For Quick Alerts
  ALLOW NOTIFICATIONS  
  For Daily Alerts

  ಯಾವ ಕಾರಣಕ್ಕೂ 'ಪೊಗರು' ಚಿತ್ರವನ್ನು ಒಟಿಟಿಯಲ್ಲಿ ರಿಲೀಸ್ ಮಾಡೊಲ್ಲ: ನಿರ್ದೇಶಕ ನಂದಕಿಶೋರ್

  |

  ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿಮಾನಿಗಳು ಮೂರು ವರ್ಷಗಳಿಂದ ಕಾಯುತ್ತಿರುವ 'ಪೊಗರು' ಚಿತ್ರ ಎಲ್ಲವೂ ಸರಿಯಾಗಿದ್ದರೆ ಈ ವೇಳೆಗಾಗಲೇ ಬಿಡುಗಡೆಯಾಗಿರಬೇಕಿತ್ತು. ಆದರೆ ಲಾಕ್ ಡೌನ್ ಕಾರಣದಿಂದ ಬಿಡುಗಡೆ ಮತ್ತಷ್ಟು ವಿಳಂಬವಾಗಿದೆ.

  ಬಿಡುಗಡೆಗೆ ಸಿದ್ಧವಾಗಿದೆ ಸ್ಟಾರ್ ನಟರ ಸಿನಿಮಾಗಳು | Darshan | Puneeth RajKumar | FILMIBEAT KANNADA

  ಚಿತ್ರದ ಒಂದು ಹಾಡಿನ ಶೂಟಿಂಗ್ ಇನ್ನೂ ಬಾಕಿ ಉಳಿದಿದೆ. ಲಾಕ್ ಡೌನ್‌ ತೆರುವುಗೊಂಡು ಚಿತ್ರೀಕರಣ ನಡೆಸಲು ಸರ್ಕಾರ ಅನುಮತಿ ನೀಡಿದ ನಂತರ ಹಾಡಿನ ಭಾಗದ ಚಿತ್ರೀಕರಣ ಪೂರ್ಣಗೊಂಡು ಸಿನಿಮಾ ಬಿಡುಗಡೆಯಾಗಲಿದೆ. ಆ ವೇಳೆಗೆ ಚಿತ್ರಮಂದಿರಗಳಲ್ಲಿಯೂ ಪ್ರದರ್ಶನಕ್ಕೆ ಅವಕಾಶ ಸಿಗಲಿದೆ ಎನ್ನುವುದು ಚಿತ್ರತಂಡದ ಆಶಯ. 'ಪೊಗರು' ಚಿತ್ರದ ಚಿತ್ರೀಕರಣ ವಿಳಂಬವಾಗಲು ಕಾರಣವೇನು? ಈಗ ಚಿತ್ರ ಯಾವ ಹಂತದಲ್ಲಿದೆ? ಯಾವಾಗ ಬಿಡುಗಡೆಯಾಗಲಿದೆ? ಮುಂತಾದ ವಿವರಗಳನ್ನು ನಿರ್ದೇಶಕ ನಂದ ಕಿಶೋರ್, 'ಫಿಲ್ಮಿಬೀಟ್' ಜತೆ ಹಂಚಿಕೊಂಡಿದ್ದಾರೆ.

  ನಿರಾಶೆ ಮೂಡಿಸುವುದಿಲ್ಲ

  ನಿರಾಶೆ ಮೂಡಿಸುವುದಿಲ್ಲ

  'ಇದುವರೆಗೂ ಆರು ಸಿನಿಮಾಗಳನ್ನು ನೀಡಿದ್ದೇನೆ. ರೀಮೇಕ್‌ಲ್ಲಿಯೂ ಹಿಟ್ ನೀಡಿದ್ದೇನೆ, ಸ್ವಮೇಕ್‌ಲ್ಲಿಯೂ ಹಿಟ್ ನೀಡಿದ್ದೇನೆ. 'ವಿಕ್ಟರಿ' ಮಾಡಿದ್ದು ನಾನೇ, 'ಅಧ್ಯಕ್ಷ' ಮಾಡಿದ್ದೂ ನಾನೇ 'ರನ್ನ' ಮಾಡಿದ್ದೂ ನಾನೇ. ಮೂರು ಸಿನಿಮಾ ನೇರ ಸಿನಿಮಾ ಮೂರು ರೀಮೇಕ್ ಹಿಟ್ ನೀಡಿದ್ದೇನೆ. ಇದು ಸ್ಟ್ರೈಟ್ ಫಿಲಂ. ಒಂದೇ ಒಂದು ದೃಶ್ಯ ಕೂಡ ಹಳತು ಎನಿಸದಷ್ಟು ಫ್ರೆಶ್ ಆಗಿರುತ್ತದೆ. ನೀವು ನಿರೀಕ್ಷೆ ಮಾಡಿರದ ರೀತಿಯಲ್ಲಿನ ಚಿತ್ರಕಥೆ, ಗೆಟಪ್, ಪ್ರೆಸೆಂಟೇಷನ್ ಇರುತ್ತದೆ. ಎಲ್ಲದಕ್ಕೂ ಕಷ್ಟಪಟ್ಟಿದ್ದೇವೆ. ನಿಮ್ಮನ್ನು ನಿರಾಶೆ ಮಾಡುವುದಿಲ್ಲ' ಎಂದು ನಂದಕಿಶೋರ್ ಭರವಸೆ ನೀಡಿದ್ದಾರೆ.

  'ಪೊಗರು' ಸಂಗೀತದ ಕುರಿತಾದ ಆರೋಪಕ್ಕೆ ನಿರ್ದೇಶಕ ನಂದಕಿಶೋರ್ ನೀಡಿದ ಉತ್ತರ'ಪೊಗರು' ಸಂಗೀತದ ಕುರಿತಾದ ಆರೋಪಕ್ಕೆ ನಿರ್ದೇಶಕ ನಂದಕಿಶೋರ್ ನೀಡಿದ ಉತ್ತರ

  ಹಾಡಿನ ಚಿತ್ರೀಕರಣ ಬಾಕಿ

  ಹಾಡಿನ ಚಿತ್ರೀಕರಣ ಬಾಕಿ

  ಒಂದು ಸಾಂಗ್ ಚಿತ್ರೀಕರಣ ಮಾತ್ರ ಬಾಕಿ ಇದೆ. ಪೋಸ್ಟ್ ಪ್ರೊಡಕ್ಷನ್ ಕೆಲಸ ನಡೆಯುತ್ತಿದ್ದು, ಹೆಚ್ಚೂ ಕಡಿಮೆ ಎಡಿಟಿಂಗ್ ಮುಗಿಸಿ ಫಸ್ಟ್ ಹಾಫ್ ರೀ ರೆಕಾರ್ಡಿಂಗ್ ಹೋಗಿದೆ. ಡಿಐ ಶುರುವಾಗಿದೆ. ನಾವು ಮೊದಲು ಏಪ್ರಿಲ್ 27ರಂದು ಅಥವಾ ಮೇ 1ರ ಕಾರ್ಮಿಕರ ದಿನಾಚರಣೆಯಂದು ಬಿಡುಗಡೆ ಮಾಡಲು ಉದ್ದೇಶಿಸಿದ್ದೆವು. ಕೊರೊನಾ ಬಂದು ಎಲ್ಲ ವ್ಯತ್ಯಾಸ ಆಗಿದೆ ಎಂದು ಹೇಳಿದರು.

  ಚಿತ್ರಮಂದಿರಕ್ಕೆ ಅವಕಾಶ ನೀಡಿದಾಗ ಬಿಡುಗಡೆ

  ಚಿತ್ರಮಂದಿರಕ್ಕೆ ಅವಕಾಶ ನೀಡಿದಾಗ ಬಿಡುಗಡೆ

  ಸರ್ಕಾರ ಯಾವಾಗ ಚಿತ್ರಮಂದಿರಗಳನ್ನು ತೆರೆಯಲು ಮತ್ತು ಚಿತ್ರೀಕರಣಕ್ಕೆ ಸಂಪೂರ್ಣ ಅವಕಾಶ ನೀಡಲಿದೆ ಎಂಬುದಕ್ಕೆ ಕಾಯಬೇಕು. ಥಿಯೇಟರ್ ರಿಲೀಸ್ ಅನುಮತಿ ನೀಡಿದ 15-20 ದಿನಗಳಲ್ಲಿ ಬಂದುಬಿಡುತ್ತೇವೆ ಎಂದು ಅವರು ತಿಳಿಸಿದ್ದಾರೆ.

  'ಪೊಗರು' ಚಿತ್ರದ 'ಖರಾಬು...' ಹಾಡಿನ ಸಂಗೀತ ಒರಿಜಿನಲ್ ಅಲ್ಲವೇ?'ಪೊಗರು' ಚಿತ್ರದ 'ಖರಾಬು...' ಹಾಡಿನ ಸಂಗೀತ ಒರಿಜಿನಲ್ ಅಲ್ಲವೇ?

  ಎರಡು ಗೆಟಪ್‌ನಲ್ಲಿ ಧ್ರುವ

  ಎರಡು ಗೆಟಪ್‌ನಲ್ಲಿ ಧ್ರುವ

  ಈ ಸಿನಿಮಾದಲ್ಲಿ ಧ್ರುವ ಅವರಿಗೆ ಎರಡು ಗೆಟಪ್ ಇದೆ. ಒಂದು ಚಿಕ್ಕ ವಯಸ್ಸಿನದ್ದು ಮತ್ತೊಂದು ದೊಡ್ಡದು. ನೀವು ಟೀಸರ್ ಮತ್ತು ಹಾಡಿನಲ್ಲಿ ನೋಡುತ್ತಿರುವುದು ವಯಸ್ಸಿಗೆ ಬಂದ ಧ್ರುವ. ಮಾನ್‌ಸ್ಟರ್, ರಗಡ್ ಪಾತ್ರ. ಚಿಕ್ಕ ವಯಸ್ಸಿನ ದೃಶ್ಯಗಳಿಗಾಗಿ ಅವರು ಸುಮಾರು 45 ಕೆಜಿ ತೂಕ ಇಳಿಸಿಕೊಂಡಿದ್ದಾರೆ. ಅವರ ಪಾತ್ರದ ಇಂಟ್ರೊಡಕ್ಷನ್‌ಗೆ ಮಲ್ಲಗಂಬ ಕಲಿಸಿದ್ದೆವು. ಬಹಳ ಶ್ರಮ ಹಾಕಿದ್ದೇವೆ. 45 ಕೆಜಿ ತೂಕ ಇಳಿಸಿ, ಮತ್ತೆ ಅಷ್ಟು ಕೆಜಿಗೆ ವಾಪಸ್ ಬರುವುದು ತಮಾಷೆಯಲ್ಲ. ಇದಕ್ಕಾಗಿ ತುಂಬಾ ಸಮಯ ಬೇಕಾಯಿತು.

  ಬಹು ತಾರಾಗಣ ನಿಭಾಯಿಸುವ ಸವಾಲು

  ಬಹು ತಾರಾಗಣ ನಿಭಾಯಿಸುವ ಸವಾಲು

  ಇದು ಬಹುತಾರಾಗಣದ ಚಿತ್ರ. ರಶ್ಮಿಕಾ ಮಂದಣ್ಣ, ಪವಿತ್ರಾ ಲೋಕೇಶ್, ರವಿಶಂಕರ್, ಚಿಕ್ಕಣ್ಣ, ಕುರಿ ಪ್ರತಾಪ್ ತಬಲಾ ನಾಣಿ, ಭೀಮಾ ಸಂಪತ್, ಡಾಲಿ ಧನಂಜಯ್, ರಾಘವೇಂದ್ರ ರಾಜ್ ಕುಮಾರ್ ನಟಿಸಿದ್ದಾರೆ, ಜತೆಗೆ ಅಂತಾರಾಷ್ಟ್ರೀಯ ಮಟ್ಟದ ಹೆಸರಾಂತ ಬಾಡಿ ಬಿಲ್ಡರ್‌ಗಳನ್ನು ಕರೆದುಕೊಂಡು ಬಂದಿದ್ದೆವು. ಇಷ್ಟು ಜನ ಕಾಂಬಿನೇಷನ್ ಮಾಡಿ, ಹೈದರಾಬಾದ್‌ನಲ್ಲಿ ಸೆಟ್ ಹಾಕಿಸಿದ್ದೆವು. ಸುಮಾರು 1,500 ಜನ ಜೂನಿಯರ್ ಆರ್ಟಿಸ್ಟ್‌ಗಳು, ತಂತ್ರಜ್ಞರು ಎಲ್ಲರನ್ನೂ ನಿಭಾಯಿಸಬೇಕು. ಕೆಲವು ದೃಶ್ಯಗಳಲ್ಲಿ ಒಬ್ಬರು ಸಣ್ಣ ತಪ್ಪು ಮಾಡಿದರೂ ರೀಟೇಕ್ ಮಾಡಬೇಕು. ಬೃಹತ್ ತಂಡ ಮತ್ತು ಸನ್ನಿವೇಶವನ್ನು ನಿಭಾಯಿಸುವುದು ಸಣ್ಣ ಸಂಗತಿಯಲ್ಲ. ಹೀಗಾಗಿ ಸಾಕಷ್ಟು ಸಮಯ ತೆಗೆದುಕೊಂಡಿತು.

  ಧ್ರುವ ಸರ್ಜಾ ಅಭಿಮಾನಿಗಳಿಗೆ 'ಪೊಗರು' ಚಿತ್ರದಿಂದ ಸಿಗಲಿದೆ ಮತ್ತೊಂದು ಗಿಫ್ಟ್ಧ್ರುವ ಸರ್ಜಾ ಅಭಿಮಾನಿಗಳಿಗೆ 'ಪೊಗರು' ಚಿತ್ರದಿಂದ ಸಿಗಲಿದೆ ಮತ್ತೊಂದು ಗಿಫ್ಟ್

  ಎರಡು ಮೂರು ಬಾರಿ ಬದಲಾವಣೆ

  ಎರಡು ಮೂರು ಬಾರಿ ಬದಲಾವಣೆ

  ಕಥೆಗೆಂದೇ ಎಂಟು ತಿಂಗಳು ಸಮಯ ತೆಗೆದುಕೊಂಡಿತು. ಎಲ್ಲಿಂದಲೂ ಪ್ರಭಾವ ಹೊಂದಿರುವಂತೆ ಜನರಿಗೆ ಅನಿಸಬಾರದು. ಕಥೆ ಮತ್ತು ನಿರೂಪಣೆ ಫ್ರೆಶ್ ಆಗಿರಬೇಕು. ನೋಡಿದವರಿಗೆ ಹೊಸತು ಎನಿಸಬೇಕು ಎಂದು ಕಥೆಗೆ ಸಮಯ ಕೊಟ್ಟೆವು. ಇದಕ್ಕಾಗಿ ಸ್ಕ್ರಿಪ್ಟ್‌ಅನ್ನು ಎರಡು ಮೂರು ಸಲ ಸಂಪೂರ್ಣವಾಗಿ ಬದಲಿಸಿ ಮತ್ತೆ ಬರೆದಿದ್ದೆ ಎಂದು ತಿಳಿಸಿದರು.

  ಯಾವ ಕಾರಣಕ್ಕೂ ಒಟಿಟಿ ಬಿಡುಗಡೆ ಇಲ್ಲ

  ಯಾವ ಕಾರಣಕ್ಕೂ ಒಟಿಟಿ ಬಿಡುಗಡೆ ಇಲ್ಲ

  ಯಾವ ಕಾರಣಕ್ಕೂ ಚಿತ್ರವನ್ನು ನೇರವಾಗಿ ಒಟಿಟಿಗೆ ಕೊಡುವುದಿಲ್ಲ. ನಾವು ಸಿನಿಮಾ ಮಾಡುವುದು ಚಿತ್ರಮಂದಿರವನ್ನು ದೃಷ್ಟಿಯಲ್ಲಿಟ್ಟುಕೊಂಡು. ಲಾರ್ಜರ್ ಫಾರ್ಮ್ಯಾಟ್‌ನಲ್ಲಿ ಸಿನಿಮಾ ಡಿಸೈನ್ ಮಾಡಿರುತ್ತೇವೆ. ಅದರ ಸೌಂಡಿಂಗ್ ಹೇಗಿರಬೇಕು, ಡಾಲ್ಬಿ ಥಿಯೇಟರ್‌ನಲ್ಲಿ ಹೇಗಿರಬೇಕು ಎಂಬುದೆಲ್ಲ ನಮ್ಮ ತಲೆಯಲ್ಲಿ ಇರುತ್ತದೆ. ಡಿಟಿಎಸ್‌ಗೆ ಮಾಡಿದ 2000 ವೋಲ್ಟೇಜನ್ನು ಮೊಬೈಲಲ್ಲಿ 2 ಆಮ್ಸ್‌ನಲ್ಲಿ ಹೇಗೆ ಕೇಳಿಸಲು ಸಾಧ್ಯ?

  ಮೊಬೈಲಲ್ಲಿ ಅನುಭವ ಸಿಗಲಾರದು

  ಮೊಬೈಲಲ್ಲಿ ಅನುಭವ ಸಿಗಲಾರದು

  ಮೊಬೈಲ್‌ನಲ್ಲಿ ಯಾರೂ ಆಸಕ್ತಿಯಿಂದ ಸಿನಿಮಾ ನೋಡೊಲ್ಲ. ಸೀನ್ ನಡುವೆ ಫೋನ್ ಬಂದಾಗ ಎದ್ದು ಹೋಗುತ್ತಾನೆ. ಮತ್ತೊಂದು ಸೀನ್ ನೋಡುತ್ತಾನೆ. ಇದರಿಂದ ಸಿನಿಮಾದ ಇಂಟೆನ್ಸಿಟಿಯೇ ನಾಶವಾಗುತ್ತದೆ. ಮೊದಲ ಬಾರಿ ಕನ್ನಡದಲ್ಲಿ ಎಲ್‌ಎಫ್ ಕ್ಯಾಮೆರಾ ಲಾರ್ಜರ್ ಫಾರ್ಮ್ಯಾಟ್ ಬಳಸಿ ಸಿನಿಮಾ ಮಾಡಿದ್ದೇನೆ. ಅಂದರೆ ಅದು ಫುಲ್ ಸ್ಕ್ರೀನ್ ಫಾರ್ಮ್ಯಾಟ್. ಮೊಬೈಲಲ್ಲಿ ಅದು ಏನು ಗೊತ್ತಾಗುತ್ತದೆ? ಆ ಕ್ಯಾಮೆರಾ ಮಾಡಿದರೂ ಒಂದೇ ಮೊಬೈಲಲ್ಲಿ ನೋಡಲು ಮಾಮೂಲಿ ಡಿಜಿಟಲ್ ಕ್ಯಾಮೆರಾ ಮಾಡಿದರು ಒಂದೇ. ಚಿತ್ರಮಂದಿರ ನಮಗೆ ಬಹಳ ಮುಖ್ಯ. ಆಡಿಯನ್ಸ್ ಅಲ್ಲಿ ಬಂದು ಎಂಜಾಯ್ ಮಾಡಿದಂತೆ ಮೊಬೈಲಲ್ಲಿ ಎಂಜಾಯ್ ಮಾಡಲು ಸಾಧ್ಯವಿಲ್ಲ ಎಂದು ವಿವರಿಸಿದರು.

  ಚಿತ್ರಮಂದಿರದಿಂದ ಮಾತ್ರ ಆದಾಯ

  ಚಿತ್ರಮಂದಿರದಿಂದ ಮಾತ್ರ ಆದಾಯ

  ಚಿತ್ರಮಂದಿರ ಸಿನಿಮಾದ ಆದಾಯ ಸೃಷ್ಟಿಸುವ ಜಾಗ. ನಮಗೆ ಉಪಗ್ರಹ ಹಕ್ಕು, ಒಟಿಟಿ ಮುಂತಾದ ಹಕ್ಕುಗಳ ಮಾರಾಟದಿಂದ ಸಿಗುವುದು ಶೇ 35-40ರಷ್ಟು ಆದಾಯ ಮಾತ್ರ. ಉಳಿದ ಶೇ 60ರಷ್ಟನ್ನು ಜನರಿಂದಲೇ ಪಡೆದುಕೊಳ್ಳಬೇಕು. ಅದರಲ್ಲಿ ಮಿನಿಮಮ್ ಗ್ಯಾರಂಟಿ ಸಿಗುವುದು ಮೊದಲ ವಾರದ ಕಲೆಕ್ಷನ್‌ನಲ್ಲಿ. ಶೇ 30-35ರಷ್ಟು ನಾಲ್ಕೈದು ದಿನದಲ್ಲಿ ಬರುತ್ತದೆ. ಮೊದಲ ವಾರ 100 ರೂ. ಇದ್ದರೆ, ಎರಡನೆಯ ವಾರ 50 ರೂ ಮತ್ತು ಮೂರನೇ ವಾರಕ್ಕೆ 25ರೂಗೆ ಆದಾಯ ಇಳಿಯುತ್ತದೆ.

  ಮೊದಲ ವಾರದಲ್ಲಿ ಕಲೆಕ್ಷನ್

  ಮೊದಲ ವಾರದಲ್ಲಿ ಕಲೆಕ್ಷನ್

  ಸಿನಿಮಾ ಬಿಡುಗಡೆಯಾದ ಮೊದಲ ನಾಲ್ಕೈದು ದಿನ ಕಲೆಕ್ಷನ್ ಸಕತ್ ಜೋರಾಗಿರುತ್ತದೆ. ಹೆಚ್ಚಿನ ಆದಾಯ ಹುಟ್ಟಿಸಲು ಆಗುವುದು ಆ ಸಮಯದಲ್ಲಿ ಮಾತ್ರ. ಈಗ ಚಿತ್ರಮಂದಿರಲ್ಲಿ 35-50 ಜನ ಮಾತ್ರ ಇರಬೇಕು ಎಂದರೆ ಆದಾಯವನ್ನು ಎಲ್ಲಿ ಹುಟ್ಟಿಸಲು ಸಾಧ್ಯ? ಎಲ್ಲಿಂದ ಪ್ರೇಕ್ಷಕರನ್ನು ತರಬಹುದು? ಮಕ್ಕಳನ್ನು, ವಯಸ್ಸಾದವರನ್ನು ಕರೆದುಕೊಂಡು ಬರಬೇಡಿ ಎಂದರೆ ಸಿನಿಮಾ ನೋಡಲು ಫ್ಯಾಮಿಲಿಯೇ ಬರೊಲ್ಲ. ಕುಟುಂಬ ಬಂದಿಲ್ಲ ಎಂದರೆ ಟಿಕೆಟ್ ಕೊಳ್ಳುವವರು ಯಾರು?

   ಕಲಾ ಪ್ರಕಾರ ಸಾಯಿಸಬೇಡಿ

  ಕಲಾ ಪ್ರಕಾರ ಸಾಯಿಸಬೇಡಿ

  ಚಿತ್ರಮಂದಿರದವರು ಪ್ರತಿ ಸಲವು ಸಂಪೂರ್ಣ ಸ್ಯಾನಿಟೈಸ್ ಮಾಡುತ್ತೇವೆ. ಹೈಜಿನ್ ಇಡುತ್ತೇವೆ ಎನ್ನುತ್ತಿದ್ದಾರೆ. ತರಕಾರಿ ಮಂಡಿಯಲ್ಲಿ ಸಾವಿರಾರು ಜನರು ತುಂಬಿಕೊಳ್ಳುತ್ತಿದ್ದಾರೆ. ಅಲ್ಲಿ ಸಾಮಾಜಿಕ ಅಂತರವಿಲ್ಲ. ಆದರೂ ಅದಕ್ಕೆ ಅವಕಾಶ ನೀಡುತ್ತಿದ್ದಾರೆ. ನಾವು ಇನ್ನೂ ಇನ್ನೂ ಮುಂಜಾಗ್ರತೆ ವಹಿಸುತ್ತೇವೆ. ಅರ್ಧದಷ್ಟು ಜನರಿಗೆ ಮಾತ್ರ ಟಿಕೆಟ್ ನೀಡುತ್ತೇವೆ ಎಂಬ ನಿರ್ಬಂಧ ವಿಧಿಸಬೇಡಿ. ಹಾಗೆ ಮಾಡಿದರೆ ಕಲಾ ವಿಭಾಗವೇ ಸಾಯುತ್ತದೆ ಎನ್ನುತ್ತಾರೆ ಅವರು.

  English summary
  Director Nanda Kishore said Pogaru will not disappoint the audience. He clarified that movie will not be released on OTT.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X