For Quick Alerts
  ALLOW NOTIFICATIONS  
  For Daily Alerts

  ಚಂದ್ರು, ಪ್ರೇಮ್ 'ಚಾರ್ ಮಿನಾರ್'ಗೆ ವಿಶೇಷ ಹಾಡು

  |

  ತಾಜ್ ಮಹಲ್ ಖ್ಯಾತಿಯ ನಿರ್ದೇಶಕ ಆರ್ ಚಂದ್ರು ಮುಂಬರುವ ತಮ್ಮ 'ಚಾರ್ ಮಿನಾರ್' ಚಿತ್ರವನ್ನು ಸಾಕಷ್ಟು ಪರಿಶ್ರಮಪಟ್ಟು ಮಾಡುತ್ತಿದ್ದಾರೆ. ಅಷ್ಟೇ ಅಲ್ಲ, ಈ ಹಿಂದೆ ಬಿಡುಗಡೆಯಾಗಿದ್ದ ತಮ್ಮ ನಿರ್ದೇಶನದ 'ಕೋಕೋ' ಚಿತ್ರದಲ್ಲಿ ಆಗಿದ್ದ ತಪ್ಪು ಮರುಕಳಿಸದಂತೆ ನೋಡಿಕೊಳ್ಳುವತ್ತ ಗಮನ ನೀಡಿದ್ದಾರೆ ಎನ್ನುತ್ತಿದೆ ಚಿತ್ರತಂಡ.

  'ತಾಜ್ ಮಹಲ್' ಸೇರಿದಂತೆ ತಮ್ಮ ನಿರ್ದೇಶನದ ಎಲ್ಲಾ ಚಿತ್ರಗಳಲ್ಲಿ ಹಾಡಿನ ಬಗ್ಗೆ ಬಹಳಷ್ಟು ಗಮನ ನೀಡಿರುವ ಚಂದ್ರು, ಚಾರ್ ಮಿನಾರ್ ಚಿತ್ರದಲ್ಲಿಯೂ ಕೂಡ ಹಾಡು ಹಾಗೂ ಅದರ ಚಿತ್ರೀಕರಣದಲ್ಲಿ ಎಲ್ಲಿಯೂ ರಾಜಿ ಮಾಡಿಕೊಂಡಿಲ್ಲವಂತೆ. ಹಾಡುಗಳ ಸಾಹಿತ್ಯ, ಸಂಗೀತ ಹಾಗೂ ಚಿತ್ರೀಕರಣಕ್ಕೆ ಭಾರೀ ಗಮನ ನೀಡಿರುವ ಚಂದ್ರು, ಈ ಬಾರಿ ವಿಶೇಷ ಸೆಟ್ ನಲ್ಲಿ ಈ ಚಿತ್ರದ ಹಾಡಿಗೆ ಚಿತ್ರೀಕರಣ ಮಾಡಿದ್ದಾರೆ.

  ಅಭಿಮಾನ್ ಸ್ಟುಡಿಯೋದಲ್ಲಿ ಹಾಕಲಾಗಿದ್ದ 30 ಲಕ್ಷಕ್ಕೂ ಅಧಿಕ ವೆಚ್ಚದ ಸೆಟ್ ನಲ್ಲಿ ಚಾರ್ ಮಿನಾರ್ ಚಿತ್ರದ ಹಾಡಿನ ಚಿತ್ರೀಕರಣ ಮಾಡಿರುವ ಚಂದ್ರು ಈ ಚಿತ್ರಕ್ಕಾಗಿ ಮಲೇಶ್ಯಾದಿಂದ ನೃತ್ಯಗಾರ ರನ್ನು ಕರೆಸಿದ್ದಾರೆ. ಮುರಳಿ ನೃತ್ಯ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಹಾಡು ಚಿತ್ರದ ನಾಯಕ ಲವ್ಲಿ ಸ್ಟಾರ್ ಪ್ರೇಮ್ ಹಾಗೂ ನಾಯಕಿ ಮೇಘನಾ ಮೇಲೆ ಚಿತ್ರೀಕರಣಗೊಂಡಿದೆ. ಈ ಹಾಡು ಚಿತ್ರದ ಹೈಲೈಟ್ಸ್ ಗಳಲ್ಲೊಂದು ಎನ್ನಲಾಗಿದೆ.

  ಈ ವಿಶೇಷ ಹಾಡಿಗಾಗಿ ಚೆನ್ನೈನಿಂದ 70 ವಯೋಲಿನ್ ವಾದಕರನ್ನು ಕರೆಸಿಕೊಳ್ಳಲಾಗಿದೆಯಂತೆ. ಈ ಹಾಡಿನ ಚಿತ್ರೀಕರಣದೊಂದಿಗೆ ಚಿತ್ರದ ಬಹುತೇಕ ಶೂಟಿಂಗ್ ಪೂರ್ಣಗೊಂಡಿದ್ದು, ಸದ್ಯದಲ್ಲೇ ಆಡಿಯೋ ಬಿಡುಗಡೆಗೆ ದಿನಾಂಕ ನಿಗದಿ ಆಗಲಿದೆಯಂತೆ. ಚಾರ್ ಮಿನಾರ್ ಚಿತ್ರದ ಮೂಲಕ ನಿರ್ದೇಶಕ ಆರ್.ಚಂದ್ರು ನಿರ್ಮಾಪಕರೂ ಆಗಿದ್ದಾರೆ. ಚಿತ್ರಕ್ಕೆ ಕೆಎಸ್ ಚಂದ್ರಶೇಖರ್ ಛಾಯಾಗ್ರಹಣ, ಹರಿ ಸಂಗೀತ, ಕೆ.ಎಂ.ಪ್ರಕಾಶ್ ಸಂಕಲನ ಚಿತ್ರಕ್ಕಿದೆ. (ಒನ್ ಇಂಡಿಯಾ ಕನ್ನಡ)

  English summary
  There is Special Song Shooting done for director R Chandru's upcoming movie 'Char Minor'. Lovely Star Prem and Meghana are in the lead role of this movie and shooting almost completed for this movie. 
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X