»   » ರವಿಚಂದ್ರನ್ ಅವರಿಗೆ ಗೌರವ ಡಾಕ್ಟರೇಟ್ ಇನ್ನೂ ಸಿಕ್ಕಿಲ್ಲ. ಇದು ಸರೀನಾ ?

ರವಿಚಂದ್ರನ್ ಅವರಿಗೆ ಗೌರವ ಡಾಕ್ಟರೇಟ್ ಇನ್ನೂ ಸಿಕ್ಕಿಲ್ಲ. ಇದು ಸರೀನಾ ?

Posted By:
Subscribe to Filmibeat Kannada
ರವಿಚಂದ್ರನ್ ಅವರಿಗೆ ಗೌರವ ಡಾಕ್ಟರೇಟ್ ಇನ್ನೂ ಸಿಕ್ಕಿಲ್ಲವೇಕೆ ? | Filmibeat Kannada

ಗೌರವ ಡಾಕ್ಟರೇಟ್ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಮಹನೀಯ ವ್ಯಕ್ತಿಗಳನ್ನು ಗುರುತಿಸಿ ನೀಡಿದ ಪ್ರಶಸ್ತಿ. ಇನ್ನು ಭಾರತ ಚಿತ್ರರಂಗದಲ್ಲಿಯೇ ವರನಟ ಡಾ.ರಾಜ್ ಕುಮಾರ್ ಡಾಕ್ಟರೇಟ್ ಸ್ವೀಕರಿಸಿದ ಮೊದಲ ನಟನಾಗಿದ್ದಾರೆ. ಆ ನಂತರ ಕನ್ನಡದಲ್ಲಿ ನಟ ವಿಷ್ಣುವರ್ಧನ್, ಪಾರ್ವತಮ್ಮ ರಾಜ್ ಕುಮಾರ್, ಶಿವರಾಜ್ ಕುಮಾರ್, ಅಂಬರೀಶ್, ಉಪೇಂದ್ರ ಅವರು ಸಹ ಡಾಕ್ಟರೇಟ್ ಪಡೆದ ಪ್ರಮುಖರಾಗಿದ್ದಾರೆ.

ಆದರೆ ಈಗ ನಟ ಕ್ರೇಜಿಸ್ಟಾರ್ ರವಿಚಂದ್ರನ್ ಅವರಿಗೆ ಕೂಡ ಗೌರವ ಡಾಕ್ಟರೇಟ್ ನೀಡಬೇಕು ಎನ್ನುವ ಚರ್ಚೆ ಶುರುವಾಗಿದೆ. ರಾಷ್ಟ್ರಮಟ್ಟದಲ್ಲಿ ಕನ್ನಡ ಚಿತ್ರರಂಗವನ್ನು ಶ್ರೀಮಂತವಾಗಿಸಲು ಕಾರಣವಾದ ರವಿಚಂದ್ರನ್ ಅವರಿಗೆ ಡಾಕ್ಟರೇಟ್ ಯಾಕೆ ಸಿಕ್ಕಿಲ್ಲ ಎಂದು ಕನ್ನಡದ ಖ್ಯಾತ ನಿರ್ದೇಶಕ ಈ ಪ್ರಶ್ನೆಯನ್ನು ಮಾಡಿದ್ದಾರೆ. ಅವರ ಪ್ರಶ್ನೆಗೆ ಅನೇಕ ರವಿಚಂದ್ರನ್ ಅಭಿಮಾನಿಗಳು ಸಹ ಸಾಥ್ ನೀಡಿದ್ದಾರೆ. ಮುಂದೆ ಓದಿ..

ನಿರ್ದೇಶಕ ರಘುರಾಮ್ ಪ್ರಶ್ನೆ

ಸ್ಯಾಂಡಲ್ ವುಡ್ ನಿರ್ದೇಶಕ ರಘುರಾಮ್ ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಒಂದು ಪೋಸ್ಟ್ ಹಾಕಿದ್ದು, ಅದರಲ್ಲಿ ನಟ ರವಿಚಂದ್ರನ್ ಅವರಿಗೆ ಗೌರವ ಡಾಕ್ಟರೇಟ್ ಇನ್ನೂ ಸಿಕ್ಕಿಲ್ಲ ಇದು ಸರೀನಾ ? ಎಂದು ಪ್ರಶ್ನೆ ಮಾಡಿದ್ದಾರೆ.

ತಪ್ಪಿದ್ದರೆ ಕ್ಷಮಿಸಿ

''ಕನ್ನಡ ಚಿತ್ರರಂಗಕ್ಕೆ ಅದ್ದೂರಿತನವನ್ನು ತಂದುಕೊಟ್ಟು ಆಡಿಯೋ ಬೆಲೆಯನ್ನು ಸೃಷ್ಟಿಸಿ. ಪರಭಾಷಾ ನಟ ನಟಿಯರನ್ನು ಕನ್ನಡಕ್ಕೆ ಪರಿಚಯಿಸಿ, ರಾಷ್ಟ್ರಮಟ್ಟದಲ್ಲಿ ಕನ್ನಡ ಚಿತ್ರರಂಗವನ್ನು ಶ್ರೀಮಂತವಾಗಿಸಲು ಕಾರಣವಾದ ಹಲವರಲ್ಲಿ ಪ್ರಮುಖರಾದ ರವಿಚಂದ್ರನ್ ಅವರಿಗೆ ಡಾಕ್ಟರೇಟ್ ಗೌರವ ಸಿಕ್ಕಿಲ್ಲ. ಇದು ಸರಿಯಾ?'' ಎಂದು ರಘುರಾಮ್ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ದೊಡ್ಡ ಪ್ರತಿಕ್ರಿಯೆ ಸಿಕ್ಕಿದೆ

ರಘುರಾಮ್ ಅವರ ಈ ಪೋಸ್ಟ್ ಗೆ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ದೊಡ್ಡ ಪ್ರತಿಕ್ರಿಯೆ ಸಿಕ್ಕಿದೆ. ಅವರ ಆ ಪೋಸ್ಟ್ ನೋಡಿದ ಅನೇಕರು ಕಮೆಂಟ್ ಮಾಡಿ ರಘುರಾಮ್ ಹೇಳಿಕೆಗೆ ಸಮ್ಮಿತಿ ಸೂಚಿಸಿದ್ದಾರೆ. 120 ಹೆಚ್ಚು ಜನರು ಅವರ ಬರಹವನ್ನು ಶೇರ್ ಮಾಡಿದ್ದಾರೆ.

ರವಿಚಂದ್ರನ್ ಅಭಿಮಾನಿ

ನಿರ್ದೇಶಕ ರಘುರಾಮ್ ಚಿಕ್ಕವಯಸ್ಸಿನಿಂದ ರವಿಚಂದ್ರನ್ ಅವರ ದೊಡ್ಡ ಅಭಿಮಾನಿಯಾಗಿದ್ದು, ಅದೇ ರೀತಿ ಸಿನಿಮಾರಂಗಕ್ಕೆ ಬಂದರು. 'ಚಲುವೆ ನಿನ್ನೆ ನೋಡಲು' ಚಿತ್ರವನ್ನು ಶಿವಣ್ಣನಿಗೆ ನಿರ್ದೇಶನ ಮಾಡಿದ್ದರು. ಸದ್ಯ ರಘುರಾಮ್ ನಿರ್ದೇಶನದಲ್ಲಿ 'ಮಿಸ್ಸಿಂಗ್ ಬಾಯ್' ಸಿನಿಮಾ ಬರುತ್ತಿದೆ.

ಮೊದಲು ಡಾಕ್ಟರೇಟ್ ಪಡೆದಿದ್ದು ರಾಜ್ ಕುಮಾರ್

ಇಡೀ ಭಾರತೀಯ ಚಿತ್ರರಂಗದಲ್ಲಿ ನಟ ರಾಜ್ ಕುಮಾರ್ ಗೌರವ ಡಾಕ್ಟರೇಟ್ ಪಡೆದ ಮೊದಲ ನಟನಾಗಿದ್ದಾರೆ. ಅವರಿಗೆ ಮೈಸೂರು ವಿಶ್ವವಿದ್ಯಾನಿಲಯ 1976 ರಲ್ಲಿ ಡಾಕ್ಟರೇಟ್ ನೀಡಿ ಗೌರವಿಸಿತ್ತು.

'ಆಪ್ತಮಿತ್ರ 2' ಚಿತ್ರಕ್ಕೆ ಕ್ರೇಜಿ ಸ್ಟಾರ್ ರವಿಚಂದ್ರನ್ ಹೀರೋ!

'ಕಾಮಿಡಿ ಕಿಲಾಡಿಗಳು' ವೇದಿಕೆಗೆ ಬಂದ ಕ್ರೇಜಿಸ್ಟಾರ್ ರವಿಚಂದ್ರನ್

English summary
Kannada director Raghu Ram wants V.Ravichandran to get honorary doctorate.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada