»   » ಶೀಘ್ರ ತೆರೆಗೆ ಮೇಲುಕೋಟೆ ಸಾಂಗ್ 'ಪ್ರೇಮ್ ಅಡ್ಡ'

ಶೀಘ್ರ ತೆರೆಗೆ ಮೇಲುಕೋಟೆ ಸಾಂಗ್ 'ಪ್ರೇಮ್ ಅಡ್ಡ'

Posted By:
Subscribe to Filmibeat Kannada
Prem
ನಿರ್ದೇಶಕ, ನಟ ಪ್ರೇಮ್ ನಟನೆಯ 'ಪ್ರೇಮ್ ಅಡ್ಡ' ಚಿತ್ರವು ಬರುವ ತಿಂಗಳು ಅಂದರೆ ನವೆಂಬರ್ ನಲ್ಲಿ ತೆರೆಗೆ ಅಪ್ಪಳಿಸಲು ಸಿದ್ಧವಾಗಿದೆ. ವಿವಾದಾತ್ಮಕ 'ಮೇಲುಕೋಟೆ' ಹಾಡಿನ ಮೂಲಕ ಸಖತ್ ಸುದ್ದಿಯಲ್ಲಿರುವ 'ಪ್ರೇಮ್ ಅಡ್ಡ', ನವೆಂಬರ್ 01 ರಂದು ಬಿಡುಗಡೆಯಾಗಲಿರುವ ದರ್ಶನ್ ಅಭಿನಯದ 'ಸಂಗೊಳ್ಳಿ ರಾಯಣ್ಣ' ಚಿತ್ರದ ನಂತರ ತೆರೆಗೆ ಬರಲು ಸಜ್ಜಾಗಿ ಕುಳಿತಿದೆ. ದಿನಾಂಕ ಪ್ರಕಟಿಸುವುದಷ್ಟೇ ಬಾಕಿ!

ಪ್ರೇಮ್ ನಟನೆಯ 'ಪ್ರೇಮ್ ಅಡ್ಡ' ಚಿತ್ರಕ್ಕೆ ಈಗ ಭಾರಿ ಡಿಮ್ಯಾಂಡ್ ಕ್ರಿಯೇಟ್ ಆಗಿದೆ. ಆ ಚಿತ್ರದಲ್ಲಿರುವ ಮೇಲುಕೋಟೆ ಹಾಡು ವಿವಾದಕ್ಕೆ ಕಾರಣವಾಗಿದ್ದರೂ ಅದರಿಂದ ಚಿತ್ರಕ್ಕೆ ಭಾರಿ ಲಾಭವಾಗಿರುವುದು ಖಂಡಿತ ಎಂದಿದೆ ಚಿತ್ರತಂಡ. ಮೇಲುಕೋಟೆ ಹಾಡು ಮಾತ್ರವಲ್ಲ, ಪ್ರೇಮ್ ಅಡ್ಡ ಚಿತ್ರದ ಎಲ್ಲಾ ಹಾಡುಗಳಿಗೂ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆಯಂತೆ. ಆಡಿಯೋ ಕಂಪನಿಯವರೇ ಅದನ್ನು ಬಾಯ್ಬಿಟ್ಟು ಹೇಳಿದ್ದಲ್ಲದೇ, ಇನ್ನೂ ಸಾಕಷ್ಟು ದುಡ್ಡು ಮಾಡುವುದು ಖಂಡಿತ ಎಂದಿದ್ದಾರಂತೆ.

ಪ್ರೇಮ್ ನಟನೆಯ ಪ್ರೀತಿ ಏಕೆ ಭೂಮಿ ಮೇಲಿದೆ ಚಿತ್ರ ಸೋತಮೇಲೆ ಪ್ರೇಮ್ ನಟನಾಗುವುದಕ್ಕೆ ಲಾಯಕ್ಕೇ ಎಂಬ ಪ್ರಶ್ನೆ ಉದ್ಯಮದಲ್ಲಿ ಹಾಗೂ ಕನ್ನಡ ಸಿನಿಪ್ರೇಕ್ಷಕವಲಯದಲ್ಲಿ ಕೇಳಿಬಂದಿತ್ತು. ನಂತರ ಶಿವರಾಜ್ ಕುಮಾರ್ ಅಭಿನಯ ಹಾಗೂ ಪ್ರೇಮ್ ನಿರ್ದೇಶನದ 'ಜೋಗಯ್ಯ' ಚಿತ್ರ ಸೋತ ಮೇಲೆ ಪ್ರೇಮ್ ನಿರ್ದೇಶನದ ಬಗ್ಗೆಯೂ ಅಪಸ್ವರ ಕೇಳಿಬಂತು. ಆದರೆ ಇದೀಗ ಬಿಡುಗಡೆ ಹಂತಕ್ಕೆ ಬಂದು ನಿಂತಿರುವ 'ಪ್ರೇಮ್ ಅಡ್ಡ' ಎಲ್ಲ ಪ್ರಶ್ನೆ, ಅಪಸ್ವರಗಳಿಗೂ ಉತ್ತರ ನೀಡಿದರೆ ಆಶ್ಚರ್ಯವಿಲ್ಲ.

ಪ್ರೇಮ್ ಅಡ್ಡ ಬಿಡುಗಡೆ ನಂತರ ಪ್ರೇಮ್, ಅವರ ಶಿಷ್ಯ ಗುಬ್ಬಿ ಖ್ಯಾತಿಯ ವಿಜಯ್ ನಿರ್ದೇಶನದ 'ಪೋಲಿ' ಚಿತ್ರದಲ್ಲಿ ನಟಿಸುವುದು ಪಕ್ಕಾ ಆಗಿಗೆ. ಹಾಗಂತ, ಪ್ರೇಮ್ ನಟನಾಗಿಯೇ ಮುಂದುವರಿಯುತ್ತಾರೆ ಎಂಬ ವಾತಾವರಣವೂ ಇಲ್ಲ. ಕಾರಣ, ವಿಜಯ್ ನಿರ್ದೇಶನ, ಪ್ರೇಮ್ ನಟನೆ ಚಿತ್ರದ ನಂತರ ರಕ್ಷಿತಾ ನಿರ್ಮಾಣ ಹಾಗೂ ಪ್ರೇಮ್ ನಿರ್ದೇಶನದಲ್ಲಿ ಕಿಚ್ಚ ಸುದೀಪ್ ಅಭಿನಯದ ಚಿತ್ರ ಬರಲಿದೆ. ಸದ್ಯಕ್ಕೆ ಆ ಚಿತ್ರ ಸ್ಕ್ರಿಪ್ಟ್ ಹಂತದಲ್ಲಿದೆ. (ಒನ್ ಇಂಡಿಯಾ ಕನ್ನಡ)

English summary
Director Prem acted upcoming movie 'Prem Adda' to Release on next month, November 2012. The song of Melukote, created high expectation for this movie. 
 
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada