Don't Miss!
- Lifestyle
Horoscope Today 5 Feb 2023: ಭಾನುವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Sports
ಈ ಭಾರತೀಯ ತಾನು ಎದುರಿಸಿದ 'ಅತ್ಯಂತ ಅಪಾಯಕಾರಿ ಬೌಲರ್' ಎಂದ ಜೋಸ್ ಬಟ್ಲರ್
- News
ಗುಜರಾತ್ಗೆ ಬರಲಿದ್ದಾರೆ ಯುಎಸ್ ಮಾಜಿ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್
- Finance
ಅದಾನಿ ಸ್ಟಾಕ್ ಕುಸಿತ: 'ನಿಯಂತ್ರಕರು ಅವರ ಕೆಲಸ ಮಾಡುತ್ತಾರೆ', ಎಂದ ವಿತ್ತ ಸಚಿವೆ
- Automobiles
ಬೆಲೆ ಏರಿಕೆ ಪಡೆದುಕೊಂಡ ಬಹುಬೇಡಿಕೆಯ ಟೊಯೊಟಾ ಹೈರೈಡರ್ ಎಸ್ಯುವಿ
- Technology
ಅಜ್ಜಿಗೆ ಆಪ್ಗಳ ಬಗ್ಗೆ ತಿಳಿಸಿಕೊಟ್ಟ ಯುವಕ; ವೈರಲ್ ಆಯ್ತು ವಿಡಿಯೋ!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಕೆಎಫ್ ಸಿಸಿ 'ಅಡ್ಡ'ದಲ್ಲಿ ಪ್ರೇಮ್ ಪಟಾಲಂ ಧರಣಿ
"ನಾನು ಪ್ರೇಮ್ ಅನ್ನೋದನ್ನು ಚಿಕ್ಕದಾಗಿಯೇ ಮುದ್ರಿಸುತ್ತೇನೆ. ಅಡ್ಡ ಅನ್ನೋದನ್ನೇ ದೊಡ್ಡದಾಗಿ ಹಾಕುತ್ತೇನೆ. ಅವರು (ಕೆಎಫ್ ಸಿಸಿ) ಏನು ಅದೇನ್ ಮಾಡ್ತಾರೋ ನೋಡ್ತೀನಿ... ನಮ್ಮ ಸಿನಿಮಾಗೆ ಯಾವ ಹೆಸ್ರು ಇಡ್ಬೇಕು ಅನ್ನೋದು ನಮ್ಮ ಹಕ್ಕು. ಅದನ್ನು ಬೇರೆ ಯಾರೂ ನಿರ್ಧರಿಸಬೇಕಾಗಿಲ್ಲ. ನಮ್ಗೆ ನಷ್ಟ ಆದ್ರೆ ಅದನ್ನು ಕೆಎಫ್ ಸಿಸಿಯವರು ಕೊಡ್ತಾರಾ" ಎಂದು ಈ ಕೆಂಡಾಮಂಡಲವಾಗಿದ್ದರು ಪ್ರೇಮ್.
ಮಹೇಶ್ ಬಾಬು ನಿರ್ದೇಶನದ 'ಪ್ರೇಮ್ ಅಡ್ಡ' ಚಿತ್ರವು ತಮಿಳಿನ 'ಸುಬ್ರಮಣ್ಯಪುರಂ' ರಿಮೇಕ್. ಇಲ್ಲಿ ಪ್ರೇಮ್ ಅವರಿಗೆ ಕೃತಿ ಕರಬಂದ ನಾಯಕಿ. ಒಟ್ಟಿನಲ್ಲಿ ಈ ಚಿತ್ರಕ್ಕೆ ಆರಂಭದಿಂದಲೂ ಏನಾದರೊಂದು ವಿಘ್ನಗಳು, ಪ್ರಚಾರ-ಅಪಪ್ರಚಾರಗಳು ಹಾಗೂ ವಾದ-ವಿವಾದಗಳು ಅಂಟಿಕೊಂಡೇ ಬಂದಿವೆ. ಮುಂದೇನಾಗುತ್ತೋ ಎಂಬುದೀಗ ತೀವ್ರ ಕುತೂಹಲ ಕೆರಳಿಸಿರುವ ಸಂಗತಿಯಾಗಿದೆ.
ನಮಗೆ ನ್ಯಾಯ ಸಿಗುವವರೆಗೆ ನಾವು ಇಲ್ಲಿಂದ ಕದಲುವುದಿಲ್ಲ. ನಿರ್ದೇಶಕನ ಸ್ವಾತಂತ್ರ್ಯ ಹಾಗೂ ಕ್ರಿಯೆಟಿವಿಟಿಗೆ ಧಕ್ಕೆ ತರುವ ಯಾವುದೇ ಪ್ರಯತ್ನಕ್ಕೆ ನಾವು ತಲೆಬಾಗುವುದಿಲ್ಲ. ಏನೇ ಆಗಲಿ ನಾವು ನಮ್ಮ ಪಟ್ಟು ಸಡಿಲಿಸುವುದಿಲ್ಲ ಎಂಬ ಮಾತನ್ನು ಚಿತ್ರತಂಡ ಈಗಲೂ ಹೇಳುತ್ತಿದೆ. ಒಟ್ಟಾರೆ ಈಗ ತಲೆದೋರಿರುವ ಬಿಕ್ಕಟ್ಟು ಪರಿಹರಿಸಲು ನಾಳೆ (15 ಆಗಸ್ಟ್ 2012) ಚಲನಚಿತ್ರ ನಿರ್ಮಾಪಕರ ಸಂಘದಲ್ಲಿ ಸಭೆ ಕರೆಯಲಾಗಿದೆ.
ನಾಳೆ ಬೆಳಿಗ್ಗೆ ಕೆಎಫ್ ಪಿಎ ನಲ್ಲಿ ನಡೆಯುವ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳಲು ಇಂದು ನಿರ್ಧರಿಸಲಾಗಿದೆ. ನಿರ್ಮಾಪಕ ಸಂಘದ ಅಧ್ಯಕ್ಷ ಮುನಿರತ್ನ, ಕೆಎಫ್ ಸಿಸಿ ಅಧ್ಯಕ್ಕ ಸಾರಾ ಗೋವಿಂದು, ಪ್ರೇಮ್ ಅಡ್ಡ ಚಿತ್ರದ ನಟ ಪ್ರೇಮ್, ನಿರ್ಮಾಪಕ ಮೇಕಾ ಮುರಳಿಕೃಷ್ಣ, ನಿರ್ದೇಶಕ ಮಹೇಶ್ ಬಾಬು ಹಾಗೂ ಇತರರು ನಾಳೆ ಈ ಬಗ್ಗೆ ನಡೆಯುವ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಸಭೆ ಮುಗಿದ ನಂತರ ಬರಲಿರುವ ಅಂತಿಮ ತೀರ್ಮಾನಕ್ಕಾಗಿ ಎಲ್ಲರೂ ಕುತೂಹಲದಿಂದ ಕಾಯುವಂತಾಗಿದೆ. (ಏಜೆನ್ಸೀಸ್)