For Quick Alerts
  ALLOW NOTIFICATIONS  
  For Daily Alerts

  'ವಿಷ್ಣುವರ್ಧನ್ ಅವರ ಸ್ಥಾನ ತುಂಬಿದ ನಟ ಸುದೀಪ್' ಅಂದಿದ್ದು ಯಾರು?

  By Bharath Kumar
  |
  Sudeep is a re-place actor for Dr. Vishnuvardhan Sir, says kannada director Ravi Sri vatsa

  ಸಾಹಸ ಸಿಂಹ ಡಾ.ವಿಷ್ಣುವರ್ಧನ್ ಅವರ ನಂತರ ಕಿಚ್ಚ ಸುದೀಪ್ ಅವರಲ್ಲಿ ವಿಷ್ಣುವರ್ಧನ್ ಅವರನ್ನ ನೋಡುತ್ತೀವಿ ಎಂದು ಹಲವು ಅಭಿಮಾನಿಗಳು ಹೇಳಿರುವ ಉದಾಹರಣೆ ಉಂಟು. ಇದೀಗ, ಕನ್ನಡದ ಖ್ಯಾತ ನಿರ್ದೇಶಕರೊಬ್ಬರು ಕೂಡ ಇದೇ ಮಾತನ್ನ ಹೇಳಿದ್ದಾರೆ.

  ಹೌದು, ಕನ್ನಡದ ಖ್ಯಾತ ಸಂಭಾಷಣೆಕಾರ, ನಿರ್ದೇಶಕ ರವಿ ಶ್ರೀವತ್ಸ ಅವರು ಸಂದರ್ಶನವೊಂದರಲ್ಲಿ ಮಾತನಾಡುವಾಗ, ''ವಿಷ್ಣುವರ್ಧನ್ ಸರ್ ಅವರನ್ನ ರಿ-ಪ್ಲೇಸ್ ಮಾಡಿದ ನಟ ಅಂದ್ರೆ ಸುದೀಪ್'' ಎಂದು ಕಿಚ್ಚನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮುಂದೆ ಓದಿ....

  ಸುದೀಪ್ ಬಗ್ಗೆ ಶ್ರೀವತ್ಸ ಹೇಳಿದ್ದೇನು?

  ಸುದೀಪ್ ಬಗ್ಗೆ ಶ್ರೀವತ್ಸ ಹೇಳಿದ್ದೇನು?

  ''ವಿಷ್ಣುವರ್ಧನ್ ಸರ್ ಅವರ ರಿ-ಪ್ಲೇಸ್ ಅಂದ್ರೆ ಸುದೀಪ್. ವಿಷ್ಣು ಸರ್ ಜೊತೆ 9 ವರ್ಷ ಕೆಲಸ ಮಾಡಿದ್ದೆ, ಸುದೀಪ್ ಜೊತೆ ಸುಮಾರು 15 ವರ್ಷ ಪ್ರಯಾಣ ಮಾಡಿದ್ದೀನಿ'' - ಶ್ರೀವತ್ಸ, ನಿರ್ದೇಶಕ

  'ಕಿಚ್ಚ' ಚಿತ್ರದ ವೇಳೆ ಸುದೀಪ್ ಪರಿಚಯ

  'ಕಿಚ್ಚ' ಚಿತ್ರದ ವೇಳೆ ಸುದೀಪ್ ಪರಿಚಯ

  ''ಸುದೀಪ್ ಪರಿಚಯವಾಗಿದ್ದು 'ಕಿಚ್ಚ' ಚಿತ್ರದಲ್ಲಿ. ನಾನು ಈ ಚಿತ್ರಕ್ಕೆ ಸಂಭಾಷಣೆ ಬರೆಯುತ್ತಿದ್ದೆ. ನಮ್ಮ ಮೊದಲ ಪರಿಚಯ ಜಗಳದಲ್ಲೇ ಶುರುವಾಯಿತು. ಸ್ಕ್ರಿಪ್ಟ್ ವಿಚಾರಕ್ಕೆ. ನಂತರ ದಿನ ಕಳೆದಂತೆ ಉತ್ತಮ ಸ್ನೇಹಿತರಾದೆವು. ಈಗ ನಮ್ಮಿಬ್ಬರ ಮಧ್ಯೆ ಉತ್ತಮ ಬಾಂಧವ್ಯವಿದೆ'' - ಶ್ರೀವತ್ಸ, ನಿರ್ದೇಶಕ

  ವಿಷ್ಣು ಸರ್ ಜೊತೆ ಕೆಲಸ ಮಾಡಿದ ಅನುಭವ

  ವಿಷ್ಣು ಸರ್ ಜೊತೆ ಕೆಲಸ ಮಾಡಿದ ಅನುಭವ

  ''9 ವರ್ಷಗಳ ಕಾಲ ವಿಷ್ಣು ಸರ್ ಜೊತೆಯಲ್ಲಿ ಕೆಲಸ ಮಾಡಿದ್ದೀನಿ. 'ಯಜಮಾನ', 'ಕೋಟಿಗೊಬ್ಬ', 'ಹಲೋ ಡ್ಯಾಡಿ', 'ಕರ್ನಾಟಕ ಸುಪುತ್ರ' ಹೀಗೆ ಹಲವು ಚಿತ್ರಗಳಿಗೆ ಡೈಲಾಗ್ ಬರೆಯುವ ಅವಕಾಶ ಸಿಕ್ತು'' - ಶ್ರೀವತ್ಸ, ನಿರ್ದೇಶಕ

  ''ಉಪೇಂದ್ರ ನನ್ನ ಗುರಿ, ವಿಷ್ಣು ಸರ್ ನನ್ನ ಗುರು''

  ''ಉಪೇಂದ್ರ ನನ್ನ ಗುರಿ, ವಿಷ್ಣು ಸರ್ ನನ್ನ ಗುರು''

  ಇದೇ ಸಂದರ್ಶನಲ್ಲಿ ಮಾತನಾಡುವಾಗ ಉಪೇಂದ್ರ ಅವರ ಬಗ್ಗೆ ಮೆಚ್ಚುಗೆಯ ಮಾತನಾಡುತ್ತಾರೆ. ಉಪೇಂದ್ರ ಮತ್ತು ವಿಷ್ಣು ಸರ್ ಇಬ್ಬರು ಒಂದೇ ವೇದಿಕೆಯಲ್ಲಿದ್ದಾಗ ''ಉಪೇಂದ್ರ ನನ್ನ ಗುರಿ, ವಿಷ್ಣು ಸರ್ ನನ್ನ ಗುರು'' ಎಂದು ಬಹಳ ಹೆಮ್ಮೆಯಿಂದ ಹೇಳಿದ್ದೆ'' - ಶ್ರೀವತ್ಸ, ನಿರ್ದೇಶಕ

  ರವಿ ಶ್ರೀವತ್ಸ ಅವರು ಸಂದರ್ಶನ ನೋಡಲು ಈ ಲಿಂಕ್ ಕ್ಲಿಕ್ ಮಾಡಿ

  English summary
  Director Ravi Srivatsa speaks about Kannada Actor, Kiccha Sudeep in a recent interview.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X