For Quick Alerts
  ALLOW NOTIFICATIONS  
  For Daily Alerts

  ದರ್ಶನ್ 51ನೇ ಸಿನಿಮಾಗೆ ಬಂದ 'ವಿಷ್ಣುವರ್ಧನ' ನಿರ್ದೇಶಕ

  By Naveen
  |
  Darshan 51th Movie Directed by P Kumar | Filmibeat Kannada

  ನಟ ದರ್ಶನ್ ಅವರ 51ನೇ ಸಿನಿಮಾದ ಬಗ್ಗೆ ಈಗಾಗಲೇ ಅನೇಕ ಸುದ್ದಿಗಳು ಕೇಳಿ ಬಂದಿದೆ. ಈ ಹಿಂದೆಯೇ ಹೇಳಿದಂತೆ ಈ ಚಿತ್ರವನ್ನು ನಿರ್ಮಾಪಕಿ ಶೈಲಜಾ ನಾಗ್ ಅವರು ನಿರ್ಮಾಣ ಮಾಡುತ್ತಿದ್ದಾರೆ. ಆದರೆ ಇದೀಗ ಈ ಚಿತ್ರಕ್ಕೆ ನಿರ್ದೇಶಕರ ಆಯ್ಕೆ ಪ್ರಕ್ರಿಯೆ ಕೂಡ ನಡೆದಿದೆ.

  ದರ್ಶನ್ 51 ಸಿನಿಮಾವನ್ನು ಯಾರು ನಿರ್ದೇಶನ ಮಾಡುತ್ತಾರೆ ಎಂಬ ಕುತೂಹಲ ಎಲ್ಲರಿಗೂ ಇತ್ತು. ಆದರೆ ಈ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ. ಸ್ಯಾಂಡಲ್ ವುಡ್ ನಲ್ಲಿ ಯಶಸ್ವಿ ಸಿನಿಮಾಗಳನ್ನು ನೀಡಿದ ನಿರ್ದೇಶಕರೊಬ್ಬರು ಮೊದಲ ಬಾರಿಗೆ ದರ್ಶನ್ ಅವರಿಗೆ ಆಕ್ಷನ್ ಕಟ್ ಹೇಳಲಿದ್ದಾರೆ. ಚಿತ್ರದ ಕಥೆ ತುಂಬ ಇಷ್ಟ ಆಗಿದ್ದು, ನಿರ್ಮಾಪಕಿ ಶೈಲಜಾ ನಾಗ್ ನಿರ್ದೇಶಕರ ಹೆಸರನ್ನು ಫೈನಲ್ ಮಾಡಿದ್ದಾರೆ. ಮುಂದೆ ಓದಿ...

  ಪಿ.ಕುಮಾರ್ ನಿರ್ದೇಶನ

  ಪಿ.ಕುಮಾರ್ ನಿರ್ದೇಶನ

  ದರ್ಶನ್ ಅವರ 51ನೇ ಸಿನಿಮಾಗೆ ನಿರ್ದೇಶಕರು ಸಿಕ್ಕಿದ್ದಾರೆ. ನಿರ್ದೇಶಕ ಪಿ.ಕುಮಾರ್ ಈ ಚಿತ್ರವನ್ನು ನಿರ್ದೇಶನ ಮಾಡಲಿದ್ದಾರೆ.

  ಪಿ.ಕುಮಾರ್ ಬಗ್ಗೆ

  ಪಿ.ಕುಮಾರ್ ಬಗ್ಗೆ

  ಪಿ.ಕುಮಾರ್ ಕನ್ನಡದ ಯಶಸ್ವಿ ನಿರ್ದೇಶಕ. ಈ ಹಿಂದೆ ಇವರು ಸುದೀಪ್ ಜೊತೆ 'ವಿಷ್ಣುವರ್ಧನ', ಶರಣ್ ಅವರ 'ಜೈಲಲಿತಾ' ಮತ್ತು 'ರಾಜರಾಜೇಂದ್ರ' ಚಿತ್ರವನ್ನು ನಿರ್ದೇಶನ ಮಾಡಿದ್ದರು.

  'ತಾರಕ್' ದರ್ಶನ್ ಹಾಗೂ ಕೂಲ್ ಕ್ಯಾಪ್ಟನ್ ಧೋನಿ: ಇಬ್ಬರ ನಡುವೆ ಒಂದು ಲಿಂಕ್ ಇದೆ!

  ಆಕ್ಷನ್ ಮತ್ತು ಲವ್ ಸ್ಟೋರಿ

  ಆಕ್ಷನ್ ಮತ್ತು ಲವ್ ಸ್ಟೋರಿ

  ದರ್ಶನ್ ಅವರ ಈ ಚಿತ್ರ ಆಕ್ಷನ್ ಮತ್ತು ಲವ್ ಸ್ಟೋರಿಯಾಗಿದೆಯಂತೆ. ದರ್ಶನ್ ಇಮೇಜ್ ಗೆ ಸರಿಹೊಂದುವ ಕಥೆ ಮತ್ತು ಚಿತ್ರಕಥೆಯನ್ನು ಚಿತ್ರತಂಡ ಮಾಡಿಕೊಂಡಿದೆಯಂತೆ.

  ಕುರುಕ್ಷೇತ್ರದಲ್ಲಿ ದರ್ಶನ್ ದುರ್ಯೋಧನನ 'ಗದೆ' ಎಷ್ಟು ಕೆಜಿ ಇದೆ?

  ಇದು ಪಕ್ಕಾ ದರ್ಶನ್ ಸಿನಿಮಾ

  ಇದು ಪಕ್ಕಾ ದರ್ಶನ್ ಸಿನಿಮಾ

  ಪಿ.ಕುಮಾರ್ ಅವರ ಕಥೆ ತುಂಬ ಇಷ್ಟ ಆಗಿದ್ದು, ಇದೊಂದು ಪಕ್ಕ ದರ್ಶನ್ ಸಿನಿಮಾ ಆಗಲಿರಲಿದೆಯಂತೆ. ಈ ಹಿಂದೆ ತಮ್ಮ ಬ್ಯಾನರ್ ನಲ್ಲಿ ತಮ್ಮ ಪತಿ ನಿರ್ದೇಶಕ ಬಿ.ಸುರೇಶ್ ಅವರ ನಿರ್ದೇಶನದ ಚಿತ್ರಗಳನ್ನು ನಿರ್ಮಾಣ ಮಾಡಿದ್ದ ಶೈಲಜಾ ನಾಗ್ ಅವರು ಈಗ ದರ್ಶನ್ ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ.

  ಕಂಡ ಕಂಡವರಿಗೆ ಹೊಡೆಯಲ್ಲ ಸಲಾಮು: ರಾಜಕೀಯದ ಬಗ್ಗೆ ದರ್ಶನ್ ಖಡಕ್ ಜವಾಬು.!

  ಹರಿಕೃಷ್ಣ ಸಂಗೀತ

  ಹರಿಕೃಷ್ಣ ಸಂಗೀತ

  ದರ್ಶನ್ ಮತ್ತು ಹಾಗೂ ಹರಿಕೃಷ್ಣ ಜೋಡಿ ಈ ಚಿತ್ರದಲ್ಲಿಯೂ ಮುಂದುವರೆದಿದೆ. ಜೊತೆಗೆ ಉಳಿದ ತಾಂತ್ರಿಕ ವರ್ಗ ಮತ್ತು ತಾರಾಗಣದ ಆಯ್ಕೆ ಇನ್ನು ಅಂತಿಮವಾಗಿಲ್ಲ.

  'ಕುರುಕ್ಷೇತ್ರ' ಶೂಟಿಂಗ್ ಬಿಡುವಿನ ವೇಳೆ 'ದುರ್ಯೋಧನ' ಏನ್ ಮಾಡ್ತಾರೆ?

  'ಕುರುಕ್ಷೇತ್ರ'ದ ಬಳಿಕ

  'ಕುರುಕ್ಷೇತ್ರ'ದ ಬಳಿಕ

  ದರ್ಶನ್ ಅವರ 'ಕುರುಕ್ಷೇತ್ರ' ಸಿನಿಮಾದ ಶೂಟಿಂಗ್ ಸದ್ಯ ಭರ್ಜರಿಯಾಗಿ ನಡೆಯುತ್ತಿದ್ದು, ಈ ಚಿತ್ರದ ಬಳಿಕ ಅವರ 51 ಸಿನಿಮಾ ಶುರುವಾಗಿದೆ.

  English summary
  'Vishnuvardhana' movie fame director P.Kumar will be directing Darshan's 51th movie, which will be produced by Shailaja Nag.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X