For Quick Alerts
  ALLOW NOTIFICATIONS  
  For Daily Alerts

  ಓ ಓ ಓ ಪ್ರೇಮ ಕಾಶ್ಮೀರ...ಎನ್ನುತ್ತಿದ್ದಾರೆ ನಿರ್ದೇಶಕ ಪ್ರೇಮ್

  |

  'ದಿ ವಿಲನ್' ಸಿನಿಮಾ ನಂತರ ರಕ್ಷಿತಾ ಅವರ ಸಹೋದರ ರಾಣಾ ಅವರನ್ನು ಚಿತ್ರರಂಗಕ್ಕೆ ಪರಿಚಯ ಮಾಡ್ತಿರುವ ನಿರ್ದೇಶಕ ಪ್ರೇಮ್ ಔಟ್ ಅಂಡ್ ಔಟ್ ಲವ್ ಸ್ಟೋರಿ ಸಿನಿಮಾ ಮಾಡ್ತಿದ್ದಾರೆ. 'ಎಕ್ಸ್ ಕ್ಯೂಸ್ ಮಿ' ಚಿತ್ರದ ನಂತರ ಕಂಪ್ಲೀಟ್ ಲವ್ ಕಾನ್ಸೆಪ್ಟ್‌ ಮೇಲೆ ಕೆಲಸ ಮಾಡ್ತಿದ್ದಾರೆ ಪ್ರೇಮ್ಸ್.

  'ಏಕ್ ಲವ್ ಯಾ' ಸಿನಿಮಾದ ಮೇಕಿಂಗ್ ಮೂಲಕ ಈಗಾಗಲೇ ಸದ್ದು ಮಾಡುತ್ತಿರುವ ಪ್ರೇಮ್ ಲಾಕ್‌ಡೌನ್ ಬಳಿಕ ಶೂಟಿಂಗ್ ವೇಗ ಹೆಚ್ಚಿಸಿದ್ದಾರೆ. ಕಳೆದ ತಿಂಗಳು ಊಟಿಯಲ್ಲಿ ಶೂಟಿಂಗ್ ಮುಗಿಸಿದ ಪ್ರೇಮ್ ಈಗ ರೊಮ್ಯಾಂಟಿಕ್ ಲೋಕೇಶನ್‌ಗಾಗಿ ದೇಶಾದ್ಯಂತ ಸಂಚರಿಸುತ್ತಿದ್ದಾರೆ. ಪ್ರಸ್ತುತ, ಕಾಶ್ಮೀರದಲ್ಲಿ ಪ್ರೇಮ್ ಸುತ್ತಾಟ ಮಾಡುತ್ತಿದ್ದಾರೆ. ಮುಂದೆ ಓದಿ...

  ಪ್ರೇಮ ಕಾಶ್ಮೀರ ಎನ್ನುತ್ತಿದ್ದಾರೆ ಪ್ರೇಮ್

  ಪ್ರೇಮ ಕಾಶ್ಮೀರ ಎನ್ನುತ್ತಿದ್ದಾರೆ ಪ್ರೇಮ್

  'ಏಕ್ ಲವ್ ಯಾ' ಚಿತ್ರೀಕರಣಕ್ಕಾಗಿ ಲೋಕೇಶನ್ ಹುಡುಕಾಟದಲ್ಲಿರುವ ನಿರ್ದೇಶಕ ಪ್ರೇಮ್, ಪ್ರಸ್ತುತ ಕಾಶ್ಮೀರದಲ್ಲಿದ್ದಾರೆ. ಕಾಶ್ಮೀರದಲ್ಲಿರುವ ಫೋಟೋಗಳನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿರುವ ಪ್ರೇಮ್ ಸಂತಸ ವ್ಯಕ್ತಪಡಿಸಿದ್ದಾರೆ.

  ಗುಜರಾತ್, ರಾಜಸ್ಥಾನ, ಕಾಶ್ಮೀರದಲ್ಲಿ ನಿರ್ದೇಶಕ ಪ್ರೇಮ್ ಅಲೆದಾಟ

  ಕಾರ್ಗಿಲ್ ರಸ್ತೆಯಲ್ಲಿ ಪ್ರೇಮ್

  ಕಾರ್ಗಿಲ್ ರಸ್ತೆಯಲ್ಲಿ ಪ್ರೇಮ್

  ಕಾಶ್ಮೀರದ ಅದ್ಭುತ ಲೋಕೇಶನ್‌ಗಳಲ್ಲಿ ಸುತ್ತಾಟ ಮಾಡುತ್ತಿರುವ ಪ್ರೇಮ್, ಕಾರ್ಗಿಲ್ ರಸ್ತೆಯಲ್ಲಿ ಫೋಟೋಗಳನ್ನು ಕ್ಲಿಕ್ಕಿಸಿಕೊಂಡಿದ್ದಾರೆ. ಪ್ರೇಮ್ ಅವರ ಶೂಟಿಂಗ್ ಪ್ಲಾನ್ ನೋಡುತ್ತಿದ್ದರೆ, ಏಕ್ ಲವ್ ಯಾ ಸಿನಿಮಾದಲ್ಲಿ ಭರ್ಜರಿ ದೃಶ್ಯವೈಭವ ದರ್ಶನವಾಗಬಹುದು.

  ಗುಜರಾತ್, ರಾಜಸ್ಥಾನದಲ್ಲಿ ಹುಡುಕಾಟ

  ಗುಜರಾತ್, ರಾಜಸ್ಥಾನದಲ್ಲಿ ಹುಡುಕಾಟ

  ಜಮ್ಮು ಕಾಶ್ಮೀರ ಮಾತ್ರವಲ್ಲದೆ, ಗುಜರಾತ್, ರಾಜಸ್ಥಾನಗಳಲ್ಲಿಯೂ ಲೋಕೇಶನ್ ಹುಡುಕಿದ್ದಾರೆ ಪ್ರೇಮ್. ಲೇಹ್, ಲಡಾಕ್‌ಗಳಲ್ಲಿಯೂ ಸುತ್ತು ಹೊಡೆದಿದ್ದಾರೆ. ಇತ್ತೀಚಿಗಷ್ಟೆ ವಿಮಾನ ನಿಲ್ದಾಣದಲ್ಲಿ ಕುಳಿತಿರುವ ಚಿತ್ರವನ್ನು ಪ್ರೇಮ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.

  ಪ್ರೇಮ್ ಅನ್ನು ದೊಡ್ಡ ನಿರ್ದೇಶಕರಿಗೆ ಹೋಲಿಸಿದ್ದ ವಿಷ್ಣುವರ್ಧನ್

  ಹೊಸ ಚಿತ್ರ ಘೋಷಿಸಿ ಮಾಧ್ಯಮಗಳಿಗೆ ಖಡಕ್ ಸಂದೇಶ ಕೊಟ್ಟ ಧ್ರುವ ಸರ್ಜಾ | Dhruva Sarja | Dubari | Nanda Kishore
  ರಾಣಾ ಚೊಚ್ಚಲ ಸಿನಿಮಾ

  ರಾಣಾ ಚೊಚ್ಚಲ ಸಿನಿಮಾ

  ಪ್ರೇಮ್ ನಿರ್ದೇಶಿಸುತ್ತಿರುವ 'ಏಕ್‌ ಲವ್ ಯಾ' ಸಿನಿಮಾದಲ್ಲಿ ರಾಣಾ ನಾಯಕರಾಗಿದ್ದಾರೆ. ರಕ್ಷಿತಾ ಪ್ರೇಮ್ ಸಹೋದರ ರಾಣಾಗೆ ಇದು ಮೊದಲ ಚಿತ್ರ. ಈ ಸಿನಿಮಾದಲ್ಲಿ ಇಬ್ಬರು ನಾಯಕಿಯರಿದ್ದು, ರಚಿತಾ ರಾಮ್ ಸಹ ಒಬ್ಬರು. ವಿಶೇಷ ಅಂದ್ರೆ ರಕ್ಷಿತಾ ಕೂಡ ಒಂದು ಹಾಡಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

  English summary
  Kannada Director prem's in Kashmir hunting locations for 'Ek Love Ya' movie. the movie starrer Rana brother of Rakshit prem.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X