twitter
    For Quick Alerts
    ALLOW NOTIFICATIONS  
    For Daily Alerts

    ಜನತಾ ಕರ್ಪ್ಯೂ ದಿನ ಜನ ಮೆಚ್ಚುವ ಕಾರ್ಯ ಮಾಡಿದ ಲೂಸಿಯಾ ಪವನ್ ಕುಮಾರ್

    |

    ಲೂಸಿಯಾ ಸಿನಿಮಾ ಮೂಲಕ ತಾವೊಬ್ಬ ಭಿನ್ನ ಹಾದಿ ತುಳಿಯುವ ನಿರ್ದೇಶಕರೆಂದು ರುಜುವಾತು ಮಾಡಿದ್ದ ಪವನ್ ಕುಮಾರ್ ಸಿನಿಮಾವನ್ನು ಪ್ರೀತಿಸುವಷ್ಟೆ ಸಿನಿಮಾಕ್ಕಾಗಿ ದುಡಿಯುವವರ ಬಗ್ಗೆಯೂ ಕಾಳಜಿ ಹೊಂದಿರುವವರು.

    ಜನತಾ ಕರ್ಪ್ಯೂ ದಿನ ಬೇರೆ ನಟರು, ನಿರ್ದೇಶಕರು ಮನೆಯಲ್ಲಿ ಕೂತು ಸಿನಿಮಾ ನೋಡಿಯೋ, ಕುಟುಂಬದೊಂದಿಗೆ ಕಾಲ ಕಳೆದಿದ್ದಾರೆ ಆದರೆ ಪವನ್ ಕುಮಾರ್ ಮಾತ್ರ ಈ ದಿನವನ್ನು ಇತರರಿಗೆ ಸಹಾಯ ಮಾಡುತ್ತಾ ಕಳೆದಿದ್ದಾರೆ.

    ಹೌದು, ಜನತಾ ಕರ್ಪ್ಯೂ ದಿನ ಮನೆಯಲ್ಲೇ ಕುಳಿತರೂ ಸಹ ಹಲವರಿಗೆ ಸಹಾಯ ಮಾಡುವ ಕಾರ್ಯವನ್ನು ಪವನ್ ಕುಮಾರ್ ಮಾಡಿದ್ದಾರೆ. ಕೊರೊನಾ ಕಾರಣದಿಂದ ಚಿತ್ರರಂಗ ಬಂದ್ ಆಗಿದ್ದು, ಈ ಬಂದ್‌ ನಿಂದ ಸಿನಿಮಾಕ್ಕಾಗಿ ದುಡಿಯುವ ದಿನಗೂಲಿ ಕಾರ್ಮಿಕರು ತೀವ್ರ ಸಂಕಷ್ಟದಲ್ಲಿದ್ದು, ಅವರ ಸಹಾಯಕ್ಕಾಗಿ ಇಂದಿನ ದಿನವನ್ನು ಪವನ್ ಕುಮಾರ್ ಮೀಸಲಿಟ್ಟಿದ್ದಾರೆ.

    ಇನ್‌ಸ್ಟಾಗ್ರಾಂನಲ್ಲಿ ಲೈವ್ ಮಾಡುತ್ತಲೇ ಇರುವ ಪವನ್ ಕುಮಾರ್

    ಇನ್‌ಸ್ಟಾಗ್ರಾಂನಲ್ಲಿ ಲೈವ್ ಮಾಡುತ್ತಲೇ ಇರುವ ಪವನ್ ಕುಮಾರ್

    ಇಂದು ಬೆಳಿಗ್ಗೆ 10 ಗಂಟೆಯಿಂದ ಸತತವಾಗಿ ವಿವಿಧ ನಟ-ನಟಿಯರೊಂದಿಗೆ ತಮ್ಮ ಇನ್‌ಸ್ಟಾಗ್ರಾಂ ನಲ್ಲಿ ಲೈವ್ ಸಂದರ್ಶನ, ಲೈವ್ ಸ್ಕ್ರಿಪ್ಟ್ ರೀಡಿಂಗ್ ಇತರೆ ಕಾರ್ಯಗಳನ್ನು ಮಾಡುತ್ತಲೇ ಇರುವ ಪವನ್ ಕುಮಾರ್, ಈ ನಡುವೆ ದಿನಗೂಲಿ ನೌಕರರಿಗೆ ಸಹಾಯವನ್ನೂ ಮಾಡುತ್ತಿದ್ದಾರೆ.

    ಆನ್‌ಲೈನ್‌ನಲ್ಲಿ ಹಣ ಒಟ್ಟು ಮಾಡಿದ ಪವನ್ ಕುಮಾರ್

    ಆನ್‌ಲೈನ್‌ನಲ್ಲಿ ಹಣ ಒಟ್ಟು ಮಾಡಿದ ಪವನ್ ಕುಮಾರ್

    ಚಿತ್ರೀಕರಣ ಬಂದ್ ಆಗಿರುವುದರಿಂದ ಸಾವಿರಾರು ಮಂದಿ ದಿನಗೂಲಿ ನಂಬಿದ್ದ ಸಿಬ್ಬಂದಿ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರಿಗೆ ಸಹಾಯ ಮಾಡಿರೆಂದು ಪವನ್ ಕುಮಾರ್ ಮನವಿ ಮಾಡಿ, ಆನ್‌ಲೈನ್‌ನಲ್ಲಿ ಹಣ ಕಳಿಸುವಂತೆ ಮನವಿ ಮಾಡಿದ್ದರು.

    ಪವನ್‌ ಗೆ ಹಣ ಕಳುಹಿಸಿದ್ದಾರೆ ಹಲವರು

    ಪವನ್‌ ಗೆ ಹಣ ಕಳುಹಿಸಿದ್ದಾರೆ ಹಲವರು

    ಪವನ್ ಕುಮಾರ್ ಅವರ ಮನವಿಗೆ ಸ್ಪಂದಿಸಿದ ಹಲವು ಮಂದಿ ತಮ್ಮ ಕೈಲಿ ಆದಷ್ಟು ಹಣವನ್ನು ಪವನ್ ಕುಮಾರ್ ನೀಡಿದ್ದ ಖಾತೆಗೆ ಕಳುಹಿಸಿದ್ದಾರೆ. ಇನ್ನೂ ಕಳುಹಿಸುತ್ತಿದ್ದಾರೆ. ಹಣ ಕಳಿಸಿದವರ ಪಟ್ಟಿಯನ್ನು ಪವನ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇದನ್ನು ಚಿತ್ರರಂಗದಲ್ಲಿ ಕೆಲಸ ಮಾಡುವ ದಿನಗೂಲಿ ನಂಬಿಕೊಂಡ ಸಿಬ್ಬಂದಿಗಳಿಗೆ ನೀಡಲಾಗುವುದೆಂದು ಪವನ್ ಕುಮಾರ್ ಹೇಳಿದ್ದಾರೆ.

    ನಟ ಧನಂಜಯ್, ಶ್ರದ್ಧಾ ಶ್ರೀನಾಥ್ ಜೊತೆ ಲೈವ್

    ನಟ ಧನಂಜಯ್, ಶ್ರದ್ಧಾ ಶ್ರೀನಾಥ್ ಜೊತೆ ಲೈವ್

    ಪವನ್ ಕುಮಾರ್ ಅವರು ಬೆಳಿಗ್ಗಿನಿಂದ ನಟ ಧನಂಜಯ್, ನಟಿ ಶ್ರದ್ಧಾ ಶ್ರೀನಾಥ್ ಸೇರಿ ಹಲವು ಮಂದಿಯ ಜೊತೆ ಲೈವ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಶ್ರದ್ಧಾ ಅವರೊಂದಿಗೆ ಸ್ಕ್ರಿಪ್ಟ್ ರೀಡಿಂಗ್ ಅನ್ನು ಅವರು ಮಾಡಿದರು.

    English summary
    Movie director Pawan Kumar spent productively spent Janatha curfew. He raised money for daily wage workers of movie industry.
    Sunday, March 22, 2020, 18:53
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X