»   » 'ರಣವಿಕ್ರಮ'ನಿಗೆ ಗುರು ರಾಯರ ಕೃಪಾ ಕಟಾಕ್ಷ

'ರಣವಿಕ್ರಮ'ನಿಗೆ ಗುರು ರಾಯರ ಕೃಪಾ ಕಟಾಕ್ಷ

Posted By:
Subscribe to Filmibeat Kannada

ನಿರ್ದೇಶಕ ಪವನ್ ಒಡೆಯರ್ ಖುಷಿಗೆ ಪಾರವೇ ಇಲ್ಲ. 'ರಣವಿಕ್ರಮ' ಸುತ್ತ ಸುತ್ತಿಕೊಂಡಿದ್ದ ಸಂಕಷ್ಟಗಳೆಲ್ಲವೂ ಪರಿಹಾರವಾಗಿದೆ. ಸೆನ್ಸಾರ್ ಅಂಗಳಕ್ಕೆ ಕಾಲಿಟ್ಟಿರುವ 'ರಣವಿಕ್ರಮ' ಬಿಡುಗಡೆಯ ಹೊಸ್ತಿಲಲ್ಲಿದೆ. ಇದೇ ಖುಷಿಯಲ್ಲಿ ಪವನ್ ಒಡೆಯರ್ ಮಂತ್ರಾಲಯಕ್ಕೆ ತೆರಳಿದ್ದಾರೆ.

ನಿರ್ದೇಶಕ ಪವನ್ ಒಡೆಯರ್ ಗೆ ಮೊದಲಿನಿಂದಲೂ ಗುರು ರಾಯರ ಬಗ್ಗೆ ಅಪಾರ ಭಕ್ತಿ ಮತ್ತು ನಂಬಿಕೆ. ಒಂದು ವರ್ಷದಿಂದ 'ರಣವಿಕ್ರಮ'ನಿಗಾಗಿ ಹಗಲಿರುಳು ಶ್ರಮ ಪಟ್ಟಿರುವ ಪವನ್ ಒಡೆಯರ್, ಅದಕ್ಕೆ ತಕ್ಕ ಪ್ರತಿಫಲ ಸಿಗಲಿ ಅನ್ನುವ ಕಾರಣಕ್ಕೆ ಮಂತ್ರಾಲಯಕ್ಕೆ ಪಯಣ ಬೆಳೆಸಿದ್ದಾರೆ.


'ರಣವಿಕ್ರಮ' ಚಿತ್ರತಂಡದ ಸಹಾಯಕ ಹುಡುಗರು ಮತ್ತು ಪವನ್ ಒಡೆಯರ್ ಸ್ನೇಹಿತರೆಲ್ಲಾ ಒಟ್ಟುಗೂಡಿ ಕೈಗೊಂಡಿರುವ ಯಾತ್ರೆ ಇದು. ಸ್ನೇಹಿತರ ಜೊತೆ ಪವನ್ ಕ್ಲಿಕ್ ಮಾಡಿರುವ ಸೆಲ್ಫಿ ಇಲ್ಲಿದೆ ನೋಡಿ...


Director Pawan Wadeyar visits Mantralaya

'ರಣವಿಕ್ರಮ' ಚಿತ್ರದ ಎರಡು ಹಾಡುಗಳ ಮೇಲೆ ಲಹರಿ ಆಡಿಯೋ ಸಂಸ್ಥೆಯಿಂದ ಕಾಪಿರೈಟ್ ಆರೋಪ ಕೇಳಿ ಬಂದಿತ್ತು. ಆದ್ರೀಗ 20 ಲಕ್ಷ ರೂಪಾಯಿ ಗೌರವಧನ ನೀಡಿ, ಬಿಡುಗಡೆ ಹಾದಿಯನ್ನ ಸುಗಮಗೊಳಿಸಿದ್ದಾರೆ ನಿರ್ಮಾಪಕರಾಗಿರುವ ಜಯಣ್ಣ-ಭೋಗೇಂದ್ರ. [ಪವನ್ ಒಡೆಯರ್ ಗೆ ಪುನೀತ್ ಕ್ಯೂಟ್ ಗಿಫ್ಟ್]


ಏಪ್ರಿಲ್ 10 ರಂದು ತೆರೆಗೆ ಬರಲು 'ರಣವಿಕ್ರಮ' ರೆಡಿಯಾಗಿದೆ. ಚಿತ್ರಕ್ಕಿನ್ನೂ ಸೆನ್ಸಾರ್ ಆಗಿಲ್ಲ. ಇಂದು ಅಥವಾ ನಾಳೆ 'ರಣವಿಕ್ರಮ' ಚಿತ್ರವನ್ನ ವೀಕ್ಷಿಸಿ ಸೆನ್ಸಾರ್ ಮಂಡಳಿ, ಸೆನ್ಸಾರ್ ಸರ್ಟಿಫಿಕೇಟ್ ನೀಡಲಿದೆ. ಅದಾದ ಬಳಿಕ ರಿಲೀಸ್ ಡೇಟ್ ಅನೌನ್ಸ್ ಆಗಲಿದೆ.


Director Pawan Wadeyar visits Mantralaya

ಖಡಕ್ ಪೊಲೀಸ್ ಆಫೀಸರ್ ಲುಕ್ ನಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಕಾಣಿಸಿಕೊಂಡಿದ್ರೆ, ಅವರ ಜೊತೆ ಡ್ಯುಯೆಟ್ ಹಾಡುವ ನಾಯಕಿಯರು ಟಾಲಿವುಡ್ ನ ಅಂಜಲಿ ಮತ್ತು ಬಾಲಿವುಡ್ ನ ಅದಾ ಶರ್ಮಾ. [ರಜನಿ ಜೊತೆ ಪವನ್ ಒಡೆಯರ್ ಕನಸು ನನಸು]


ಗಾಂಧಿನಗರದ ತುಂಬೆಲ್ಲಾ ಸಖತ್ ಹೈಪ್ ಕ್ರಿಯೇಟ್ ಮಾಡಿರುವ 'ರಣವಿಕ್ರಮ' ಹಿಟ್ ಆಗಲಿ ಅಂತ ಪ್ರಾರ್ಥಿಸುವುದಕ್ಕೆ ಪವನ್, ಮಂತ್ರಾಲಯಕ್ಕೆ ತೆರಳಿದ್ದಾರೆ. 'ರಣವಿಕ್ರಮ'ನಿಗೆ ಗುರು ರಾಯರ ಕೃಪಾ ಕಟಾಕ್ಷ ಸಿಕ್ಕರೆ, ಸಿನಿಮಾ ಸೂಪರ್ ಹಿಟ್ ಆಗುವುದು ಗ್ಯಾರೆಂಟಿ. (ಫಿಲ್ಮಿಬೀಟ್ ಕನ್ನಡ)

English summary
Director Pawan Wadeyar visits Mantralaya to offer prayers for Sri Guru Raghavendra Swamy. Meanwhile, Pawan Wadeyar directorial 'Ranavikrama' is expected to release on April 10th.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada