For Quick Alerts
ALLOW NOTIFICATIONS  
For Daily Alerts

ಚಿತ್ರಕಥೆಯೇ ಸಿನಿಮಾಗೆ ಜೀವಾಳ: ನಿರ್ದೇಶಕ ಪಿ.ಶೇಷಾದ್ರಿ

By ಲವ ಕುಮಾರ್
|

ಮೈಸೂರು: ದಸರಾ ಪ್ರಯುಕ್ತ ಮೈಸೂರು ದಸರಾ ಚಲನಚಿತ್ರ ಉಪಸಮಿತಿ ವತಿಯಿಂದ ಚಿತ್ರಕಥಾ ಕಾರ್ಯಾಗಾರ ೨೦೧೯ ಶುಕ್ರವಾರದಿಂದ ಆರಂಭವಾಗಿದೆ. ನಗರದ ಮಾನಸಗಂಗೋತ್ರಿಯ ವಿಜ್ಞಾನಭವನದಲ್ಲಿ ನಡೆಯುತ್ತಿರುವ ಕಾರ್ಯಾಗಾರಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಚಾಲನೆ ನೀಡಿ ಶುಭ ಹಾರೈಸಿದ್ದಾರೆ. ಈ ಸಂದರ್ಭ ಪಾಲ್ಗೊಂಡಿದ್ದ ರಾಷ್ಟ್ರಪ್ರಶಸ್ತಿ ವಿಜೇತ ಚಲನಚಿತ್ರ ನಿರ್ದೇಶಕ ಪಿ.ಶೇಷಾದ್ರಿ ಸಿನಿಮಾ ಕುರಿತಂತೆ ಮಾತನಾಡಿ, ಪ್ರಸ್ತುತ ಸಿನಿಮಾ ರಂಗದ ಒಳಹೊರಗನ್ನು ತೆರೆದಿಟ್ಟರು.

''ಸಿನಿಮಾ ಬಗ್ಗೆ ನಿರ್ಮಾಪಕರನ್ನು ಕೇಳಿದರೆ ಹಣ ಅಂತ ಹೇಳಿದರೆ, ಅಭಿಮಾನಿಗಳು ನಾಯಕ ನಟ ಎನ್ನುತ್ತಾರೆ. ಒಳ್ಳೆಯ ಅಭಿರುಚಿ ಇಟ್ಟುಕೊಂಡ ಪ್ರೇಕ್ಷಕನನ್ನು ಕೇಳಿದರೆ ಕಥೆ ಅಂತ ಹೇಳುತ್ತಾರೆ. ಇದೆಲ್ಲವನ್ನು ಗಮನಿಸಿದರೆ ಸಿನಿಮಾಗೆ ಮುಖ್ಯವಾಗಿ ಬೇಕಾದದ್ದು ನಾಯಕನಟ, ಹಣ ಅಲ್ಲ. ಒಳ್ಳೆಯ ಕಥೆ ಬೇಕು ಎನ್ನುವುದು ಅರ್ಥವಾಗುತ್ತದೆ. ಹೀಗಾಗಿ ಇಡೀ ಸಿನಿಮಾದ ಜೀವಾಳವೇ ಚಿತ್ರಕಥೆಯಾಗಿದ್ದು ಒಂದು ಸಿನಿಮಾಕ್ಕೆ ಶೇ.90ರಷ್ಟು ಚಿತ್ರಕಥೆ, ಶೇ.10 ರಷ್ಟು ಅಲಂಕಾರವಿರುತ್ತದೆ'' ಎಂದಿದ್ದಾರೆ.

''ಸಾಮಾನ್ಯವಾಗಿ ಚಿತ್ರೋತ್ಸವ ಬೆಂಗಳೂರಿಗೆ ಮಾತ್ರ ಸೀಮಿತವಾಗಿದೆ. ಮೈಸೂರಿನಲ್ಲಿ ಏಕೆ ಆರಂಭಿಸಬಾರದು ಎಂದು ಪ್ರಶ್ನಿಸಿದ ಮೇರೆಗೆ ಕಳೆದ ಎರಡು ವರ್ಷದಿಂದ ಮೈಸೂರಿನಲ್ಲಿಯೂ ಆರಂಭವಾಯಿತು. ಬೆಂಗಳೂರಿನ ಜೊತೆ ಪರ್ಯಾಯವಾಗಿ ಮೈಸೂರಿನಲ್ಲಿಯೂ ಚಿತ್ರೋತ್ಸವ ಆಚರಿಸೋದಕ್ಕೆ ಸಾಧ್ಯವಾಯಿತಾದರೂ ಕಾರಣಾಂತರಗಳಿಂದ ಮತ್ತೆ ನಡೆದಿಲ್ಲ. ಚಿತ್ರೋತ್ಸವವನ್ನು ಮೈಸೂರು ಅಂತರರಾಷ್ಟ್ರೀಯ ಚಿತ್ರೋತ್ಸವ ಎಂದು ಮಾಡುವುದು ಸಾಧ್ಯವಾದರೆ ಇದು ದಸರಾ ಚಿತ್ರೋತ್ಸವವಷ್ಟೇ ಆಗದೆ ದಸರಾ ಅಂತರಾಷ್ಟ್ರೀಯ ಮೈಸೂರು ಚಿತ್ರೋತ್ಸವವಾಗಬೇಕು. ಏಕೆಂದರೆ ಮೈಸೂರಿಗೂ ಅಂತರರಾಷ್ಟ್ರೀಯ ಖ್ಯಾತಿಯಿದ್ದು, ಆ ಮೂಲಕ ನಾವು ಇಡೀ ಅಂತರರಾಷ್ಟ್ರೀಯ ಚಿತ್ರಗಳನ್ನು ಹಾಗೂ ಅಲ್ಲಿನ ಅತಿಥಿಗಳನ್ನು ತಂದು ಇನ್ನಷ್ಟು ಎತ್ತರಕ್ಕೇರಲು ಸಾಧ್ಯವಾಗುತ್ತದೆ'' ಎಂದು ಹೇಳಿದರು.

ದಸರಾ ಹಿನ್ನಲೆಯಲ್ಲಿ ನಡೆಯುತ್ತಿರುವ ಮೂರು ದಿನದ ಕಾರ್ಯಾಗಾರ ಅಂತಾರಾಷ್ಟ್ರೀಯ ಮಟ್ಟಕ್ಕೂ ಏರಲಿ ಎಂದು ಶುಭ ಹಾರೈಸಿದ ಅವರು, ಈ ಬಗ್ಗೆ ಸರ್ಕಾರ ಗಮನ ಹರಿಸುವ ಅಗತ್ಯವಿದೆ ಎಂದರು.

ದಸರಾ ನಾಡಿನ ಹೆಮ್ಮೆಯ ಹಬ್ಬವಾಗಿದ್ದು, ಒಂದು ಸಂಸ್ಕೃತಿಯನ್ನು ಅನಾವರಣಗೊಳಿಸುವ ಕಾರ್ಯಕ್ರಮವಾಗಿದೆ ಹಾಗೆಯೇ ಸಿನಿಮಾ ಸಂಸ್ಕೃತಿಯ ಒಂದು ಭಾಗವಾಗಿದೆ. ದಸರಾದಲ್ಲಿ ಚಿತ್ರಕಥಾ ಕಾರ್ಯಾಗಾರ ಆರಂಭಿಸುತ್ತಿರುವುದಕ್ಕೆ ಸರ್ಕಾರಕ್ಕೆ ಚಿತ್ರತಂಡದ ಪರವಾಗಿ ಅಭಿನಂದನೆ ಸಲ್ಲಿಸಿದರು.

''ಈ ಹಿಂದೆ ದಕ್ಷಿಣ ಭಾರತದಲ್ಲಿ ಮೊದಲ ಸ್ಥಾನ ತಮಿಳು, ತೆಲುಗು, ಮಲಯಾಳಂಗೆ ಇತ್ತು ನಂತರದ ಸ್ಥಾನ ಕನ್ನಡಕ್ಕಾಗಿತ್ತು. ಆದರೆ ಈಗ ಬದಲಾವಣೆ ಕಂಡಿದೆ. ಕಳೆದ ವರ್ಷ ಸೆನ್ಸಾರ್ ಮುಂದೆ ಬಂದಿದ್ದು 430 ಚಿತ್ರವಾಗಿದ್ದರೆ ಇದರಲ್ಲಿ ಅಧಿಕಾರಿಗಳು 371 ಚಿತ್ರಗಳನ್ನು ಮಾನ್ಯ ಮಾಡಿದ್ದು, 278 ಚಿತ್ರಗಳು ಬಿಡುಗಡೆ ಕಂಡಿವೆ. ಸಿನಿಮಾಗಳ ಸಂಖ್ಯೆಯಲ್ಲಿ ಮಾತ್ರ ಹೆಚ್ಚಳವಾಗದೆ ಗುಣಮಟ್ಟದಲ್ಲಿ ಮೊದಲ ಸ್ಥಾನ ಪಡೆಯುವಂತಾಗಬೇಕು'' ಎಂದು ಕಿವಿಮಾತು ಹೇಳಿದರು.

ಕಾರ್ಯಕ್ರಮದಲ್ಲಿ ಮೇಯರ್ ಪುಷ್ಪಲತಾ ಜಗನ್ನಾಥ್, ಉಪ ಮೇಯರ್ ಶಫಿ ಅಹ್ಮದ್ ಮತ್ತಿತರರು ಉಪಸ್ಥಿತರಿದ್ದರು.

English summary
Kannada director P Sheshadri spoke about the importance of screenplay in mysore dasara film festival.

Kannada Photos

Go to : More Photos
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more