For Quick Alerts
  ALLOW NOTIFICATIONS  
  For Daily Alerts

  ಪ್ರೇಮ್ ಮುಂದಿನ ಚಿತ್ರ: ಈ ಮೂವರಲ್ಲಿ ಒಬ್ಬರು ಹೀರೋ ಅಂತೆ!

  |

  'ಜೋಗಿ' ಪ್ರೇಮ್ ಹೊಸ ಸಿನಿಮಾಗೆ ತಯಾರಿ ನಡೆಸಿದ್ದಾರೆ. ಇತ್ತೀಚಿಗಷ್ಟೆ ಹೊಸ ಪ್ರಾಜೆಕ್ಟ್‌ನ ಸ್ಕ್ರಿಪ್ಟ್ ಪೂಜೆ ಮುಗಿಸಿ ಕುತೂಹಲ ಹೆಚ್ಚಿಸಿದ್ದಾರೆ. ಇದು ಪ್ರೇಮ್ ನಿರ್ದೇಶನ ಮಾಡಲಿರುವ 9ನೇ ಚಿತ್ರವಾಗಿದ್ದು, ಔಟ್ ಅಂಡ್ ಔಟ್ ಆಕ್ಷನ್ ಕಥೆ ಹೊಂದಿದೆ ಎಂಬ ಸುಳಿವು ಸಿಕ್ಕಿದೆ. ಹೊಸ ಸಿನಿಮಾದ ಸ್ಕ್ರಿಪ್ಟ್ ಕೆಲಸ ಸಂಪೂರ್ಣವಾಗಿ ಮುಗಿದಿದೆ ಎಂದು ಸ್ವತಃ ಪ್ರೇಮ್ ಮಾಹಿತಿ ನೀಡಿದ್ದು, ಇದೇ ತಿಂಗಳಲ್ಲಿ ಮುಂದಿನ ಅಪ್‌ಡೇಟ್ಸ್ ಕೊಡ್ತೇನೆ ಎಂದು ಟ್ವೀಟ್ ಮಾಡಿದ್ದರು.

  ಯಾರು ಪ್ರೇಮ್ ಮುಂದಿನ ಸಿನಿಮಾ ಹೀರೊ..?

  ಪ್ರೇಮ್ ಅವರ ಮುಂದಿನ ಸಿನಿಮಾದಲ್ಲಿ ಹೀರೋ ಯಾರಾಗಬಹುದು ಎಂಬ ಚರ್ಚೆ ಬಹಳ ಜೋರಾಗಿ ನಡೆಯುತ್ತಿದೆ. ಸಹಜವಾಗಿ ಪ್ರೇಮ್ ಸಿನಿಮಾಗಳು ಅಂದ್ರೆನೇ ಹಾಗೆ. ಆರಂಭದಿಂದಲೇ ಭಾರಿ ಹೈಪ್ ಕ್ರಿಯೆಟ್ ಮಾಡುತ್ತದೆ. ಅದು ಪ್ರೇಮ್ ಅವರ ಪ್ರಮೋಷನ್ ಕಲೆಯೂ ಹೌದು. ಈ ಬಾರಿ ಪ್ರೇಮ್ ಕನ್ನಡ ಚಿತ್ರರಂಗದ ದೊಡ್ಡ ಸ್ಟಾರ್ ನಟನೊಂದಿಗೆ ಕೆಲಸ ಮಾಡಲಿದ್ದಾರೆ ಎಂದು ಹೇಳಲಾಗಿದೆ. ಆ ದೊಡ್ಡ ಸ್ಟಾರ್ ಯಾರು ಎನ್ನುವುದು ಸದ್ಯದ ಕುತೂಹಲ.

  ಯುದ್ಧ ಶುರು: ಹೊಸ ಸಿನಿಮಾಕ್ಕೆ ತಯಾರಾದ ಪ್ರೇಮ್ಯುದ್ಧ ಶುರು: ಹೊಸ ಸಿನಿಮಾಕ್ಕೆ ತಯಾರಾದ ಪ್ರೇಮ್

  ಈಗಾಗಲೇ ಶಿವರಾಜ್ ಕುಮಾರ್ ಮತ್ತು ಸುದೀಪ್ ಜೊತೆ 'ದಿ ವಿಲನ್' ಸಿನಿಮಾ ಮಾಡಿ ದಾಖಲೆ ಬರೆದಿದ್ದರು. ಈಗ ಮತ್ತೊಮ್ಮೆ ಅಂತಹದ್ದೇ ಸಾಹಸಕ್ಕೆ ಕೈ ಹಾಕ್ತಾರಾ ಎಂಬ ಕಾತುರ ಹೆಚ್ಚಾಗಿದೆ. ಇನ್ನು ಆರು ಜನ ಹೀರೋಗಳನ್ನು ಹಾಕ್ಕೊಂಡು ಸಿನಿಮಾ ಮಾಡ್ತೀನಿ ಎಂದು ಹೇಳಿದ್ದರು. ಆ ಚಿತ್ರಕ್ಕೇನಾದರೂ ಚಾಲನೆ ಕೊಡ್ತಾರಾ ಎನ್ನುವ ಚರ್ಚೆಯೂ ಕೇಳಿ ಬರುತ್ತಿದೆ. ಮುಂದೆ ಓದಿ...

  ಮುಂಚೂಣಿಯಲ್ಲಿ ಮೂವರ ಹೆಸರು

  ಮುಂಚೂಣಿಯಲ್ಲಿ ಮೂವರ ಹೆಸರು

  ಪ್ರೇಮ್ 9ನೇ ಸಿನಿಮಾ ಘೋಷಣೆಯಾಗುತ್ತಿದ್ದಂತೆ ಮೂವರು ಸ್ಟಾರ್ ನಟರ ಹೆಸರು ಸಾಮಾನ್ಯವಾಗಿ ಚರ್ಚೆಗೆ ಬಂದಿದೆ. ಈ ಮೂವರು ಹೆಸರಲ್ಲಿ ಇಬ್ಬರು ಹೆಸರು ಯಾವುದೇ ಸರ್ಪ್ರೈಸ್ ಇಲ್ಲ. ಆದರೆ, ಒಬ್ಬ ನಟನ ಹೆಸರು ಹೆಚ್ಚು ಸದ್ದು ಮಾಡ್ತಿದೆ. ಬಹುಶಃ ಈ ಕಾಂಬಿನೇಷನ್ ಒಂದಾದರೆ ಸ್ಯಾಂಡಲ್‌ವುಡ್ ಪ್ರೇಕ್ಷಕರಿಗೆ ದೊಡ್ಡ ಹಬ್ಬವೇ ಎನ್ನಲಾಗಿದೆ.

  ಸುದೀಪ್ ಜೊತೆ ಮುಂದಿನ ಸಿನಿಮಾ

  ಸುದೀಪ್ ಜೊತೆ ಮುಂದಿನ ಸಿನಿಮಾ

  ಕಳೆದ ಫೆಬ್ರವರಿ ತಿಂಗಳಲ್ಲಿ ಟ್ವೀಟ್ ಮಾಡಿದ್ದ ಪ್ರೇಮ್, ಸುದೀಪ್ ಜೊತೆ ಇನ್ನೊಂದು ಚಿತ್ರ ಮಾಡ್ತೇನೆ ಎಂದು ಹೇಳಿದ್ದರು. ''ನನ್ನ ಮತ್ತು ಸುದೀಪ್ ಅವರ ಕಾಂಬಿನೇಷನ್ ಅಲ್ಲಿ ಬರುತ್ತಿರುವ #NewAvatarSoon ಚಿತ್ರದ ಬಗ್ಗೆ ಒಂದು ಮುಖ್ಯವಾದ ಸುದ್ದಿ ಕೆಲವೇ ದಿನಗಳಲ್ಲಿ ತಿಳಿಸುತ್ತೇನೆ. ಇಂಡಿಯಾದಲ್ಲೆ ಮಾಡದ ಸಿನಿಮಾವನ್ನು ನಾನು ಮಾಡಲು ಹೊರಟಿದ್ದೇನೆ, ದಯವಿಟ್ಟು ನಿಮ್ಮ ಪ್ರೀತಿ ನಮ್ಮ ಮೇಲೆ ಸದಾ ಇರಲಿ' ಎಂದಿದ್ದರು. ಹಾಗಾಗಿ, ಈಗ ಸಜ್ಜಾಗಿರುವ ಸ್ಕ್ರಿಪ್ಟ್ ಸುದೀಪ್ ಅವರಿಗಾಗಿಯೇ ಎಂಬ ಧ್ವನಿ ಜೋರಾಗಿದೆ.

  ಇಂಡಿಯಾದಲ್ಲೇ ಮಾಡಿರದ ಸಿನಿಮಾ ಮಾಡುತ್ತೇನೆ; ಗೊಂದಲ ಸೃಷ್ಟಿಸಿದ ಸುದೀಪ್ ಜೊತೆಗೆ ಪ್ರೇಮ್ ಸಿನಿಮಾ ಟ್ವೀಟ್ಇಂಡಿಯಾದಲ್ಲೇ ಮಾಡಿರದ ಸಿನಿಮಾ ಮಾಡುತ್ತೇನೆ; ಗೊಂದಲ ಸೃಷ್ಟಿಸಿದ ಸುದೀಪ್ ಜೊತೆಗೆ ಪ್ರೇಮ್ ಸಿನಿಮಾ ಟ್ವೀಟ್

  ದರ್ಶನ್ ಜೊತೆ ಇರಬಹುದೇ?

  ದರ್ಶನ್ ಜೊತೆ ಇರಬಹುದೇ?

  ದರ್ಶನ್ ಜೊತೆ ಸಿನಿಮಾ ಮಾಡಬೇಕು ಎನ್ನುವುದು ಬಹಳ ವರ್ಷಗಳ ಕಮಿಟ್‌ಮೆಂಟ್. ಆದರೆ, ಉಮಾಪತಿ ವಿಚಾರದಲ್ಲಿ ನಡೆದ ಇತ್ತೀಚಿಗಿನ ಘಟನೆ ದರ್ಶನ್-ಪ್ರೇಮ್ ನಡುವಿನ ಸಿನಿಮಾ ಸಂಬಂಧಕ್ಕೆ ಬ್ರೇಕ್ ಹಾಕಿದೆ ಎಂದು ಹೇಳಲಾಗಿದೆ. ವೈಯಕ್ತಿಕವಾಗಿ ಸಂಬಂಧ ಚೆನ್ನಾಗಿದ್ದರೂ ಸಿನಿಮಾ ಮಾಡುವ ಕಮಿಟ್‌ಮೆಂಟ್ ಕಷ್ಟವಾಗಿದೆ. ಆದರೂ ಈ ಸಂದರ್ಭದಲ್ಲಿ ಅಚ್ಚರಿ ಎನ್ನುವಂತೆ ದರ್ಶನ್ ಜೊತೆ ಸಿನಿಮಾ ಎಂದು ಪ್ರೇಮ್ ಘೋಷಣೆ ಮಾಡಬಹುದಾ ಎಂಬ ಚರ್ಚೆಯೂ ಕೇಳಿ ಬರ್ತಿದೆ.

  ಧ್ರುವ ಸರ್ಜಾ ಹೆಸರು ಸರ್ಪ್ರೈಸ್

  ಧ್ರುವ ಸರ್ಜಾ ಹೆಸರು ಸರ್ಪ್ರೈಸ್

  ಸುದೀಪ್, ದರ್ಶನ್ ಅವರನ್ನು ಬಿಟ್ಟರೆ ಈಗ ಪ್ರೇಮ್ ಕಣ್ಣು ಧ್ರುವ ಸರ್ಜಾ ಮೇಲಿದೆ ಎಂಬ ಸುದ್ದಿ ಸಂಚಲನ ಸೃಷ್ಟಿಸಿದೆ. ಆಕ್ಷನ್ ಪ್ರಿನ್ಸ್ ಜೊತೆ ಔಟ್ ಅಂಡ್ ಔಟ್ ಆಕ್ಷನ್ ಸಿನಿಮಾ ಮಾಡಲು ಪ್ರೇಮ್ ಸಿದ್ದತೆ ನಡೆಸಿದ್ದಾರೆ. ಪ್ರೇಮ್ 9ನೇ ಸಿನಿಮಾ ಇದೇ ಆಗಿರಲಿದೆಯಂತೆ. ಒಂದು ವೇಳೆ ಈ ಸುದ್ದಿಯೇ ನಿಜವಾದರೇ ಕನ್ನಡ ಪ್ರೇಕ್ಷಕರಿಗೆ ಫುಲ್ ಮನರಂಜನೆ.

  24ನೇ ತಾರೀಖು ಅಧಿಕೃತ ಮಾಹಿತಿ

  24ನೇ ತಾರೀಖು ಅಧಿಕೃತ ಮಾಹಿತಿ

  ಆಗಸ್ಟ್ ತಿಂಗಳಲ್ಲಿ ಹೊಸ ಸಿನಿಮಾದ ಬಗ್ಗೆ ಅಪ್‌ಡೇಟ್ ಕೊಡ್ತೇನೆ ಎಂದು ಪ್ರೇಮ್ ಟ್ವೀಟ್ ಮಾಡಿದ್ದರು. ಅದರಂತೆ ಆಗಸ್ಟ್ 24 ರಂದು ಈ ಚಿತ್ರಕ್ಕೆ ಸಂಬಂಧಿಸಿದಂತೆ ಹೆಚ್ಚಿನ ವಿವರಗಳಲ್ಲಿ ಅಧಿಕೃತವಾಗಿ ಹೇಳಲಿದ್ದಾರೆ. ಧ್ರುವ ಸರ್ಜಾ, ದರ್ಶನ್, ಸುದೀಪ್ ಯಾರೇ ಆದರೂ ಈ ವರ್ಷದ ಅಂತ್ಯದಲ್ಲೀ ಈ ಸಿನಿಮಾ ಚಿತ್ರೀಕರಣ ಆರಂಭಿಸಲಿದೆ ಎಂಬ ಮಾತಿದೆ.

  'ಏಕ್ ಲವ್ ಯಾ' ಬಿಡುಗಡೆಗೆ ಸಜ್ಜು

  'ಏಕ್ ಲವ್ ಯಾ' ಬಿಡುಗಡೆಗೆ ಸಜ್ಜು

  ದಿ ವಿಲನ್ ನಂತರ ಪ್ರೇಮ್ ನಿರ್ದೇಶಿಸಿರುವ ಚಿತ್ರ ಏಕ್ ಲವ್ ಯಾ. ರಕ್ಷಿತಾ ಅವರ ಸಹೋದರ ರಾಣ ಚೊಚ್ಚಲ ಬಾರಿಗೆ ನಾಯಕನಾಗಿ ನಟಿಸಿರುವ ಸಿನಿಮಾ. ರಚಿತಾ ರಾಮ್ ಮತ್ತು ರೀಶ್ಮಾ ಇಬ್ಬರು ನಾಯಕಿಯರು. ಸ್ವತಃ ರಕ್ಷಿತಾ ನಿರ್ಮಾಣ ಮಾಡಿದ್ದಾರೆ. ಸಿನಿಮಾಕ್ಕೆ ಅರ್ಜುನ್ ಜನ್ಯ ಸಂಗೀತ ನೀಡಿದ್ದು, ರಿಲೀಸ್ ಆಗಿರುವ ಹಾಡುಗಳು ಹಿಟ್ ಆಗಿದೆ.

  English summary
  Kannada Director Prem's 9th Project details revealing on 24 August 2021.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X