»   » ಭಂ ಭಂ ಬೋಲೇನಾಥ್ ಎಂದು ತಮಿಳಿಗೆ ಪ್ರೇಮ್

ಭಂ ಭಂ ಬೋಲೇನಾಥ್ ಎಂದು ತಮಿಳಿಗೆ ಪ್ರೇಮ್

By: ಜೀವನರಸಿಕ
Subscribe to Filmibeat Kannada

ಇವತ್ತು ಮಂಡ್ಯದ ಹೈದ ನಿರ್ದೇಶಕ ಪ್ರೇಮ್ ಅಧಿಕೃತವಾಗಿ ತಮಿಳಿಗೆ ಎಂಟ್ರಿಕೊಡುವ ಸಿನಿಮಾ ಘೋಷಣೆಯಾಗ್ತಿದೆ. ಅಂದಹಾಗೆ ಸಿನಿಮಾದ ಟೈಟಲ್ 'ಭಂ ಭಂ ಬೋಲೇನಾಥ್'. ವಿಶೇಷ ಅಂದ್ರೆ ಮೊದಲ ಬಾರಿಗೆ ನಿರ್ದೇಶಕ 'ಫ್ರೇಂ' ಅನ್ನೋ ಪವರ್ಫುಲ್ ಟೈಟಲ್ನಲ್ಲಿ ಅಭಿನಯಿಸ್ತಿದ್ದಾರೆ.

'ಹುಡುಗರು' ಸಿನಿಮಾದಲ್ಲಿ 'ಭಂ ಭಂ ಬೋಲೇನಾಥ್' ಅಂದಿದ್ದ ಪವರ್ ಸ್ಟಾರ್ ಇವತ್ತು (ಏ.9) ಈ ಪವರ್ ಫುಲ್ ಟೈಟಲ್ ಲಾಂಚ್ ಮಾಡಲಿದ್ದಾರೆ. ಇನ್ನು ಇಳಯರಾಜ ಸಂಗೀತ ಚಿತ್ರಕ್ಕಿರಲಿದ್ದು ಸಂಗೀತದಲ್ಲಂತೂ ಅಬ್ಬರವಿರೋದು ಕನ್ಫರ್ಮ್. [ಈ ಬಾರಿ ಲೋಕಸಭೆಗೆ ಸ್ಪರ್ಧಿಸುತ್ತಿಲ್ಲ: ಪ್ರೇಮ್]

Director Prem

ಇನ್ನು ತಮಿಳು ಕನ್ನಡ ಎರಡೂ ಭಾಷೆಗಳಲ್ಲಿ ಚಿತ್ರ ತಯಾರಾಗ್ತಿದ್ದು ನಾಯಕ ನಟನಾಗಿ ಪ್ರೇಮ್ ತಮಿಳಿನ 'ಫ್ರೇಂ'ನಲ್ಲಿ ಮಿಂಚೋಕೆ ರೆಡಿಯಾಗಿದ್ದಾರೆ. ಸೃಜನ್ ಲೋಕೇಶ್ ನಟಿಸಿದ್ದ 'ಆನೆಪಟಾಕಿ' ಸಿನಿಮಾ ನಿರ್ಮಾಣ ಮಾಡಿದ್ದ ಸುರೇಶ್ ಬಾಬು ಅವರು 'ಭಂ ಭಂ ಬೋಲೇನಾಥ್' ಸಿನಿಮಾ ಮಾಡ್ತಿದ್ದಾರೆ.

ಕಥೆ ತಮಿಳು, ಕನ್ನಡ ಎರಡೂ ನೇಟಿವಿಟಿಗೆ ಹೊಂದುವಂತೆ ಇದ್ದು ಚಿತ್ರದ ಟೈಟಲ್ ಮಾತ್ರ ಏನೋ ಇದೆ ಅನ್ನೋ ಕ್ಯೂರಿಯಾಸಿಟಿ ಕ್ರೀಯೇಟ್ ಮಾಡ್ತಿದೆ. ಪ್ರೇಮ್ ಹೇಳಿಕೇಳಿ ಮಾಸ್ ಚಿತ್ರಗಳ ಮಹಾರಾಜ. ಈ ಬಾರಿಯೂ ಅವರಿಂದ ಅದೇ ರೀತಿಯ ಚಿತ್ರದ ನಿರೀಕ್ಷೆಯಲ್ಲಿದ್ದಾರೆ ಪ್ರೇಕ್ಷಕರು.

English summary
Director Prem back with new film 'Bham Bham Bolenath'. The movie title will be launched by Power Star Puneeth Rajkumar. Music Maestro Ilaiyaraaja to compose music to the movie.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada