For Quick Alerts
  ALLOW NOTIFICATIONS  
  For Daily Alerts

  ವಿಡಿಯೋ ವೈರಲ್: ಮನೆಗೆ ಬರೋದಾ? ಮೇಘನಾರಾಜ್ ಗೆ ಪನ್ನಗಾಭರಣ ಪುತ್ರನ ಕ್ಯೂಟ್ ಮನವಿ

  |

  ಸ್ಯಾಂಡಲ್ ವುಡ್ ನಟ ಚಿರಂಜೀವಿ ಸರ್ಜಾ ಪತ್ನಿ ಮೆಘನಾ ರಾಜ್ ಸದ್ಯ ಮುದ್ದು ಮಗನ ಆರೈಕೆಯಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚಿಗಷ್ಟೆ ಮಗನ ತೊಟ್ಟಿಲ ಶಾಸ್ತ್ರ ಮಾಡುವ ಮೂಲಕ ಮೇಘನಾ ರಾಜ್ ಮಾಧ್ಯಮದ ಮುಂದೆ ಹಾಜರಾಗಿದ್ದರು. ಜಿರಂಜೀವಿ ನಿಧನದ ಬಳಿಕ ಮೇಘನಾ ಮೊದಲ ಬಾರಿಗೆ ಮಾಧ್ಯಮದ ಮುಂದೆ ಬಂದು ಮಾತನಾಡಿದ್ದರು.

  ತೊಟ್ಟಿಲ ಶಾಸ್ತ್ರ ಮಾಡಿದ್ದ ಮೇಘನಾ ಕುಟುಂಬ ಸದ್ಯದಲ್ಲೇ ಮುದ್ದು ಮಗನಿಗೆೆ ಹೆಸರನ್ನು ಫೈನಲ್ ಮಾಡಲಿದ್ದೇವೆ ಎಂದಿದ್ದರು. ಮೇಘನಾ ರಾಜ್ ಮುದ್ದಾದ ಮಗನನ್ನು ನೋಡಿ ಅಭಿಮಾನಿಗಳು ಸಂತಸಪಟ್ಟಿದ್ದರು.

  ಮುದ್ದು ಮಗನ ಜೊತೆ ಕಾಲಕಳೆಯುತ್ತಿರುವ ಮೇಘನಾ ರಾಜ್ ಗೆ ನಿರ್ದೇಶಕ ಪನ್ನಗಾಭರಣ ಪುತ್ರ ವೇದ್ ಮುದ್ದಾದ ಮನವಿ ಮಾಡಿದ್ದಾರೆ. ಮೇಘನಾ ಬಳಿ ಮನವಿ ಮಾಡುತ್ತಿರುವ ವಿಡಿಯೋವನ್ನು ಮೇಘನಾರಾಜ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

  ಮೇಘನಾ ಮತ್ತು ಪನ್ನಗಾ ಭರಣ ಕುಟುಂಬ ತುಂಬಾ ಅಪ್ತರು. ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುವ ಮುನ್ನವೇ ಎಲ್ಲರೂ ಉತ್ತಮ ಸ್ನೇಹಿತರು. ಇದೀಗ ಪನ್ನಗಾ ಪುತ್ರ ವೇದ್ ಮೇಘನಾ ಬಳಿ ತಾನು ನಿಮ್ಮನೆಗೆ ಬರಬಹುದಾ ಎಂದು ವಿಡಿಯೋ ಮೂಲಕ ಮನವಿ ಮಾಡಿಕೊಂಡಿದ್ದಾರೆ.

  ಬಾಕ್ಸ್ ನ ನೋಡಬೇಕು, ಮೇಘಿ ಮನೆಗೆ ಹೋಗೋಣ ಅಂತ ಅಪ್ಪ ಪನ್ನಗಾಭರಣ ಬಳಿ ಹೇಳುತ್ತಿದ್ದಾರೆ. ಮೇಘನಾನೆ ಕೇಳು ಎಂದು ಪನ್ನಗಾ ಹೇಳಿದಾಗ, ಪುಟ್ಟ ಪೋರ ವೇದ್, 'ನನಗೆ ಬಾಕ್ಸ್ ನ ನೋಡಬೇಕು, ಮನೆಗೆ ಬರೋದಾ? ಚಿರು ಬೇಬಿನೂ ನೋಡಬೇಕು' ಎಂದು ಹೇಳಿರುವ ವಿಡಿಯೋ ವೈರಲ್ ಆಗಿದೆ.

  ವೇದ್ ಕ್ಯೂಟ್ ಆಗಿ ಮನವಿ ಮಾಡಿಕೊಳ್ಳುತ್ತಿರುವ ವಿಡಿಯೋವನ್ನು ನೋಡಿ ತುಂಬಾ ಖುಷಿ ಪಟ್ಟಿರುವ ಮೇಘನಾ, ಮುದ್ದಾದ ವಿಡಿಯೋವನ್ನು ತನ್ನ ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿದ್ದಾರೆ. ವೇದ್ ಮುಗ್ದ ನಗುವಿಗೆ ಮನಸೋತಿರುವ ಮೇಘನಾ ಹಾರ್ಟ್ ಇಮೋಜಿ ಹಾಕಿದ್ದಾರೆ. ಈ ವಿಡಿಯೋಗೆ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.

  English summary
  Director Pannaga Bharana son Ved request to Meghana Raj, cute video viral on Social media.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X