For Quick Alerts
  ALLOW NOTIFICATIONS  
  For Daily Alerts

  ಜೋಗಿ ಪ್ರೇಮ್ ನಿರ್ದೇಶನದ ಹೊಸ ಸಿನಿಮಾಗೆ ಧ್ರುವ ಸರ್ಜಾ ನಾಯಕ

  By ಫಿಲ್ಮಿಬೀಟ್ ಡೆಸ್ಕ್
  |

  ಸ್ಯಾಂಡಲ್ ವುಡ್ ನ ಖ್ಯಾತ ನಿರ್ದೇಶಕ ಪ್ರೇಮ್ ಸದ್ಯ ಏಕ್ ಲವ್ ಯಾ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಪ್ರೇಮ್ ಪತ್ನಿ, ನಟಿ ರಕ್ಷಿತಾ ಸಹೋದರ ರಾಣಾ ಸಿನಿಮಾದಲ್ಲಿ ನಾಯಕನಾಗಿ ಕಾಣಿಸಿಕೊಳ್ಳುವ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಡುತ್ತಿದ್ದಾರೆ. ಈಗಾಗಲೇ ಚಿತ್ರೀಕರಣ ಮುಗಿಸಿರುವ 'ಏಕ್ ಲವ್ ಯಾ' ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ನಿರತವಾಗಿದೆ.

  ಇದರ ಬೆನ್ನಲ್ಲೇ ಪ್ರೇಮ್ ಹೊಸ ಸಿನಿಮಾದ ಸುದ್ದಿ ಸದ್ದು ಮಾಡುತ್ತಿದ್ದಾರೆ. ನಿರ್ದೇಶಕ ಪ್ರೇಮ್ ಮುಂದಿನ ಸಿನಿಮಾ ಯಾರ ಜೊತೆ ಎನ್ನುವ ಚರ್ಚೆ ನಡೆಯುತ್ತಿದೆ. ಪ್ರೇಮ್ ಮುಂದಿನ ಸಿನಿಮಾದಲ್ಲಿ ಸ್ಟಾರ್ ನಟರ ಹೆಸರು ಕೇಳಿಬರುತ್ತಿತ್ತು. ಇದೀಗ ಕೇಳಿಬರುತ್ತಿರುವ ಮಾಹಿತಿ ಪ್ರಕಾರ ನಟ ಧ್ರುವ ಸರ್ಜಾ ಜೊತೆ ಪ್ರೇಮ್ ಹೊಸ ಸಿನಿಮಾ ಮಾಡಲಿದ್ದಾರೆ ಎನ್ನುವ ಮಾತು ಹರಿದಾಡುತ್ತಿದೆ.

  ಈಗಾಗಲೇ ಸಿನಿಮಾ ವಿಚಾರವಾಗಿ ಪ್ರೇಮ್ ಮತ್ತು ಧ್ರುವ ನಡುವೆ ಒಂದು ಸುತ್ತಿನ ಮಾತುಕತೆ ನಡೆದಿದೆ ಎನ್ನಲಾಗುತ್ತಿದೆ. ಇದೊಂದು ಮಾಸ್ ಕಮರ್ಷಿಯಲ್ ಸಿನಿಮಾವಾಗಿದ್ದು, ಪ್ರೇಮ್ ಮತ್ತು ಧ್ರುವ ಒಟ್ಟಿಗೆ ಕೆಲಸ ಮಾಡುವುದು ಬಹುತೇಕ ಖಚಿತ ಎನ್ನುತಿವೆ ಮೂಲಗಳು. ಅಂದಹಾಗೆ ಈ ಮೇಗಾ ಪ್ರಾಜೆಕ್ಟ್ ಗೆ ದೊಡ್ಡ ನಿರ್ಮಾಣ ಸಂಸ್ಥೆ ಬಂಡವಾಳ ಹೂಡಲು ಮುಂದಾಗಿದೆಯಂತೆ.

  ಅಂದಹಾಗೆ ಧ್ರುವ ಸರ್ಜಾ ಸದ್ಯ ನಿರ್ದೇಶಕ ಎಪಿ ಅರ್ಜುನ್ ಸಾರಥ್ಯದಲ್ಲಿ ಮೂಡಿಬರುತ್ತಿರುವ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾದ ಮುಹೂರ್ತ ಆಗಸ್ಟ್ 15ರಂದು ನಡೆಯಲಿದೆ. ಈ ಸಿನಿಮಾಗೂ ಮೊದಲು ಧ್ರುವ ನಿರ್ದೇಶಕ ನಂದಕೀಶೋರ್ ಜೊತೆ 'ದುಬಾರಿ' ಸಿನಿಮಾ ಘೋಷಣೆ ಮಾಡಿದ್ದರು. ಆದರೆ ಈ ಸಿನಿಮಾ ಕಾರಣಾಂತರಗಳಿಂದ ಸ್ಥಗಿತಗೊಂಡಿದೆ. ಬಳಿಕ ಎಪಿ ಅರ್ಜುನ್ ಸಿನಿಮಾಗೆ ಸಹಿ ಮಾಡಿದ್ದಾರೆ.

  ಅರ್ಜುನ್ ಜೊತೆಗಿನ ಸಿನಿಮಾ ಜೊತೆಗೆ ಧ್ರುವ, 'ಜಗ್ಗುದಾದಾ' ಸಿನಿಮಾ ಖ್ಯಾತಿಯ ನಿರ್ದೇಶಕ ರಾಘವೇಂದ್ರ ಹೆಗ್ಡೆ ಅವರ ನಿರ್ದೇಶನದ ಸಿನಿಮಾದಲ್ಲ ನಟಿಸಲು ಸಜ್ಜಾಗಿದ್ದಾರೆ. ಇದರ ಜೊತೆಗೆ ಎ ಹರ್ಷ ಸಿನಿಮಾ ಕೂಡ ಇದೆ. ಇದೆಲ್ಲದರ ನಡುವೆ ನಿರ್ದೇಶಕ ಪ್ರೇಮ್ ಸಿನಿಮಾ ಕೂಡ ಸೇರಿಕೊಂಡಿದೆ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಧ್ರುವ, ಎಪಿ ಅರ್ಜುನ್ ಸಿನಿಮಾ ಬಳಿಕ ಯಾವ ಸಿನಿಮಾ ಪ್ರಾರಂಭ ಮಾಡಲಿದ್ದಾರೆ ಎಂದು ಕಾದುನೋಡಬೇಕು.

  ಇತ್ತ ನಿರ್ದೇಶಕ ಪ್ರೇಮ್, ಏಕ್ ಲವ್ ಯಾ ಸಿನಿಮಾದ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ. ರೊಮ್ಯಾಂಟಿಕ್ ಸಿನಿಮಾ ಇದಾಗಿದ್ದು, ರಾಣಾ ಜೊತೆ ನಾಯಕಿಯಾಗಿ ರೇಷ್ಮಾ ನಾನಯ್ಯ ಮತ್ತು ರಚಿತಾ ರಾಮ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಸದ್ಯ ಆಡಿಯೋ ಬಿಡುಗಡೆಗೆ ತಯಾರಿ ನಡೆಯುತ್ತಿದ್ದು, ಇತ್ತೀಚಿಗಷ್ಟೆ ಚಿತ್ರದ ಪ್ರಮುಖ ಹಾಡಿಗೆ, ಕಣ್ಣೇ ಅದಿರಿಂದಿ ಖ್ಯಾತಿಯ ಗಾಯಕಿ ಮಂಗ್ಲಿ ಧ್ವನಿ ನೀಡಿದ್ದಾರೆ. ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಮಾಡಿದ್ದಾರೆ.

  ಈ ಬಗ್ಗೆ ಸಂತಸ ವ್ಯಕ್ತಪಡಿಸಿದ್ದ ಗಾಯಕಿ ಮಂಗ್ಲಿ, ''ಲೆಜೆಂಡರಿ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರ ಜೊತೆ ಮತ್ತೊಮ್ಮೆ ಕೆಲಸ ಮಾಡಿದ್ದು ಮತ್ತು ಅವರನ್ನು ಭೇಟಿ ಮಾಡಿದ್ದು ಖುಷಿ ಸಂಗತಿ. ಅವರದ್ದು ವಿಶಾಲ ಹೃದಯದ ವ್ಯಕ್ತಿತ್ವ. ಅವರ ಪ್ರಾಜೆಕ್ಟ್‌ನಲ್ಲಿ ಭಾಗವಾಗಿದ್ದು ನಿಜಕ್ಕೂ ಹೆಮ್ಮೆ ಎನಿಸಿದೆ'' ಟ್ವೀಟ್ ಮಾಡಿದ್ದಾರೆ.

  ಅರ್ಜುನ್ ಜನ್ಯ ಅವರ ಸ್ಟುಡಿಯೋದಲ್ಲಿ ಈ ಹಾಡಿನ ರೆಕಾರ್ಡಿಂಗ್ ಮುಗಿದಿದ್ದು, ಆಗ ನಿರ್ದೇಶಕ ಪ್ರೇಮ್ ಮತ್ತು ನಾಯಕನಟ ರಾಣಾ ಕೂಡ ಜೊತೆಯಲ್ಲಿದ್ದರು. ಸದ್ಯದಲ್ಲೇ ಪ್ರೇಮ್ 'ಏಕ್ ಲವ್ ಯಾ' ಆಡಿಯೋ ಮೂಲಕ ಅಭಿಮಾನಿಗಳ ಮುಂದೆ ಬರಲಿದ್ದಾರೆ.

  'ದಿ ವಿಲನ್' ಸಿನಿಮಾದ ಬಳಿಕ ಪ್ರೇಮ್ ನಿರ್ದೇಶನ ಮಾಡುತ್ತಿರುವ ಸಿನಿಮಾ 'ಏಕ್ ಲವ್ ಯಾ'. ರಕ್ಷಿತಾ ಈ ಚಿತ್ರದ ನಿರ್ಮಾಣ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಈ ಸಿನಿಮಾ ಮುಗಿಸಿ ಪ್ರೇಮ್, ಧ್ರುವ ಸರ್ಜಾ ಜೊತೆಗೆ ಆಕ್ಷನ್ ಸಿನಿಮಾದಲ್ಲಿ ಬ್ಯುಸಿಯಾಗುವ ಸಾಧ್ಯತೆ ಇದೆ.

  English summary
  Jogi Prem in talks with Action Prince Dhruva Sarja for commercial entertainer project.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X