For Quick Alerts
  ALLOW NOTIFICATIONS  
  For Daily Alerts

  ಡಿಸೆಂಬರ್ 31ರ 'ಮಧ್ಯರಾತ್ರಿ' ಪ್ರೇಮ್ ಹೇಳುವುದೇನು?

  |

  ಕನ್ನಡದ ನಟ ಕಿಚ್ಚ ಸುದೀಪ್ ನಾಯಕತ್ವದ ಚಿತ್ರವೊಂದನ್ನು ತಾವು ನಿರ್ದೇಶಿಸಲಿರುವುದಾಗಿ ನಿರ್ದೇಶಕ ಪ್ರೇಮ್ ಈಗಾಗಲೇ ಹೇಳಿದ್ದಾರೆ. ಆದರೆ ಆ ಬಗ್ಗೆ ಹೆಚ್ಚು ವಿವರಗಳನ್ನು ಹೆಚ್ಚು ಬಿಟ್ಟುಕೊಟ್ಟಿರಲಿಲ್ಲ. ಈಗಲೂ ಡಿಟೇಲ್ಸ್ ಹೇಳದ ಪ್ರೇಮ್, ಆ ಬಗ್ಗೆ ಈ ವರ್ಷದ ಕೊನೆಯ ರಾತ್ರಿ, ಅಂದರೆ ಡಿಸೆಂಬರ್ 31, 2012 ರಂದು ಮಧ್ಯರಾತ್ರಿ ಘೋಷಿಸುವುದಾಗಿ ಹೇಳಿದ್ದಾರೆ.

  ಇತ್ತೀಚಿಗೆ ನಡೆದ, ಸುದೀಪ್ ಪ್ರಮುಖ ಪಾತ್ರದಲ್ಲಿ ನಟಿಸಿರುವ 'ವರದನಾಯಕ' ಆಡಿಯೋ ಬಿಡುಗಡೆ ಸಮಾರಂಭಕ್ಕೆ ಬಂದಿದ್ದ ನಟ, ನಿರ್ದೇಶಕ ಪ್ರೇಮ್ ಮಾತನಾಡಿ "ಸುದೀಪ್ ನಾಯಕತ್ವದಲ್ಲಿ ಇನ್ನಷ್ಟೇ ಹೆಸರಿಡಬೇಕಿರುವ ಎನ್ ಕುಮಾರ್ ನಿರ್ಮಾಣದಲ್ಲಿ ತಾವು ನಿರ್ದೇಶಿಸಲಿರುವ ಚಿತ್ರವನ್ನು ಕನ್ನಡ, ತಮಿಳು ಹಾಗೂ ತೆಲುಗು ಭಾಷೆಗಳಲ್ಲಿ ಏಕಕಾಲದಲ್ಲಿ ಚಿತ್ರೀಕರಣ ಮಾಡಲಾಗುವುದು. ಆ ಬಗ್ಗೆ ಹೆಚ್ಚು ವಿವರಗಳನ್ನು ಡಿಸೆಂಬರ್ 31 ರ ಮಧ್ಯರಾತ್ರಿ ಘೋಷಿಸಲಿದ್ದೇನೆ" ಎಂದಿದ್ದಾರೆ.

  "ನನ್ನ ನಿರ್ದೇಶನದ ಆ ಚಿತ್ರವು ಪಕ್ಕಾ ಸ್ವಮೇಕ್ ಕಥೆ ಹೊಂದಿದೆ. ಸ್ಕ್ರಿಪ್ಟ್ ಇನ್ನಷ್ಟೇ ಅಂತಿಮ ರೂಪ ಪಡೆದುಕೊಳ್ಳಬೇಕಿದೆ. ನನ್ನ ಚಿತ್ರಕ್ಕೆ ಸುದೀಪ್ ನಾಯಕ. ಇದಷ್ಟೇ ವಿಷಯಗಳು ಸದ್ಯಕ್ಕೆ ಪಕ್ಕಾ ಆಗಿದೆ. ಚಿತ್ರದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಡಿಸೆಂಬರ್ 31 ರ ಮಧ್ಯರಾತ್ರಿ ಕೊಡುತ್ತೇನೆ" ಎಂದಿರುವ ಪ್ರೇಮ್, ತಮ್ಮ ಗಿಮಿಕ್ ವರಸೆಯನ್ನ ಮತ್ತೊಮ್ಮೆ ತೋರಸಿದ್ದಾರೆ.

  ಪ್ರೇಮ್ ನಿರ್ದೇಶನ ಹಾಗೂ ಸುದೀಪ್ ನಾಯಕತ್ವದ ಆ ಚಿತ್ರವನ್ನು ಡಿಸೆಂಬರ್ 31, 2012 ರಂದು ಘೋಷಿಸಿದರೂ ಶೂಟಿಂಗ್ ಪ್ರಾರಂಭ ಮಾಡಲಿರುವುದು 2013ರ ಮಾರ್ಚ್ ನಂತರವಷ್ಟೇ. ಚಿತ್ರದ ಬಿಡುಗಡೆಯನ್ನು 2014 ರಲ್ಲಿ ಮಾಡಲಾಗುವುದು" ಎಂದಿದ್ದಾರೆ ಪ್ರೇಮ್. ಒಟ್ಟಿನಲ್ಲಿ, ಕನ್ನಡ ಸಿನಿಪ್ರೇಕ್ಷಕರಿಗೆ ಡಿಸೆಂಬರ್ ಮಧ್ಯರಾತ್ರಿ ಭಾರಿ ಸುದ್ದಿಯೊಂದು ದೊರಕಲಿದೆ. (ಒನ್ ಇಂಡಿಯಾ ಕನ್ನಡ)

  English summary
  In Varadanayaka Audio Release function, the Director cum Actor Prem told that he will announce New Movie on 31st December 2012, which he is going to direct for Kichcha Sudeep. 
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X