For Quick Alerts
  ALLOW NOTIFICATIONS  
  For Daily Alerts

  ಪುನೀತ್ ರಾಜ್ ಕುಮಾರ್ ಸಿನಿಮಾಗೆ ಹಾಡು ಬರೆಯುವ ಸುವರ್ಣಾವಕಾಶ

  By Naveen
  |
  ಪುನೀತ್ ಫ್ಯಾನ್ಸ್ ಗೆ ಗುಡ್ ನ್ಯೂಸ್ | Puneeth rajkumar fans got a golden opportunity | Filmibeat Kannada

  ತುಂಬ ಜನ ಯುವ ಸಾಹಿತಿಗಳು ಈಗ ಚಿತ್ರರಂಗಕ್ಕೆ ಬರುತ್ತಿದ್ದಾರೆ. ನಮ್ಮ ಜೊತೆಗೆ ಇರುವ ಅನೇಕರು ಹಾಡು ಬರೆಯುವ ಹವ್ಯಾಸ ಹೊಂದಿರುತ್ತಾರೆ. ಒಳ್ಳೆ ಒಳ್ಳೆಯ ಸಾಲುಗಳನ್ನು ಬರೆಯುವ ಕೆಲವರಿಗೆ ಒಳ್ಳೆಯ ಅವಕಾಶಗಳು ಮಾತ್ರ ಸಿಕ್ಕಿರುವುದಿಲ್ಲ. ಆದರೆ ಈಗ ಅಂತಹ ಯುವ ಚಿತ್ರಸಾಹಿತಿಗಳಿಗೆ ಒಂದು ಸುವರ್ಣಾವಕಾಶ ಬಂದಿದೆ.

  'ನಟ ಸಾರ್ವಭೌಮ' ಚಿತ್ರದ ಇಂಟ್ರೊಡಕ್ಷನ್ ಸೀನ್ ಶೂಟಿಂಗ್ 'ನಟ ಸಾರ್ವಭೌಮ' ಚಿತ್ರದ ಇಂಟ್ರೊಡಕ್ಷನ್ ಸೀನ್ ಶೂಟಿಂಗ್

  ಹೌದು, ಪುನೀತ್ ರಾಜ್ ಕುಮಾರ್ ಸಿನಿಮಾಗೆ ಹಾಡು ಬರೆಯುವ ಅವಕಾಶವನ್ನು ನಿರ್ದೇಶಕ ಪವನ್ ಒಡೆಯರ್ ಮಾಡಿ ಕೊಟ್ಟಿದ್ದಾರೆ. ಪುನೀತ್ ಅಭಿನಯದ ಹೊಸ ಸಿನಿಮಾ 'ನಟ ಸಾರ್ವಭೌಮ' ಚಿತ್ರಕ್ಕೆ ಹೊಸ ಸಾಹಿತಿಗಳ ಕೈ ನಲ್ಲಿ ಹಾಡು ಬರೆಸುವ ಪ್ಲಾನ್ ಮಾಡಿರುವ ಚಿತ್ರತಂಡ ಒಂದು ವೇದಿಕೆಯನ್ನು ಸಿದ್ಧ ಮಾಡಿದೆ. ಇನ್ನು ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನಿರ್ದೇಶಕ ಪವನ್ ಒಡೆಯರ್ ತಮ್ಮ ಫೇಸ್ ಬುಕ್ ಲೈವ್ ಮೂಲಕ ತಿಳಿಸಲಿದ್ದಾರೆ. ಇಂದು ರಾತ್ರಿ 8 ಗಂಟೆಗೆ ಪವನ್ ಒಡೆಯರ್ ಫೇಸ್ ಬುಕ್ ಲೈವ್ ಬರಲಿದ್ದು ಆಸಕ್ತರು ಅದನ್ನು ವೀಕ್ಷಿಸಬಹುದಾಗಿದೆ.

  ಚಿತ್ರಕ್ಕೆ ರಚಿತಾ ರಾಮ್ ನಾಯಕಿ ಆಗಿದ್ದಾರೆ. 'ಚಕ್ರವ್ಯೂಹ' ಸಿನಿಮಾದ ನಂತರ ಮತ್ತೆ ಪುನೀತ್ ಹಾಗೂ ರಚಿತಾ ಈ ಸಿನಿಮಾದ ಮೂಲಕ ಒಂದಾಗಿದ್ದಾರೆ. ಸಿನಿಮಾದಲ್ಲಿ ಬಿ ಸರೋಜದೇವಿ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ. 'ರಣವಿಕ್ರಮ' ನಂತರ ಮತ್ತೆ ಪುನೀತ್ ಗೆ ಪವನ್ ಡೈರೆಕ್ಷನ್ ಮಾಡುತ್ತಿದ್ದಾರೆ. ರಾಕ್ ಲೈನ್ ವೆಂಕಟೇಶ್ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ.

  ಅಂದಹಾಗೆ, 'ನಟ ಸಾರ್ವಭೌಮ' ಸಿನಿಮಾದ ಫಸ್ಟ್ ಲುಕ್ ಈಗಾಗಲೇ ಬಿಡುಗಡೆಯಾಗಿ ದೊಡ್ಡ ರೆಸ್ಪಾನ್ಸ್ ಪಡೆದಿದೆ. ಸಿನಿಮಾದಲ್ಲಿ ಪುನೀತ್ ರಾಜ್ ಕುಮಾರ್ ಹೊಸ ಹೇರ್ ಸ್ಟೈಲ್ ನಲ್ಲಿ ಮಿಂಚಿದ್ದು, ಅವರ ಅಭಿಮಾನಿಗಳು ಅದೇ ರೀತಿಯ ಹೇರ್ ಸ್ಟೈಲ್ ಗಳನ್ನು ಮಾಡಿಸಿಕೊಂಡಿದ್ದಾರೆ. ಸದ್ಯ ಈ ಸಿನಿಮಾದ ಶೂಟಿಂಗ್ ಭರ್ಜರಿಯಾಗಿ ನಡೆಯುತ್ತಿದೆ.

  English summary
  Director Pawan Wodeyar calls lyricists auditions for Actor Puneeth Rajkumar's 'Nata Sarvabhouma' kannada movie

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X