

  ನಟ ಕಿಚ್ಚ ಸುದೀಪ್ ಅವರ ಪರಿಪೂರ್ಣ ನಟನೆ ಹಾಗೂ ಮಾತುಗಳನ್ನು ನೋಡಿದ ನಿರ್ದೇಶಕ ನಾಗತೀಹಳ್ಳಿ ಚಂದ್ರಶೇಖರ್ ಅವರು 'ಸುದೀಪ್ ಒಬ್ಬ ಪರಿಪೂರ್ಣ ನಟ ಹಾಗೂ ಮಾತಿನ ಮೋಡಿಗಾರ ಮತ್ತು ಅವರ ಭಾಷಾ ಶೈಲಿ ಎಂತಹದು, ಎಂಬುದು ಕನ್ನಡದ 'ಬಿಗ್ ಬಾಸ್ 3' ಶೋ ನೋಡುತ್ತಿದ್ದರೆ ತಿಳಿಯುತ್ತದೆ' ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.[ಹೆಜ್ಜೇನು ದಾಳಿ: ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಆಸ್ಪತ್ರೆಗೆ ದಾಖಲು]

  'ಬಿಗ್ ಬಾಸ್ ನಲ್ಲಿ ಕಿಚ್ಚ ಸುದೀಪ್ ಅವರ ಭಾಷೆ ಮಾಗುತ್ತ ಪ್ರಬುದ್ಧವೂ, ಆಕರ್ಷಕವಾಗಿ ಆಗುತ್ತದೆ, ವಿಶೇಷವಾಗಿ ನನಗೆ ಸುದೀಪ್ ಅವರ ಆ ವಿಲಕ್ಷಣ ಸ್ವರ ತುಂಬಾ ಇಷ್ಟ' ಎಂದು ಹಿರಿಯ ನಿರ್ದೇಶಕ ನಾಗತೀಹಳ್ಳಿ ಚಂದ್ರಶೇಖರ ಹೇಳಿಕೊಂಡಿದ್ದಾರೆ.

  ನಿರ್ದೇಶಕ ನಾಗತೀಹಳ್ಳಿ ಚಂದ್ರಶೇಖರ್ ಮತ್ತು ನಟ ಕಿಚ್ಚ ಸುದೀಪ್ ಅವರು 'ಮಾತಾಡ್ ಮಾತಾಡ್ ಮಲ್ಲಿಗೆ' ಚಿತ್ರದಲ್ಲಿ ಒಂದಾಗಿ ಕೆಲಸ ಮಾಡಿದ್ದರು. ಈ ಚಿತ್ರದಲ್ಲಿ ನಟ ಸುದೀಪ್ ಅವರು ನಕ್ಸಲೈಟ್ ಪಾತ್ರದಲ್ಲಿ ಮಿಂಚಿದ್ದರು.[ಸ್ಟಾರ್ ನಟರ ಅಪೂರ್ವ ಮಿಲನಕ್ಕೆ, ಸಾಕ್ಷಿಯಾಗಲಿರುವ ಬಿಗ್ ವೇದಿಕೆ.! ]

  ಅಂದಹಾಗೆ ನಿರ್ದೇಶಕರು ಸದ್ಯಕ್ಕೆ 'ಇಷ್ಟಕಾಮ್ಯ' ಚಿತ್ರದಲ್ಲಿ ಬ್ಯುಸಿಯಾದರೆ, ನಟ ಕಿಚ್ಚ ಸುದೀಪ್ ಅವರು ಎರಡು ಸಿನಿಮಾಗಳಲ್ಲಿ ಮತ್ತು ಕಿರುತೆರೆಯಲ್ಲಿ ಸಖತ್ ಬ್ಯುಸಿಯಾಗಿದ್ದಾರೆ.

  English summary
  Senior director Nagathihalli Chandrashekar is impressed with how actor Sudeep is maturing. He has said that Sudeep's language in Bigg Boss is maturing and becoming more attractive.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X