»   » ಪ್ರೇಮ್ ಅಡ್ಡ ಚಿತ್ರತಂಡಕ್ಕೆ ಮಹಾ ಮಂಗಳಾರತಿ!

ಪ್ರೇಮ್ ಅಡ್ಡ ಚಿತ್ರತಂಡಕ್ಕೆ ಮಹಾ ಮಂಗಳಾರತಿ!

By: ಜೀವನ್ ಸೂರ್ಯ
Subscribe to Filmibeat Kannada
<ul id="pagination-digg"><li class="next"><a href="/news/director-prem-prem-adda-movie-court-controversy-067327.html">Next »</a></li></ul>
Prem
ನಿರ್ದೇಶಕ ಪ್ರೇಮ್ ಮತ್ತು 'ಪ್ರೇಮ್ ಅಡ್ಡ' ಚಿತ್ರತಂಡಕ್ಕೆ ಕೋರ್ಟ್ ನಲ್ಲಿ ಹಿನ್ನಡೆಯಾಗಿದೆ. ಈ ಮೊದಲು ಕೆಎಫ್ ಸಿಸಿ ವಿರುದ್ಧ ಗುಡುಗಿದ್ದ ಪ್ರೇಮ್ ಅಡ್ಡ ಚಿತ್ರದ ನಟ, ನಿರ್ದೇಶಕ ಪ್ರೇಮ್ ಹಾಗೂ ನಿರ್ಮಾಪಕ ಮೇಕಾ ಮುರುಳಿಕೃಷ್ಣ, ಈಗ ಮತ್ತೆ ಕೆಎಫ್ ಸಿಸಿ ಬಳಿಗೇ ನ್ಯಾಯಕ್ಕಾಗಿ ಮೊರೆಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರೇಮ್ ಅಡ್ಡ ಚಿತ್ರತಂಡವೀಗ ಮಾತುಕತೆ ಹಂತ ಬಿಟ್ಟು ನೇರವಾಗಿ ಧರಣಿ ಕೂತಿದೆ.

ಟೈಟಲ್ ನಲ್ಲಿರುವ 'ಪ್ರೇಮ ಅಡ್ಡ' ಎಂಬ ಪದವನ್ನು ಒಂದೇ ರೀತಿಯಲ್ಲಿ ಅಂದರೆ ಗಾತ್ರ ಹಾಗೂ ವಿನ್ಯಾಸದಲ್ಲಿ ಬರೆದಿರಬೇಕು ಎಂದು ಚಲನಚಿತ್ರ ವಾಣಿಜ್ಯ ಮಂಡಳಿ ಹೇಳಿತ್ತು. ಆದರೆ ಅದಕ್ಕೆ ವಿರುದ್ಧವಾಗಿ ಚಿತ್ರತಂಡ 'ಪ್ರೇಮ್' ಅನ್ನುವುದನ್ನು ಚಿಕ್ಕದಾಗಿ ಹಾಗೂ 'ಅಡ್ಡ' ಪದವನ್ನು ದೊಡ್ಡದಾಗಿ ಬರೆದಿದ್ದರು. ಆ ಸಲುವಾಗಿ ಬಂದ ಕೆಎಫ್ ಸಿಸಿ ವಿರೋಧಕ್ಕೆ "ಶೀರ್ಷಿಕೆ ಇಡುವುದು ನಿರ್ದೇಶಕ ಹಾಗೂ ಚಿತ್ರತಂಡದ ಕ್ರಿಯೆಟಿವಿಟಿಗೆ ಸಂಬಂಧಿಸಿದ್ದು ಹಾಗೂ ಅದು ನಿರ್ದೇಶಕನ ಹಕ್ಕು" ಎಂದು ಚಿತ್ರತಂಡದವರು ವಾದಿಸಿದ್ದರು.

ಚಿತ್ರತಂಡದ ವಾದವನ್ನೊಪ್ಪದ ಕೆಎಫ ಸಿಸಿ, ಈ ಚಿತ್ರದ ಜಾಹೀರಾತುಗಳನ್ನು ಪ್ರಕಟಿಸದಂತೆ ಎಲ್ಲಾ ಪತ್ರಿಕೆಗಳಿಗೆ ಮನವಿ ಮಾಡಿಕೊಂಡಿತ್ತು. ಅದರಂತೆ ಚಿತ್ರದ ಜಾಹೀರಾತುಗಳ ಪ್ರಚಾರ ನಿಂತಿತ್ತು. ಇದರ ವಿರುದ್ಧ ನಿರ್ಮಾಪಕರು ನ್ಯಾಯಾಲಯದ ಮೊರೆ ಹೋಗಿದ್ದರು. ಆದರೆ ಕೋರ್ಟ್ "ನಿಮ್ಮ ವಿವಾದವನ್ನು ದೊಡ್ಡ ಪ್ರಕರಣ ಮಾಡಿ ನ್ಯಾಯಾಲಯಕ್ಕೆ ತೆಗೆದುಕೊಂಡು ಬರಬೇಡಿ. ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲೇ ಇತ್ಯರ್ಥಪಡಿಸಿಕೊಳ್ಳಿ" ಎಂದು ಆದೇಶಿಸಿದೆ.

ಪ್ರೇಮ್ ಅಡ್ಡ ಚಿತ್ರತಂಡಕ್ಕೀಗ ಮಹಾ ಮಂಗಳಾರತಿ ಆಗಿದೆ. ಈ ಮೂಲಕ ಕೋರ್ಟ್ ಆದೇಶದಂತೆ ಪ್ರೇಮ್ ಅಂಡ್ ಟೀಮ್ ಮತ್ತೆ ಕೆಎಫ್ ಸಿಸಿ ಮೊರೆ ಹೋಗಬೇಕಾಗಿದೆ. ಅದು ಹೇಳಿದಂತೆ ಕೇಳಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಆದರೆ ಈ ಮುಖಭಂಗವನ್ನು ಸಹಿಸಲು ಸಾಧ್ಯವಾಗದ ಚಿತ್ರತಂಡ, ನೇರವಾದ ಮಾತುಕತೆ ದಾರಿ ಬಿಟ್ಟು ಕೆಎಫ ಸಿಸಿ ಆವರಣದಲ್ಲಿ ಧರಣಿ ಕೂತಿದೆ. ಮುಂದಿನ ಪುಟ ನೋಡಿ...

<ul id="pagination-digg"><li class="next"><a href="/news/director-prem-prem-adda-movie-court-controversy-067327.html">Next »</a></li></ul>
English summary
Prem Adda movie Title Controversy continued and Director Prem, Producer Meka Muralikrishna and team went to Court for Justice. But told to solve it in KFCVC itself. So, now Prem and team are facing problem to continue their film promotion. They decided to strike against this in KFCC. &#13; &#13;
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada