For Quick Alerts
  ALLOW NOTIFICATIONS  
  For Daily Alerts

  ಇದೇ ತಿಂಗಳು ಅದ್ದೂರಿಯಾಗಿ ಲಾಂಚ್ ಆಗ್ತಿದೆ ಪ್ರೇಮ್ಸ್ ಹೊಸ ಸಿನಿಮಾ!

  |
  ದಿ ವಿಲನ್ ನಂತರ ಹೊಸ ಸಿನಿಮಾ ಲಾಂಚ್ ಮಾಡಲಿದ್ದಾರೆ ನಿರ್ದೇಶಕ ಪ್ರೇಮ್ | FILMIBEAT KANNADA

  'ದಿ ವಿಲನ್' ಸಿನಿಮಾದ ನಂತರ ಪ್ರೇಮ್ ಏನ್ ಮಾಡುತ್ತಿದ್ದಾರೆ ಎನ್ನುವ ಕುತೂಹಲ ಅವರ ಅಭಿಮಾನಿಗಳಲ್ಲಿ ಇರಬಹುದು. ಇದೀಗ ಪ್ರೇಮ್ ತಮ್ಮ ಹೊಸ ಸಿನಿಮಾದ ಮೂಲಕ ಬರಲು ಸಿದ್ಧತೆ ನಡೆಸಿದ್ದಾರೆ

  ಪ್ರೇಮ್ ಸಿನಿಮಾ ಮಾಡುವ ಮುಂಚೆ ಅದರ ಬಗ್ಗೆ ಆಗಾಗ ಮಾತನಾಡುತ್ತಾರೆ. 'ದಿ ವಿಲನ್' ನಂತರ ಆರು ಜನ ಹೀರೋಗಳ ಸಿನಿಮಾ ಮಾಡುವುದಾಗಿ ಪ್ರೇಮ್ ಹೇಳಿದ್ದರು. ಅದೇ 'ಕಲಿ' ಸಿನಿಮಾ ಎಂದು ತಿಳಿಸಿದ್ದರು.

  ರಕ್ಷಿತಾ ಪ್ರೇಮ್ ಸಹೋದರ ಚಿತ್ರರಂಗಕ್ಕೆ ಎಂಟ್ರಿ!

  ಆರು ಜನ ಹೀರೋಗಳ ಸಿನಿಮಾ ಯಾವಾಗ ಬರುತ್ತದೆ ಎಂದು ಕಾಯುತ್ತಿದ್ದ ಅಭಿಮಾನಿಗಳ ಮುಂದೆ ಪ್ರೇಮ್ ಮತ್ತೊಂದು ಹೊಸ ಸಿನಿಮಾ ಮೂಲಕ ಬಂದಿದ್ದಾರೆ. ತಮ್ಮ ಈ ಸಿನಿಮಾದ ಮೂಲಕ ಹೊಸ ನಟನನ್ನು ಲಾಂಚ್ ಮಾಡುತ್ತಿದ್ದಾರೆ. ಮುಂದೆ ಓದಿ...

  ಮಾರ್ಚ್ 31ಕ್ಕೆ ಹೊಸ ಸಿನಿಮಾ

  ಮಾರ್ಚ್ 31ಕ್ಕೆ ಹೊಸ ಸಿನಿಮಾ

  ಪ್ರೇಮ್ ತಮ್ಮ ಮುಂದಿನ ಸಿನಿಮಾವನ್ನು ಮಾರ್ಚ್ 31ಕ್ಕೆ ಲಾಂಚ್ ಮಾಡುತ್ತಿದ್ದಾರೆ. ಪ್ರೀತಿಯ ಪತ್ನಿ ರಕ್ಷಿತಾ ಅವರ ಸಹೋದರ ಅಭಿಷೇಕ್ ರನ್ನು ಪ್ರೇಮ್ ಚಿತ್ರರಂಗಕ್ಕೆ ಪರಿಚಯ ಮಾಡುತ್ತಿದ್ದಾರೆ. ವಿಶೇಷ ಅಂದರೆ, ಅಂದು ರಕ್ಷಿತಾ ಅವರ ಹುಟ್ಟುಹಬ್ಬ ಕೂಡ ಇದೆ.

  ಅಂದೇ ಚಿತ್ರೀಕರಣ ಪ್ರಾರಂಭ

  ಅಂದೇ ಚಿತ್ರೀಕರಣ ಪ್ರಾರಂಭ

  ರಕ್ಷಿತಾ ಹುಟ್ಟುಹಬ್ಬದ ವಿಶೇಷವಾಗಿ ಈ ಹೊಸ ಸಿನಿಮಾ ಶುರು ಆಗುತ್ತಿದೆ. ಅಂದೇ ತಮ್ಮ ಹೊಸ ಸಿನಿಮಾದ ಚಿತ್ರೀಕರಣವನ್ನು ಪ್ರೇಮ್ ಪ್ರಾರಂಭ ಮಾಡಲಿದ್ದಾರೆ. ಸಿನಿಮಾ ಟೈಟಲ್ ಹಾಗೂ ಮೋಷನ್ ಪೋಸ್ಟರ್ ಸಹ ಅದೇ ದಿನ ಹೊರ ಬರಲಿದೆ. ಈ ಚಿತ್ರವನ್ನು ರಕ್ಷಿತಾ ಅವರೇ ನಿರ್ಮಾಣ ಮಾಡುತ್ತಿದ್ದಾರೆ.

  ಬ್ರೇಕಿಂಗ್: 'ಜೋಗಿ' ಪ್ರೇಮ್ ನಿರ್ದೇಶನದಲ್ಲಿ ಸುಧಾರಾಣಿ ಪುತ್ರಿ ಬೆಳ್ಳಿತೆರೆಗೆ.!

  'ಎಕ್ಸ್ ಕ್ಯೂಸ್ ಮಿ' ಹೆಸರಿನಲ್ಲಿ ಹೊಸ ಚಿತ್ರ?

  ಪ್ರೇಮ್ ತಮ್ಮ ಹೊಸ ಸಿನಿಮಾಗೆ 'ಎಕ್ಸ್ ಕ್ಯೂಸ್ ಮಿ' ಎಂದು ಹೆಸರಿಡುತ್ತಾರೆ ಎನ್ನುವ ಸುದ್ದಿ ಇತ್ತು. ಆದರೆ, ಈ ಬಗ್ಗೆ ಸದ್ಯಕ್ಕೆ ಪ್ರೇಮ್ ಪ್ರತಿಕ್ರಿಯೆ ನೀಡಿಲ್ಲ. 2013ರಲ್ಲಿ ಬಿಡುಗಡೆಯಾಗಿದ್ದ ಎಕ್ಸ್ ಕ್ಯೂಸ್ ಮಿ' ಟೈಟಲ್ ಮತ್ತೆ ಈ ಸಿನಿಮಾ ಬರುವ ಸಾಧ್ಯತೆ ಹೆಚ್ಚಿದೆ.

  ಚಿತ್ರರಂಗಕ್ಕೆ ಸುಧಾರಾಣಿ ಮಗಳು?

  ಚಿತ್ರರಂಗಕ್ಕೆ ಸುಧಾರಾಣಿ ಮಗಳು?

  ನಟಿ ಸುಧಾರಾಣಿ ಪುತ್ರಿ ನಿಧಿ ಈ ಸಿನಿಮಾದ ನಾಯಕಿ ಎನ್ನುವ ಸುದ್ದಿ ಸಹ ಇದೆ. ಆದರೆ, ಈ ಬಗ್ಗೆ ಸದ್ಯಕ್ಕೆ ಉತ್ತರ ಸಿಕ್ಕಿಲ್ಲ. ಚಿತ್ರ ಲಾಂಚ್ ಆಗುವ ದಿನವೇ ಸಿನಿಮಾದ ನಾಯಕಿ ಯಾರು ಎನ್ನುವುದು ತಿಳಿಯಲಿದೆ. ಅಂದಹಾಗೆ, ಹಾಗೆನಾದರೂ ನಿಧಿ ಈ ಸಿನಿಮಾ ಮಾಡಿದರೆ, ಇದು ಅವರ ಮೊದಲ ಸಿನಿಮಾ ಆಗಲಿದೆ.

  'ದಿ ವಿಲನ್'ನಲ್ಲಿ ಅಭಿಷೇಕ್

  'ದಿ ವಿಲನ್'ನಲ್ಲಿ ಅಭಿಷೇಕ್

  ರಕ್ಷಿತಾ ಸಹೋದರ ಅಭಿಷೇಕ್ ನಟನೆಗೆ ಬೇಕಾದ ಎಲ್ಲ ತಯಾರಿಗಳ ನಂತರ ಚಿತ್ರರಂಗಕ್ಕೆ ಬರಲು ಸಿದ್ದರಾಗಿದ್ದಾರೆ. ಈ ಹಿಂದೆ 'ದಿ ವಿಲನ್' ಸಿನಿಮಾದ ಹಾಡಿನಲ್ಲಿ ಹೀಗೆ ಬಂದು ಹಾಗೆ ಹೋಗಿದ್ದರು. ಇನ್ನೊಂದು ಕಡೆ ಬಹಳ ವರ್ಷಗಳ ಬಳಿಕ ಹೊಸ ತಾರಬಳಗದ ಜೊತೆಗೆ ಪ್ರೇಮ್ ಸಿನಿಮಾ ಮಾಡುತ್ತಿದ್ದಾರೆ.

  English summary
  Kannada director Prem new movie will be launching on march 31st. Rakshitha brother abishek will made his debut from this movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X