For Quick Alerts
  ALLOW NOTIFICATIONS  
  For Daily Alerts

  ತೆಲುಗು ಚಿತ್ರರಂಗಕ್ಕೆ ಗುಡ್ ಬೈ ಹೇಳ್ತಾರಂತೆ 'ದಿ ಗ್ರೇಟ್' ವರ್ಮಾ

  By Suneetha
  |

  ತೆಲುಗಿನ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರು ಇನ್ನೇನು ಸದ್ಯದಲ್ಲಿಯೇ ಟಾಲಿವುಡ್ ಕ್ಷೇತ್ರಕ್ಕೆ ಟಾಟಾ ಬಾಯ್ ಬಾಯ್ ಹೇಳ್ತಾರಂತೆ. ತೆಲುಗಿನಲ್ಲಿ 'ವಂಗವೀಟಿ' ಸಿನಿಮಾ ನನ್ನ ಕೊನೆಯ ಸಿನಿಮಾ ಆಗಲಿದೆ. ತದನಂತರ ನಾನು ತೆಲುಗು ಚಿತ್ರರಂಗಕ್ಕೆ ಗುಡ್ ಬೈ ಹೇಳುತ್ತೇನೆ ಎಂದು ಖುದ್ದು ಆರ್.ಜಿ.ವಿ ಘೋಷಿಸಿದ್ದಾರೆ.

  ತೆಲುಗಿನ 'ವಂಗವೀಟಿ' ಚಿತ್ರ ನೈಜ ಕಥೆಯನ್ನಾಧರಿಸಿದ್ದು, 1980ರ ದಶಕದಲ್ಲಿ ವಿಜಯವಾಡದಲ್ಲಿ ಉದ್ಭವಿಸಿದ ರೌಡಿಸಂ ಕುರಿತಾಗಿರುವ ರೋಚಕ ಕಥೆಯನ್ನು ಹೊಂದಿದೆಯಂತೆ.['ಅಂಡರ್ ವರ್ಲ್ಡ್ ಡಾನ್' ಗಳ ಬೆನ್ನತ್ತಿದ ನಿರ್ದೇಶಕ ಆರ್.ಜಿ.ವಿ]

  'ವಂಗವೀಟಿ' ಸಿನಿಮಾದ ಕಥೆ ಎಷ್ಟು ನೈಜತೆಯಿಂದ ಕೂಡಿದೆ ಎಂದರೆ, ತೆಲುಗಿನಲ್ಲಿ ಸಿನಿಮಾ ಮಾಡುವುದಕ್ಕೆ ಇದಕ್ಕಿಂತಲೂ ಅತ್ಯುತ್ತಮ ಕಥೆಯನ್ನು ನನಗೆ ಚಿಂತಿಸಲು ಸಾಧ್ಯವಿಲ್ಲ. ಈ ಅದ್ಭುತ ಸಿನಿಮಾದಿಂದಲೇ ನನ್ನ ತೆಲುಗು ಚಿತ್ರರಂಗದ ದೀರ್ಘ ಕಾಲದ ಜರ್ನಿಯನ್ನು ಮುಗಿಸಬೇಕೆಂದುಕೊಂಡಿದ್ದೇನೆ. ಆದ್ದರಿಂದ 'ವಂಗವೀಟಿ' ತೆಲುಗಿನಲ್ಲಿ ನನ್ನ ಕೊನೆಯ ಚಿತ್ರವಾಗಲಿದೆ' ಎಂದು ಸ್ವತಃ ವರ್ಮಾ ಅವರೇ ಹೇಳಿಕೆ ನೀಡಿದ್ದಾರೆ.[ಹಾಲಿವುಡ್ ನಲ್ಲೂ 'ವೀರಪ್ಪನ್' ಹವಾ ಶುರು ಮಾಡ್ತಾರಂತೆ ವರ್ಮಾ]

  ವಿಜಯವಾಡದ ರೌಡಿಸಂ ಸುತ್ತ ಸುತ್ತುವ ಸಿನಿಮಾದ ಕಥೆ, ಚಲಸಾನಿ ವೆಂಕಟರತ್ನಂನನ್ನು 'ವಂಗವೀಟಿ' ರಾಧ ಕೊಲ್ಲುವುದರೊಂದಿಗೆ ಪ್ರಾರಂಭವಾಗಿ, ವಂಗವೀಟಿ ರಂಗನ ಸಾವಿನೊಂದಿಗೆ ಹೇಗೆ ಎಲ್ಲವೂ ಅಂತ್ಯವಾಗುತ್ತದೆ ಎಂಬುದನ್ನು ಕಥೆ ಒಳಗೊಂಡಿದೆ.

  ಇನ್ನು ನಿರ್ದೇಶಕ ವರ್ಮಾ ಅವರು ವಿಜಯವಾಡದಲ್ಲಿ ತಾವು ಬೆಳೆಯುತ್ತಿದ್ದ ಸಂದರ್ಭದಲ್ಲಿ ಅವರ ಅನುಭವವನ್ನೇ ಕಥೆಯ ಹೆಚ್ಚಿನ ಭಾಗವಾಗಿ ಆಯ್ದುಕೊಂಡಿದ್ದಾರಂತೆ.[ರಾಮ್‌ಗೋಪಾಲ್ ವರ್ಮಾ ಹೇಳಿದ ವೀರಪ್ಪನ್ ಸಾವಿನ ಕತೆ]

  ಒಟ್ನಲ್ಲಿ 'ಕಿಲ್ಲಿಂಗ್ ವೀರಪ್ಪನ್' ಮೂಲಕ ಕನ್ನಡಕ್ಕೂ ಪಾದಾರ್ಪಣೆ ಮಾಡಿದ್ದ ನಿರ್ದೇಶಕ ವರ್ಮಾ ಅವರು ಸದ್ಯಕ್ಕೆ ತೆಲುಗು ಕ್ಷೇತ್ರದಿಂದ ನಿವೃತ್ತಿ ತೆಗೆದುಕೊಂಡು ಬಾಲಿವುಡ್ ನಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವ ಆಲೋಚನೆ ಮಾಡಿದ್ದಾರೆ.

  English summary
  Maverick filmmaker Ram Gopal Varma has announced that he will bid adieu to Telugu filmdom with upcoming crime drama Vangaveeti, about the evolution of rowdyism in the 1980s in Vijayawada

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X