For Quick Alerts
  ALLOW NOTIFICATIONS  
  For Daily Alerts

  ಅಪ್ಪು ನಿಸ್ವಾರ್ಥ ವ್ಯಕ್ತಿತ್ವಕ್ಕೆ ಸಾಕ್ಷ್ಯ ನೀಡಿದ ನಿರ್ದೇಶಕ ಪವನ್ ಕುಮಾರ್

  |

  ನಟ ಪುನೀತ್ ರಾಜ್‌ಕುಮಾರ್ ನಟನೆಯ ಮುಂದಿನ ಸಿನಿಮಾವನ್ನು ನಿರ್ದೇಶಕ ಪವನ್ ಕುಮಾರ್ ನಿರ್ದೇಶನ ಮಾಡುತ್ತಿರುವುದು ಬಹುತೇಕರಿಗೆ ಗೊತ್ತಿರುವ ವಿಷಯವೇ.

  ಆದರೆ ತಮಗೇಕೆ ಪುನೀತ್ ರಾಜ್‌ಕುಮಾರ್ ಜೊತೆ ಕೆಲಸ ಮಾಡಲು ಇಷ್ಟ ಎಂಬುದಕ್ಕೆ ಪವನ್ ಕುಮಾರ್ ಇಂದು ಕಾರಣ ನೀಡಿದ್ದಾರೆ. ಅದೂ ಸಾಕ್ಷ್ಯದ ಸಮೇತ.

  ಸಾಮಾಜಿಕ ಜಾಲತಾಣದಲ್ಲಿ ತಾವೇ ಐದು ವರ್ಷಗಳ ಹಿಂದೆ ಹಂಚಿಕೊಂಡಿದ್ದ ಪುನೀತ್ ರಾಜ್‌ಕುಮಾರ್‌ರ ವಿಡಿಯೋ ಒಂದನ್ನು ಇಂದು ಪುನಃ ಹಂಚಿಕೊಂಡಿರುವ ಪವನ್ ಕುಮಾರ್ ಇದೇ ಕಾರಣಕ್ಕೆ ನಾನು ಮಾತ್ರವೇ ಅಲ್ಲ ಹಲವರಿಗೆ ಪುನೀತ್ ರಾಜ್‌ಕುಮಾರ್ ಜೊತೆ ಕೆಲಸ ಮಾಡಲು ಇಷ್ಟ ಎಂದಿದ್ದಾರೆ.

  ಐದು ವರ್ಷದ ಹಿಂದೆ ಪವನ್ ನಿರ್ದೇಶನದ ಮೂರನೇ ಸಿನಿಮಾ 'ಯೂ-ಟರ್ನ್' ಬಿಡುಗಡೆ ಆಗಿದ್ದಾಗ ಆ ಸಿನಿಮಾವನ್ನು ಪುನೀತ್ ರಾಜ್‌ಕುಮಾರ್ ನೋಡಿದ್ದರು. ಅಷ್ಟೇ ಅಲ್ಲದೆ ಸಿನಿಮಾದ ಬಗ್ಗೆ ಬಹಳ ಮೆಚ್ಚುಗೆಯ ಮಾತುಗಳನ್ನಾಗಿ ವಿಡಿಯೋ ಸಹ ಮಾಡಿದ್ದರು. ಅದೇ ವಿಡಿಯೋವನ್ನು ಆಗ ಪವನ್ ಕುಮಾರ್ ತಮ್ಮ ಫೇಸ್‌ಬುಕ್ ಪುಟದಲ್ಲಿ ಹಂಚಿಕೊಂಡಿದ್ದರು.

  ಪುನೀತ್ ಎಂದರೆ ಎಲ್ಲರಿಗೂ ಇಷ್ಟ ಏಕೆ: ವಿವರಿಸಿದ ಪವನ್

  ಪುನೀತ್ ಎಂದರೆ ಎಲ್ಲರಿಗೂ ಇಷ್ಟ ಏಕೆ: ವಿವರಿಸಿದ ಪವನ್

  ಆ ವಿಡಿಯೋ ಅನ್ನು ಇಂದು ಮತ್ತೆ ಹಂಚಿಕೊಂಡಿರುವ ಪವನ್, ''ಸಿನಿಮಾ ಕರ್ಮಿಗಳಿಗೆ ಪುನೀತ್ ಜೊತೆ ಕೆಲಸ ಮಾಡಲು ಇಷ್ಟವೇಕೆ? ಪುನೀತ್ ರಾಜ್‌ಕುಮಾರ್ ಸ್ಟಾರ್ ನಟ, ಅವರೊಬ್ಬ ಒಳ್ಳೆಯ ನಟ ಇಂಥಹಾ ವೃತ್ತಿಪರ ಕಾರಣಗಳನ್ನು ಹೊರತುಪಡಿಸಿಯೂ ಬೇರೆ ದೊಡ್ಡದೊಂದು ಕಾರಣವಿದೆ ಪುನೀತ್ ಜೊತೆ ಕೆಲಸ ಮಾಡಲು ಎಲ್ಲರೂ ಇಷ್ಟಪಡುವುದಕ್ಕೆ. ಪುನೀತ್ ಅನ್ನು ಎಲ್ಲರೂ ಇಷ್ಟಪಡುವುದಕ್ಕೆ'' ಎಂದಿದ್ದಾರೆ ಪವನ್.

  ಪುನೀತ್ ರಾಜ್‌ಕುಮಾರ್ ವ್ಯಕ್ತಿತ್ವ ಹೊಗಳಿದ ಪವನ್ ಕುಮಾರ್

  ಪುನೀತ್ ರಾಜ್‌ಕುಮಾರ್ ವ್ಯಕ್ತಿತ್ವ ಹೊಗಳಿದ ಪವನ್ ಕುಮಾರ್

  ''ಯೂ-ಟರ್ನ್' ಸಿನಿಮಾ ನೋಡಿದ ಪುನೀತ್ ರಾಜ್‌ಕುಮಾರ್ ಐದು ವರ್ಷದ ಹಿಂದೆ ನನಗೆ ಈ ವಿಡಿಯೋ ಕಳಿಸಿದರು. ಆದರೆ ನಾನು ಅವರಿಗೆ ನನ್ನ ಸಿನಿಮಾ ಬಗ್ಗೆ ಒಳ್ಳೆಯ ಮಾತನ್ನಾಡಿ ಎಂದು ಕೇಳಿರಲಿಲ್ಲ. ಆದರೆ ಅವರಿಗೆ ಸಿನಿಮಾ ಇಷ್ಟವಾಗಿ ಅವರೇ ಸ್ವಯಂ ಪ್ರೇರಣೆಯಿಂದ ಸಿನಿಮಾದ ಬಗ್ಗೆ ಒಳ್ಳೆಯ ಮಾತನ್ನಾಡಿ ನನಗೆ ವಿಡಿಯೋ ಕಳಿಸಿದ್ದರು. ಈ ರೀತಿಯ ನಿಸ್ವಾರ್ಥ ವ್ಯಕ್ತಿತ್ವ ಕಡಿಮೆ ಜನಕ್ಕೆ ಇರುತ್ತದೆ'' ಎಂದಿದ್ದಾರೆ ಪವನ್ ಕುಮಾರ್.

  ವಿಶಿಷ್ಟ ಸಿನಿಮಾ ಮಾಡಲು ಕಾತರರಾಗಿದ್ದೇವೆ: ಪವನ್

  ವಿಶಿಷ್ಟ ಸಿನಿಮಾ ಮಾಡಲು ಕಾತರರಾಗಿದ್ದೇವೆ: ಪವನ್

  ''ಈ ವಿಡಿಯೋ ಮಾಡಿ ಐದು ವರ್ಷವಾಗಿದೆ. ಈಗ ನಾನು ಮತ್ತು ಪುನೀತ್ ಒಟ್ಟಿಗೆ ಕೆಲಸ ಮಾಡುತ್ತಿದ್ದೇವೆ. ನಮ್ಮ ಗಡಿಗಳನ್ನು ಮೀರಿ ಒಂದು ಒಳ್ಳೆಯ ಹಾಗೂ ನಮ್ಮಿಬ್ಬರ ವೃತ್ತಿಯಲ್ಲಿಯೂ ಮಹತ್ವವಾದ ವಿಶಿಷ್ಟವಾದ ಸಿನಿಮಾ ಮಾಡಲು ಕಾತರರಾಗಿದ್ದೇವೆ'' ಎಂದಿದ್ದಾರೆ ಪವನ್.

  Hamsalekha - ರವಿಚಂದ್ರನ್ ದಾಖಲೆ ಯಾರಿಂದಲೂ ಅಳಿಸೋಕೆ ಸಾಧ್ಯವಿಲ್ಲ | Oneindia Kannada
  ವಿಜಯ್ ಕಿರಗಂದೂರ್ ನಿರ್ಮಿಸುತ್ತಿರುವ ಸಿನಿಮಾ

  ವಿಜಯ್ ಕಿರಗಂದೂರ್ ನಿರ್ಮಿಸುತ್ತಿರುವ ಸಿನಿಮಾ

  ಪುನೀತ್ ರಾಜ್‌ಕುಮಾರ್ ಪ್ರಸ್ತುತ 'ಜೇಮ್ಸ್' ಸಿನಿಮಾದ ಚಿತ್ರೀಕರಣದಲ್ಲಿ ತೊಡಗಿದ್ದಾರೆ. ಸಿನಿಮಾದ ಚಿತ್ರೀಕರಣ ಅಂತಿಮ ಹಂತದಲ್ಲಿದೆ. ಆ ಸಿನಿಮಾದ ಬಳಿಕ ಪವನ್ ಕುಮಾರ್ ನಿರ್ದೇಶನದ ಹೊಸ ಸಿನಿಮಾದಲ್ಲಿ ನಟಿಸಲು ಆರಂಭಿಸಲಿದ್ದಾರೆ. ಆ ಸಿನಿಮಾವನ್ನು ಹೊಂಬಾಳೆ ಫಿಲಮ್ಸ್‌ನ ವಿಜಯ್ ಕಿರಗಂದೂರು ನಿರ್ಮಾಣ ಮಾಡಲಿದ್ದಾರೆ.

  English summary
  Director Pawan Kumar Reveals the Reason Behind Working with Puneeth Rajkumar.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X