»   » 16 ವರ್ಷಗಳ ನಂತರ ಎಸ್ ನಾರಾಯಣ್ ನಿರ್ದೇಶನದಲ್ಲಿ ರವಿಮಾಮ

16 ವರ್ಷಗಳ ನಂತರ ಎಸ್ ನಾರಾಯಣ್ ನಿರ್ದೇಶನದಲ್ಲಿ ರವಿಮಾಮ

Posted By: ಸೋನು
Subscribe to Filmibeat Kannada

ಸ್ಯಾಂಡಲ್ ವುಡ್ ನಲ್ಲಿ ಒಂದು ಕಾಲದಲ್ಲಿ ಲವರ್ ಬಾಯ್ ಆಗಿ ಕ್ರೇಜಿ ಸ್ಟಾರ್ ಅಂತಾನೇ ಫೇಮಸ್ ಆಗಿದ್ದ ನಟ ರವಿಚಂದ್ರನ್ ಅವರು ಇತ್ತೀಚೆಗೆ ತಂದೆಯ ಪಾತ್ರಗಳನ್ನು ಮಾಡುವ ಮೂಲಕ ಮತ್ತೆ ಮರುಹುಟ್ಟು ಪಡೆದುಕೊಂಡವರು.

ಇದೀಗ ನಿರ್ದೇಶಕ-ನಟ ಎಸ್ ನಾರಾಯಣ್ ಅವರು ಕ್ರೇಜಿಸ್ಟಾರ್ ರವಿಚಂದ್ರನ್ ಅವರಿಗೆ ಆಕ್ಷನ್-ಕಟ್ ಹೇಳಲಿದ್ದಾರೆ. ಇನ್ನೊಂದು ವಿಶೇಷವೆಂದರೆ ನಿರ್ದೇಶಕ ಎಸ್ ನಾರಾಯಣ್ ಹಾಗೂ ನಟ ರವಿಚಂದ್ರನ್ ಅವರು ಸುಮಾರು 16 ವರ್ಷಗಳ ನಂತರ ಮತ್ತೆ ಒಂದಾಗಿ ಕೆಲಸ ಮಾಡಲು ನಿರ್ಧರಿಸಿದ್ದು, ಇವರಿಬ್ಬರ ಜುಗಲ್ ಬಂದಿಯಲ್ಲಿ ಪ್ರೇಕ್ಷಕರಿಗೆ ಮತ್ತೊಮ್ಮೆ ಎಂರ್ಟಟೈನ್ ಗ್ಯಾರಂಟಿ.

Director S Narayan to direct Ravichandran after 16 years

ಇನ್ನು ಈಗಲೂ ನಾಯಕ ನಟನ ಪಾತ್ರಗಳನ್ನು ಮಾಡಲು ಅವಕಾಶ ಪಡೆಯುವಲ್ಲಿ ಮುಂಚೂಣಿ ಸ್ಥಾನದಲ್ಲಿರುವ ನಟ ರವಿಚಂದ್ರನ್ ಅವರ ಹುಮ್ಮಸ್ಸು ಹಾಗು ಖದರ್ ಗೆ ನಾವು ಮೆಚ್ಚಲೇಬೇಕು.

ವಿಜಯವಾಡ ಮೂಲದ ನಿರ್ಮಾಪಕ ಸುಬ್ರಮಣಿಯನ್ ಅವರು ಸಿನಿಮಾಕ್ಕೆ ಕಥೆ ಸಿದ್ದಪಡಿಸಿದ್ದು, ಸೋಮವಾರದಂದು ಚಿತ್ರಕ್ಕೆ ಮುಹೂರ್ತ ನೆರವೇರಿದೆ. ಸಿನಿಮಾಕ್ಕೆ ಇನ್ನು ಹೆಸರಿಡಬೇಕಿದ್ದು, ನವೆಂಬರ್ 3 ಅಥವಾ 4 ರಂದು ಚಿತ್ರೀಕರಣ ಆರಂಭವಾಗಲಿದೆ.

ಇನ್ನು ಹೆಸರಿಡದ ಚಿತ್ರದಲ್ಲಿ ನಟ ಕ್ರೇಜಿಸ್ಟಾರ್ ರವಿಚಂದ್ರನ್ ಅವರಿಗೆ ವಿಶೇಷ ಹಾಗೂ ವಿಶಿಷ್ಟ ಪಾತ್ರವಿದೆ. ಇನ್ನುಳಿದಂತೆ ಚಿತ್ರಕ್ಕೆ ಇನ್ನು ಹೆಚ್ಚಿನ ನಟ-ನಟಿಯರ ಆಯ್ಕೆ ಪ್ರಕ್ರಿಯೆ ಪ್ರಾರಂಭವಾಗಿದೆ ಎಂದು ನಿರ್ದೇಶಕ ಎಸ್.ನಾರಾಯಣ್ ಅವರು ಹೇಳಿದ್ದಾರೆ.

Director S Narayan to direct Ravichandran after 16 years

ನಟ ರವಿಚಂದ್ರನ್ ಅವರು ಈ ಚಿತ್ರದಲ್ಲಿ ಮಾಡುವ ರೋಲ್ ಬಹಳ ಮುಖ್ಯ ಪಾತ್ರ ವಹಿಸುತ್ತದೆ. ಅವರ ಸಿನಿ ಕೆರಿಯರ್ ನಲ್ಲಿ ಇಲ್ಲಿಯವರೆಗೆ ಮಾಡದ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. 'ರವಿಮಾಮ' ಚಿತ್ರದ ನಂತರ ರವಿಚಂದ್ರನ್ ಅವರೊಂದಿಗೆ ಮತ್ತೊಮ್ಮೆ ಕೆಲಸ ಮಾಡಲು ಅವಕಾಶ ಸಿಕ್ಕಿರುವುದಕ್ಕೆ ನನಗೆ ತುಂಬಾ ಸಂತೋಷವಾಗುತ್ತಿದೆ ಎಂದು ನಿರ್ದೇಶಕ ಎಸ್.ನಾರಾಯಣ್ ನುಡಿದಿದ್ದಾರೆ.[ನಿರ್ದೇಶಕ ಎಸ್.ನಾರಾಯಣ್ ಮುಂದಿನ ಚಿತ್ರ ಯಾವ್ದು?]

ಸದ್ಯಕ್ಕೆ ನಟ ರವಿಚಂದ್ರನ್ ಅವರು ತಾವೇ ನಿರ್ದೇಶಿಸಿ ನಟಿಸುತ್ತಿರುವ 'ಅಪೂರ್ವ' ಚಿತ್ರ ಕೊನೆಯ ಹಂತದಲ್ಲಿದೆ. ಇದೀಗ ಮಾಹಿತಿ ಪ್ರಕಾರ ಆದಷ್ಟು ಬೇಗನೇ ನಟ ರವಿಚಂದ್ರನ್ ಅವರು ಎಸ್‌ ನಾರಾಯಣ್ ಅವರ ಚಿತ್ರತಂಡವನ್ನು ಸೇರಿಕೊಳ್ಳಲಿದ್ದಾರೆ.

English summary
Kannada Actor Ravichandran is enjoying being in front of the camera. As luck would have it, he has bagged numerous projects where he can experiment with his roles. While he is busy with his directorial Apoorva as an actor, he has a line-up of projects where he is making his presence felt in important roles.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada