»   » ಕೈಲಿ ಕೊಡಲಿ ಹಿಡಿದು ಬಂದ 'ಭಂ ಭಂ ಭೋಲೆನಾಥ್'

ಕೈಲಿ ಕೊಡಲಿ ಹಿಡಿದು ಬಂದ 'ಭಂ ಭಂ ಭೋಲೆನಾಥ್'

Posted By:
Subscribe to Filmibeat Kannada

ನಿರ್ದೇಶನವನ್ನ ಪಕ್ಕಕ್ಕಿಟ್ಟು ನಟನೆಯಲ್ಲೇ ಫುಲ್ ಬಿಜಿಯಾಗಿರುವ 'ಜೋಗಿ' ಪ್ರೇಮ್ ಅಭಿನಯದ 'ಡಿ.ಕೆ' ಸಿನಿಮಾ ನಾಳೆ (ಫೆ.13) ರಾಜ್ಯಾದ್ಯಂತ ರಿಲೀಸ್ ಆಗುತ್ತಿದೆ. ಡಿ.ಕೆ ಸಾಹೇಬನಾಗಿ ತೆರೆಮೇಲೆ ಖಡಕ್ ಆಗಿ ಮೆರೆದಿರುವ ಪ್ರೇಮ್, ಅದಾಗಲೇ 'ಭಂ ಭಂ ಭೋಲೆನಾಥ್' ಸಿನಿಮಾಗೆ ಗ್ರೀನ್ ಸಿಗ್ನಲ್ ಕೊಟ್ಟಿರುವ ಸುದ್ದಿ ನಿಮಗೆ ಗೊತ್ತಿದೆ.

'ಭಂ ಭಂ ಭೋಲೆನಾಥ್' ಅನ್ನುವ ಟೈಟಲ್ ನ ಅದ್ದೂರಿಯಾಗಿ ಲಾಂಚ್ ಮಾಡಿದ ಪ್ರೇಮ್, ಭೋಲೆನಾಥನಾಗುವುದಕ್ಕೆ ಸಕಲ ತಯಾರಿ ನಡೆಸಿದ್ದಾರೆ. ಪ್ರೇಮ್ ಭೋಲೆನಾಥ್ ಸ್ಟೈಲ್ ಇಲ್ಲಿದೆ ನೋಡಿ, ನಿಮ್ಮ ನೆಚ್ಚಿನ 'ಫಿಲ್ಮಿಬೀಟ್ ಕನ್ನಡ'ದಲ್ಲಿ.....

Director Prem starrer Bham Bham Bholenath first look out

'ಭಂ ಭಂ ಭೋಲೆನಾಥ್' ಅನ್ನುವ ಟೈಟಲ್ ಕೇಳಿ ಇದು 'ಜೋಗಿ' ಟೈಪ್ ಸಿನಿಮಾ ಅಂತ ಅಂದುಕೊಂಡವರ ಲೆಕ್ಕ ತಲೆಕೆಳಗಾಗುವ ಹಾಗಿದೆ 'ಭಂ ಭಂ ಭೋಲೆನಾಥ್' ಫಸ್ಟ್ ಲುಕ್.

ಖಾಕಿ ಲುಕ್ ನಲ್ಲಿ ಪ್ರೇಮ್ ಖಡಕ್ ಆಗಿ 'ಭಂ ಭಂ ಭೋಲೆನಾಥ್' ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಪೋಸ್ಟರ್ ನಲ್ಲೇ ಪೊಲೀಸ್ ಅಂತ ಅಚ್ಚಾಗಿರುವ ಕಾರಣ, ಚಿತ್ರದಲ್ಲಿ ಪ್ರೇಮ್ ಪೊಲೀಸ್ ಅನ್ನುವುದು ಪಕ್ಕಾ.

Director Prem starrer Bham Bham Bholenath first look out

ಆದ್ರೆ, ಎಲ್ಲಾ ಪೊಲೀಸರಂತಲ್ಲ ಈ ಪ್ರೇಮ್ ಸಾಹೇಬ. ಕೈಲಿ ಪಿಸೂಲ್ ಅಥವಾ ಲಾಠಿ ಇರುವ ಬದಲು, ಕೊಡಲಿ ಹಿಡಿದುಕೊಂಡಿರುವ ಪಕ್ಕಾ ಹಳ್ಳಿ ಸೊಗಡಿನ ಆರಕ್ಷಕ ಈ 'ಭೋಲೆನಾಥ'. ಈಗ ರಿಲೀಸ್ ಆಗಿರುವ ಪೋಸ್ಟರ್ ಸಾರಿ ಸಾರಿ ಹೇಳುವಂತೆ ಇದು ಅಕ್ಷನ್ ಕಮ್ ಎಂಟರ್ಟೇನಿಂಗ್ ಸಿನಿಮಾ.

ಖ್ಯಾತ ನಿರ್ದೇಶಕ ಪೂರಿ ಜಗನ್ನಾಥ್ ಜೊತೆ ಸಹಾಯಕ ನಿರ್ದೇಶಕರಾಗಿದ್ದ ನಾಗಿ ರೆಡ್ಡಿ, 'ಭಂ ಭಂ ಭೋಲೆನಾಥ್' ಚಿತ್ರದ ಮೂಲಕ ಕನ್ನಡಕ್ಕೆ ಪದಾರ್ಪಣೆ ಮಾಡುವುದರ ಜೊತೆಗೆ ಸ್ವತಂತ್ರ ನಿರ್ದೇಶಕರಾಗುತ್ತಿದ್ದಾರೆ. ಅರ್ಜುನ್ ಜನ್ಯ ಈಗಾಗಲೇ ಹಾಡುಗಳನ್ನ ರೆಡಿಮಾಡಿ ಪ್ರೇಮ್ ಕೈಗೆ ಒಪ್ಪಿಸಿದ್ದಾರಂತೆ. [ಸಂದರ್ಶನ : 'ಡಿಕೆ' ಗುಟ್ಟು ಬಿಟ್ಟುಕೊಟ್ಟ ಪ್ರೇಮ್]

Director Prem starrer Bham Bham Bholenath first look out

'ಆನೆ ಪಟಾಕಿ' ನಿರ್ಮಿಸಿದ್ದ ಸುರೇಶ್, 'ಭಂ ಭಂ ಭೋಲೆನಾಥ್' ಚಿತ್ರಕ್ಕೆ ಬಂಡವಾಳ ಹಾಕುತ್ತಿದ್ದಾರೆ. ಟ್ರೇಲರ್ ಗಂತಲೇ ಸ್ಪೆಷಲ್ ಆಗಿ ಈಗಾಗಲೇ ಶೂಟಿಂಗ್ ಕೂಡ ನಡೆದಿದೆ. ಫೆಬ್ರವರಿ 25 ಕ್ಕೆ ಚಿತ್ರದ ಮುಹೂರ್ತ ಸಮಾರಂಭ ಅದ್ದೂರಿಯಾಗಿ ನಡೆಯಲಿದ್ದು, ಅಂದೇ ಚಿತ್ರದ ಟ್ರೇಲರ್ ಕೂಡ ಲಾಂಚ್ ಆಗಲಿದೆ. (ಫಿಲ್ಮಿಬೀಟ್ ಕನ್ನಡ)

    English summary
    Director Prem starrer new movie Bham Bham Bholenath first look poster is out. Prem sizzles as Daring Police officer. Nagi Reddy is directing this movie.

    ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada