»   » ರಜನಿ ಜೊತೆ ಪವನ್ ಒಡೆಯರ್ ಕನಸು ನನಸು

ರಜನಿ ಜೊತೆ ಪವನ್ ಒಡೆಯರ್ ಕನಸು ನನಸು

Posted By:
Subscribe to Filmibeat Kannada

ನಿರ್ದೇಶಕ ಪವನ್ ಒಡೆಯರ್ ಈಗ ಆಕಾಶದಲ್ಲಿ ಹಾರಾಡುತ್ತಿದ್ದಾರೆ. ಸದ್ಯಕ್ಕೆ ಅವರು ಕೆಳಗಿಳಿದು ನಡೆದಾಡುವ ಮನಸ್ಥಿತಿಯಲ್ಲಿಲ್ಲ. ಅವರನ್ನ ಹಿಡಿಯೋಕೆ ಯಾರ ಕೈಯ್ಲಿಂದಲೂ ಸಾಧ್ಯವಿಲ್ಲ.

ಹಾಗಾದ್ರೆ, ಪವನ್ ಒಡೆಯರ್ ಗೆ ಏನಾಯ್ತಪ್ಪಾ ಅಂದ್ರೆ, ಅವರ ಬಹುದಿನಗಳ ಕನಸೊಂದು ನನಸಾಗಿದೆ. ಆ ಖುಷಿಯಲ್ಲಿ ಪವನ್ ತೇಲಾಡುತ್ತಿದ್ದಾರೆ. ಅಂದ್ಹಾಗೆ ಆ ಆಸೆ ಯಾವುದು? ಸೂಪರ್ ಸ್ಟಾರ್ ರಜನಿಕಾಂತ್ ರನ್ನ ಮೀಟ್ ಮಾಡುವುದು..!


Director Pawan Wadeyar meets Super Star Rajinikanth

ಹೌದು, ಚಿಕ್ಕವಯಸ್ಸಿಂದಲೂ ಪವನ್ ಒಡೆಯರ್ ಗೆ ಸ್ಟೈಲ್ ಕಿಂಗ್ ರಜನಿಕಾಂತ್ ಅಂದ್ರೆ ಪ್ರಾಣ. ಅವರ ಎಲ್ಲಾ ಸಿನಿಮಾಗಳನ್ನೂ ಮಿಸ್ ಮಾಡದೆ ನೋಡುತ್ತಿದ್ದ ಪವನ್ ಗೆ, ಒಮ್ಮೆ ಅವರನ್ನ ಮೀಟ್ ಮಾಡಬೇಕು ಅನ್ನುವ ಆಸೆ ಇತ್ತಂತೆ.


ಆ ಆಸೆ ಇತ್ತೀಚೆಗಷ್ಟೇ ಈಡೇರಿದೆ. 'ದಕ್ಷಿಣ ಭಾರತದ ಸ್ಟಂಟ್ ಗಾಡ್', 'ತಲೈವಾ'ರನ್ನ ಪವನ್ ಒಡೆಯರ್ ಭೇಟಿ ಮಾಡಿ, ಮಾತನಾಡಿಸಿ ಬಂದಿದ್ದಾರೆ. ಅದರ ನೆನ್ನಪಲ್ಲಿ ನಿರ್ದೇಶಕ ಪವನ್ ಒಡೆಯರ್ ಕ್ಲಿಕ್ ಮಾಡಿಸಿಕೊಂಡಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.


Director Pawan Wadeyar meets Super Star Rajinikanth

ಪವನ್ ಒಡೆಯರ್ ಜೊತೆ ರಜನಿಕಾಂತ್ ಇರುವ ಫೋಟೋ ನೋಡಿ, 'ರಜನಿ ಸಾರ್ ಕಾಲ್ ಶೀಟ್ ಹಿಡಿದಿದ್ದಾರೆ ಪವನ್' ಅಂತ ಅದಾಗಲೇ ಗಾಂಧಿನಗರದಲ್ಲಿ ಗುಲ್ಲೆದಿದೆ. ['ಫಿಲ್ಮಿಬೀಟ್' ಜೊತೆ ಪವನ್ 'ರಣವಿಕ್ರಮ' ವಿಶೇಷಗಳು]


ಅಸಲಿಗೆ ಪವನ್ ಗೆ ರಜನಿ ಅಪಾಯಿಟ್ಮೆಂಟ್ ಹೇಗೆ ಮತ್ತು ಯಾಕೆ ಸಿಕ್ತು ಅನ್ನೋದನ್ನ ಪವನ್ ಗುಟ್ಟಾಗಿಟ್ಟಿದ್ದಾರೆ. ಅದೇನೇಯಿರಲಿ 'ರಣವಿಕ್ರಮ' ರಿಲೀಸ್ ಆಗುತ್ತಿರುವ ಬೆನ್ನಲ್ಲೇ, ರಜನಿಯನ್ನ ಭೇಟಿ ಮಾಡಿ ಡಬ್ಕಿ ಡಬಲ್ ಖುಷಿಯಲ್ಲಿದ್ದಾರೆ ಪವನ್.

English summary
Kannada Director Pawan Wadeyar is excited and happy as he has met Super Star Rajinikanth. This special meeting has sparked several speculations in Sandalwood.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada